ತಮಿಳು ಸಿನಿಮಾದಲ್ಲಿ ಶಿವಣ್ಣ…. ‘Tourist Family’ ನಿರ್ದೇಶಕ ಅಭಿಶನ್ ಜೊತೆ ಹ್ಯಾಟ್ರಿಕ್ ಹೀರೊ

Published : Jun 01, 2026, 06:42 PM IST

Dr Shivarajkumar: ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ಸಿನಿಮಾ ‘ಟೂರಿಸ್ಟ್ ಫ್ಯಾಮಿಲಿ’ಯ ಯುವ ನಿರ್ದೇಶಕ ಅಭಿಶನ್ ಜೀವಿಂತ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. 

PREV
16
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್

ಕನ್ನಡ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತೆಲುಗಿನಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟ ಈಗ ಹೊಸ ತಮಿಳು ಸಿನಿಮಾದಲ್ಲೂ ನಟಿಸಲು ರೆಡಿಯಾಗಿದ್ದಾರೆ.

26
ಟೂರಿಸ್ಟ್ ಫ್ಯಾಮಿಲಿ ನಿರ್ದೇಶಕನ ಜೊತೆ ಶಿವಣ್ಣ ನಟನೆ

ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾದ ನಿರ್ದೇಶಕ ಹಾಗೂ ವಿತ್ ಲವ್ ನಟ ಅಭಿಶನ್ ಜೀವಿಂತ್ ನಟಿಸಲಿರುವ ಮುಂದಿನ ಸಿನಿಮಾದಲ್ಲಿ ಶಿವಣ್ಣ ನಟಿಸಲಿದ್ದಾರೆ. ಇದೀಗ ಸಿನಿಮಾ ಲಾಂಚ್ ಆಗಿದ್ದು. ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

36
ಗೌತಮ್ ಶಿವರಾಮನ್ ನಿರ್ದೇಶನ

ಅಭಿಶನ್ ಈ ಬಾರಿ ನಿರ್ದೇಶನ ಮಾಡುತ್ತಿಲ್ಲ, ಬದಲಾಗಿ ನಾಯಕನಾಗಿ ನಟಿಸುತ್ತಿದ್ದು, ಚಿತ್ರವನ್ನು ಗೌತಮ್ ಶಿವರಾಮನ್ ನಿರ್ದೇಶನ ಮಾಡುತ್ತಿದ್ದಾರೆ. ಡ್ರಾಮಾ ಕಂಪನಿ ನಿರ್ಮಾಣ ಮಾಡುತ್ತಿದ್ದು, ನಿರ್ದೇಶಕರಿಗೂ, ನಿರ್ಮಾಪಕರಿಗೂ ಇದು ಮೊದಲನೆ ಸಿನಿಮಾ ಆಗಿದೆ.

46
ಅಪ್ಪನ ಪಾತ್ರ ಮಾಡ್ತಿದ್ದಾರೆ ಶಿವಣ್ಣ

ಇನ್ನೂ ಹೆಸರಿಡದ ಈ ತಮಿಳು ಸಿನಿಮಾದಲ್ಲಿ ಶಿವಣ್ಣ ತಂದೆಯಾಗಿ ಹಾಗೂ ಅಭಿಶಾನ್ ಮಗನಾಗಿ ನಟಿಸುತ್ತಿದ್ದಾರೆ. ಇದು ತಂದೆ -ಮಗನ ಭಾಂದವ್ಯದ ಕಥೆಯನ್ನು ತಿಳಿಸುವ ಸಿನಿಮಾ ಆಗಿದೆ. ಆ ಮೂಲಕ ಮತ್ತೆ ತಮಿಳು ಚಿತ್ರರಂಗದಲ್ಲಿ ಮಿಂಚಲಿದ್ದಾರೆ ಶಿವಣ್ಣ.

56
ಯೋಗಲಕ್ಷ್ಮೀ ನಾಯಕಿ

ಈ ಚಿತ್ರದಲ್ಲಿ ಟೂರಿಸ್ಟ್ ಫ್ಯಾಮಿಲಿ ಚಿತ್ರದಲ್ಲಿ ನಟಿಸಿದ್ದ ಯೋಗಲಕ್ಷ್ಮಿ ಮತ್ತು ಶಿವಾನಿ ನಗರಂ ನಾಯಕಿಯರಾಗಿ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಲಿಯಾನ್ ಜೇಮ್ಸ್ ಈ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಶೂಟಿಂಗ್ ಶೀಘ್ರದಲ್ಲೆ ಶುರುವಾಗಲಿದೆ.

66
ಪರಭಾಷೆಯ ಚಿತ್ರದಲ್ಲಿ ಶಿವಣ್ಣ ಮಿಂಚಿಂಗ್

ಶಿವಣ್ಣ ಪರಭಾಷೆಯ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಅವರಿಗೆ ಪವರ್ ಫುಲ್ ರೋಲ್ ಗಳೆ ಸಿಗುತ್ತಿವೆ. ಜೈಲರ್, ಜೈಲರ್ 2, ಕ್ಯಾಪ್ಟನ್ ಮಿಲ್ಲರ್ ಸಿನಿಮಾಗಳಲ್ಲಿ ಶಿವಣ್ಣ ನಟಿಸಿದ್ದು, ಇದು ಅವರು ನಟಿಸುತ್ತಿರುವ ನಾಲ್ಕನೇ ತಮಿಳು ಸಿನಿಮಾ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories