ಶಿಲ್ಪಾ ಶೆಟ್ಟಿ-ದಿಶಾ ಪಟಾನಿವರೆಗೆ ಟಿಕ್‌ಟಾಕ್‌ನಲ್ಲಿ ಫೇಮಸ್‌ ಆಗಿರೋ ಸೆಲೆಬ್ರೆಟಿಗಳು

First Published | Jul 1, 2020, 6:51 PM IST

ಚೀನಾದೊಂದಿಗೆ ಹೆಚ್ಚುತ್ತಿರುವ ವಿವಾದದ ಮಧ್ಯೆ 59 ಚೀನಾ ಆ್ಯಪ್‌ಗಳನ್ನು ಭಾರತ ಸರ್ಕಾರ ಸೋಮವಾರ ನಿಷೇಧಿಸಿದೆ. ಟಿಕ್‌ಟಾಕ್ ಸೇರಿ ಹಲವು ದೊಡ್ಡ ಹಾಗೂ ಫೇಮಸ್‌ ಆ್ಯಪ್‌ಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ. ಅಂದ ಹಾಗೆ, ಟಿಕ್‌ಟಾಕ್ ಸಾಮಾನ್ಯ ಮತ್ತು ಬಾಲಿವುಡ್ ಖ್ಯಾತನಾಮರಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಶಿಲ್ಪಾ ಶೆಟ್ಟಿಯಿಂದ ಹಿಡಿದು, ಟೈಗರ್ ಶ್ರಾಫ್ ಹಾಗೂ ಅವನ ಗೆಳತಿ ದಿಶಾ ಪಟಾನಿ ಅವರಂತಹ ಸೆಲೆಬ್ರೆಟಿಗಳೂ ಟಿಕ್‌ಟಾಕ್‌ನಲ್ಲಿ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಟಿಕ್‌ಟಾಕ್‌ನ ಫಾಲೋವರ್ಸ್‌ ವಿಷಯದಲ್ಲಿ ಶಿಲ್ಪಾ ಶೆಟ್ಟಿ ಎಲ್ಲಾ ಬಾಲಿವುಡ್ ಸ್ಟಾರ್ಸ್‌ಗಿಂತ ಮುಂಚೂಣಿಯಲ್ಲಿದ್ದಾರೆ. ಶಿಲ್ಪಾ ಆಗಾಗ್ಗೆ ಪತಿ ರಾಜ್ ಕುಂದ್ರಾ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಮಾಡಿದ ಫನ್ನಿ ವೀಡಿಯೊಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ. ಟಿಕ್‌ಟಾಕ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸೆಲೆಬ್ರೆಟಿಗಳು ಯಾರು?

ಟಿಕ್‌ಟಾಕ್‌ನಲ್ಲಿ ಪತಿ ರಾಜ್ ಕುಂದ್ರಾ ಜೊತೆ ತಮಾಷೆಯ ವಿಡಿಯೋಗಳು ಹಾಗೂಫಿಟ್‌ನೆಸ್ ಮತ್ತು ಯೋಗ ಸೆಷನ್‌ಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ಹಂಚಿಕೊಂಡಿದ್ದರು ಕರಾವಳಿ ಬೆಡಗಿ.ಇವರಿಗೆ 19.6 ಮಿಲಿಯನ್‌ ಫಾಲೋಯರ್ಸ್ ಇದ್ದರು.
17.2 ಮಿಲಿಯನ್‌ ಅನುಯಾಯಿಗಳನ್ನು ಟಿಕ್‌ಟಾಕ್‌ನಲ್ಲಿ ಹೊಂದಿರುವ ನೇಹಾ ಕಕ್ಕರ್ ಇತರೆ ಪ್ಲಾಟ್‌ಫಾರ್ಮ್‌ಗಳಲ್ಲೂ ಸಾಕಷ್ಟು ಜನಪ್ರಿಯವಾಗಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ 40 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
Tap to resize

15.9 ಮಿಲಿಯನ್‌ ಫಾಲೋವರ್ಸ್‌ ಹೊಂದಿರುವ ಬಾಲಿವುಡ್‌ನ ನಟ ರಿತೇಶ್‌ ದೇಶ್‌ಮುಖ್‌ ಈ ಆ್ಯಪ್‌ನ ಪ್ರಮಖ ಸೆಲೆಬ್ರೆಟಿ.
ಶ್ರೀಲಂಕಾ ಮೂಲದ ಹಿಂದಿ ಸಿನಿಮಾಗಳನಟಿ ಜಾಕ್‌ಲಿನ್‌ ಫರ್ನಾಂಡಿಸ್‌ 13.6 ಫಾಲೋವರ್ಸ್‌ ಹೊಂದಿದ್ದು,4ನೇ ಸ್ಥಾನದಲ್ಲಿದ್ದಾರೆ.
ಹಾಸ್ಯ ನಟಿ ಭಾರತಿ ಸಿಂಗ್‌ ಅನುಯಾಯಿಗಳ ಸಂಖ್ಯೆ 13.5 ಮಿಲಿಯನ್‌.
ಸೋಶಿಯಲ್‌ ಮೀಡಿಯಾದ ಸಕ್ರಿಯ ಯೂಸರ್‌ ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ 6.8 ಫಾಲೋವರ್ಸ್‌ ಹೊಂದಿದ್ದರು.
ಈ ಚೀನಿ ಆ್ಯಪ್‌ನಲ್ಲಿ. ಜಾಕಿ ಶ್ರಾಫ್‌ ಮಗ ಟೈಗರ್‌ಶ್ರಾಫ್‌ ಸಹ 6.8 ಫಾಲೋವರ್ಸ್‌ ಇದ್ದಾರೆ.
ಪಡ್ಡೆ ಹುಡುಗರ ಕನಸಿನ ರಾಣಿ ಮಾಜಿ ಪ್ರೋನ್‌ ಸ್ಟಾರ್‌ ಸನ್ನಿ ಲಿಯೋನ್‌ 6.6 ಮಿಲಿಯನ್‌ ಫ್ಯಾನ್ಸ್‌ ಪಡೆದು ಟಿಕ್‌ಟಾಕ್‌ನಲ್ಲೂ ಫೇಮಸ್‌.
ಶಾಹೀದ್ ತನ್ನದೇ ಇಮೇಜ್ ಸೃಷ್ಟಿಸಿಕೊಂಡಿದ್ದಾರೆ ಈ ಸೋಷಿಯಲ್ ಮೀಡಿಯಾದಲ್ಲಿ.
ಪತಿ ರಿತೇಶ್ ದೇಶ್‌ಮುಖ್‌ರಂತೆ, ಜೆನೆಲಿಯಾ ಕೂಡ ಈ ಸೋಶಿಯಲ್‌ ಮೀಡಿಯಾವನ್ನು ಫನ್ನಿ ವೀಡಿಯೊಗಳನ್ನು ಶೇರ್‌ ಮಾಡಲು ಬಳಸಿದ್ದಾರೆ. ಟಿಕ್‌ಟಾಕ್‌ನಲ್ಲಿ ಇವರ ಫ್ಯಾನ್ಸ್‌ 5.4 ಮಿಲಿಯನ್‌.
4 ಮಿಲಿಯನ್‌ ಫಾಲೋವರ್ಸ್‌ ಹೊಂದಿರುವ ಟೈಗರ್ ಶ್ರಾಫ್ ಗರ್ಲ್‌ಫ್ರೆಂಡ್‌ ದಿಶಾ ಪಟಾನಿ ಡ್ಯಾನ್ಸ್‌ ಮತ್ತು ಜಿಮ್ ಸೆಷನ್‌ಗಳ ವೀಡಿಯೊಗಳನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳುತ್ತಿದ್ದರು.
ಅಂದಹಾಗೆ, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಅಜಯ್ ದೇವಗನ್, ಹೃತಿಕ್ ರೋಷನ್, ಅಮೀರ್ ಖಾನ್, ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ಈ ವೇದಿಕೆಯಿಂದ ದೂರ ಉಳಿದಿದ್ದರು.

Latest Videos

click me!