ಸೈಫ್ 2ನೇ ಹೆಂಡ್ತಿ ಕರೀನಾ ಬಗ್ಗೆ ಶರ್ಮೀಳಾ ಹೇಳೋದಿಷ್ಟು...

Suvarna News   | Asianet News
Published : Jul 12, 2020, 06:29 AM ISTUpdated : Jul 13, 2020, 05:50 PM IST

ಬಾಲಿವುಡ್‌ನ ಹಲವು ರಿಯಲ್‌ ಅತ್ತೆ ಸೊಸೆ ಜೋಡಿಗಳಿವೆ. ಅವುಗಳಲ್ಲಿ ಕರೀನಾಕಪೂರ್‌ ಹಾಗೂ ನಟಿ ಶರ್ಮಿಳಾ ಟ್ಯಾಗೋರ್‌ ಒಬ್ಬರು. ಕರೀನಾ ಸೈಫ್‌ ಆಲಿ ಖಾನ್‌ರ ಎರಡನೆಯ ಹೆಂಡತಿ. ಆದರೂ ಶರ್ಮಿಳಾ ಮಗನ ಹೆಂಡತಿ ಕರೀನಾ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.ಇತ್ತೀಚೆಗೆ ನಡೆದ ಟಾಕ್ ಶೋವೊಂದರಲ್ಲಿ ಶರ್ಮಿಳಾ ಟ್ಯಾಗೋರ್ ಸೊಸೆ ಕರೀನಾ ಕಪೂರ್ ಅವರ ಗುಣಗಳ ಬಗ್ಗೆ ಮಾತನಾಡುವಾಗ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  

PREV
110
ಸೈಫ್ 2ನೇ ಹೆಂಡ್ತಿ ಕರೀನಾ ಬಗ್ಗೆ ಶರ್ಮೀಳಾ ಹೇಳೋದಿಷ್ಟು...

ಕರೀನಾ ಕಪೂರ್ ಖಾನ್ ಇತ್ತೀಚೆಗೆ ತಮ್ಮ ಅತ್ತೆ ಶರ್ಮಿಳಾ ಟ್ಯಾಗೋರ್‌ರನ್ನು ತನ್ನ ರೇಡಿಯೋ ಶೋ ವಾಟ್ ವುಮೆನ್ ವಾಂಟ್ ಸೀಸನ್ 2 ಗೆ ಆಹ್ವಾನಿಸಿದ್ದರು.

210

ಮಗಳು ಮತ್ತು ಸೊಸೆ ನಡುವಿನ ವ್ಯತ್ಯಾಸ ಹಾಗೂ ಪರ್ಸನಲ್‌- ಪ್ರೋಫೆಶನಲ್‌ ಲೈಪ್‌ನ ಬ್ಯಾಲೆನ್ಸ್‌ ಬಗ್ಗೆ ಮಾತನಾಡಿದರು ಶರ್ಮಿಳಾ.
 
310

ಹತ್ತು ನಿಮಿಷಗಳ ಸುದೀರ್ಘ ಸಂದರ್ಶನದಲ್ಲಿ, ಶರ್ಮಿಳಾ ಪಟೌಡಿ ಕುಟುಂಬ, ಪತಿ ಮತ್ತು  ಮಕ್ಕಳ ಬಗ್ಗೆ ಬೆಳಕು  ಚೆಲ್ಲುತ್ತಾರೆ. ಮಾತನಾಡುತ್ತಾ, ಶರ್ಮೀಳಾ  ಕರೀನಾ ಬಗ್ಗೆ ಇಷ್ಟಪಡುವ ಅಂಶಗಳನ್ನು ಬಹಿರಂಗಪಡಿಸಿದರು. 
 
410

ಕರೀನಾ ಈಸಿ ಗೋಯಿಂಗ್‌ ಪರ್ಸನ್‌, ಅವರಿಂದ ಸ್ಟಾಫ್‌ ಅಥವಾ ಸುತ್ತಮುತ್ತಲಿನ ಜನರಿಗೆ ಕಷ್ಟವಾಗುವುದಿಲ್ಲ. ಎಂದ ಅತ್ತೆ ಶರ್ಮಿಳಾ. 

510

'ನಾನು ನಿನ್ನ ಸ್ಥಿರತೆಯನ್ನು ಇಷ್ಟಪಡುತ್ತೇನೆ, ನಿನ್ನ ಸಂಪರ್ಕದಲ್ಲಿರಲು ನಾನು ಇಷ್ಟಪಡುತ್ತೇನೆ ಏಕೆಂದರೆ ನಾನು ನಿನಗೆ ಮೇಸಜ್‌  ಕಳುಹಿಸಿದರೆ, ನೀನು ಯಾವಾಗಲೂ ರೀಪ್ಲೆ ಮಾಡುತ್ತೀಯಾ ಎಂದು ನನಗೆ ತಿಳಿದಿದೆ. ಸೈಫ್‌ ಹಾಗೂ ಸೋಹಾ ಅಲಿ ಖಾನ್ ಉತ್ತರಿಸಿದರೂ ಹಾಗೆ ಮಾಡಲು ಸಮಯ ತೆಗೆದುಕೊಳ್ಳುತ್ತಾರೆ' ಎಂದು ತಮ್ಮ ಸೊಸೆಯನ್ನು ಹೊಗಳಿದ ಹಿರಿಯ ನಟಿ ಶರ್ಮಿಳಾ. 

610

ಕರೀನಾ ಕೈಂಡ್‌ ಮತ್ತು ಕಾರ್ಡಿಯಲ್‌ ಎನ್ನುವುದನ್ನು  ಶರ್ಮಿಳಾ ಕೂಡ ಇಷ್ಟಪಡುತ್ತಾರಂತೆ. 'ನಾನು ಮನೆಗೆ ಬಂದರೆ, ನಾನು ಏನು ತಿನ್ನಲು ಇಷ್ಟಪಡುತ್ತೇನೆ ಎಂದು ನೀನು ನನ್ನನ್ನು ಕೇಳುತ್ತೀಯಾ, ಮತ್ತು ನನಗೆ ಬೇಕಾದುದನ್ನು ನಾನು ಪಡೆಯುತ್ತೇನೆ. ಇದು ಕಪೂರ್ ಫ್ಯಾಮಿಲಿಯ ಲಕ್ಷಣವಿರಬೇಕು ಏಕೆಂದರೆ ನೀನು ಅದ್ಭುತ ಟೇಬಲ್ ಇಡುತ್ತೀಯಾ' ಎಂದು ಹೇಳಿದರು ಶರ್ಮಿಳಾ.

710

ಪತಿ ಮನ್ಸೂರ್ ಅಲಿ ಖಾನ್ ಪಟೌಡಿ ನಿಧನರಾದ ಘಟನೆಯನ್ನೂ ವಿವರಿಸಿದ್ದಾರೆ.  ಮರುದಿನ  ಅವಳ ಬರ್ಥ್‌ಡೇ ಆಗಿದರೂ ಕಪೂರ್ ಆಸ್ಪತ್ರೆಯಲ್ಲಿ ತನ್ನ ಕುಟುಂಬದ ಇತರರೊಂದಿಗೆ ಕಳೆದರು, 

810

'ನಾನು ನಿನ್ನನ್ನು ವಿವಿಧ ಹಂತಗಳಲ್ಲಿ ನೋಡಿದ್ದೇನೆ ಮತ್ತು ನೀನು  ವಂಡರ್‌ಫುಲ್‌ ಎಂದು ನಾನು ಹೇಳಲೇಬೇಕು'  ಎಂದು ಶರ್ಮಿಳಾ ಸೊಸೆ ಕರೀನಾಗೆ ಹೇಳಿದರು.

910

ಮಗಳು ಮತ್ತು ಸೊಸೆಯ ನಡುವಿನ ವ್ಯತ್ಯಾಸವೇನು ಎಂದು ಕರೀನಾ ಶರ್ಮಿಳಾರನ್ನು ಕೇಳಿದಾಗ, 'ಮಗಳು ನಿಮ್ಮ ಜೊತೆಗೆ ಬೆಳೆದವಳು. ಆದ್ದರಿಂದ, ನಿಮಗೆ ಅವಳ ಸ್ವಭಾವ, ಅವಳಿಗೆ ಕೋಪಗೊಳಿಸುವುದು ಯಾವುದು ಮತ್ತು ಆ ವ್ಯಕ್ತಿಯೊಂದಿಗೆ ಹೇಗೆ ವ್ಯವಹರಿಸುವುದು ಎಂದು ನಿಮಗೆ ತಿಳಿದಿರುತ್ತದೆ. ನಿಮ್ಮ ಸೊಸೆಯನ್ನು ಭೇಟಿ ಮಾಡುವಾಗ  ಅವಳು ಆಗಲೇ ಬೆಳೆದಿರುತ್ತಾಳೆ ಮತ್ತು ಆಕೆಯ ಸ್ವಭಾವ ಹೇಗಿದೆ ಎಂದು ನಿಮಗೆ ತಿಳಿದಿರುವುದಿಲ್ಲ, ಆದ್ದರಿಂದ ಹೊಂದಿಕೊಳ್ಳಲು  ಸಮಯ ತೆಗೆದುಕೊಳ್ಳುತ್ತದೆ. ಹೊಸ ಹುಡುಗಿ, ನಿಮ್ಮ ಸೊಸೆ ನಿಮ್ಮ ಮನೆಗೆ ಬರುತ್ತಿದ್ದಾಳೆ, ಆದ್ದರಿಂದ ನೀವು ಅವಳನ್ನು ಸ್ವಾಗತಿಸಬೇಕು ಮತ್ತು ಅವಳನ್ನು ಹೆಚ್ಚು ಕಂಫರ್ಟಬಲ್‌ ಆಗಿಸಬೇಕು' ಎಂದ ಹಿರಿಯ ನಟಿ.

1010

ತನ್ನ ಹೆಂಡತಿಯನ್ನು  ಕಂಫರ್ಟಬಲ್‌ ಆಗಿಸುವುದು ಹುಡುಗನ ಜವಾಬ್ದಾರಿ. ಏಕೆಂದರೆ ಅವಳು ಹೊಸ ಕುಟುಂಬವನ್ನು ಪ್ರವೇಶಿಸುತ್ತಿದ್ದಾಳೆ ಎಂದು ಅವರು ಹೇಳಿದರು  'ಹುಡುಗಿಯನ್ನು ಸ್ವಾಗತಿಸಲು ಮತ್ತು ಅವಳನ್ನು ಕಂಫರ್ಟಬಲ್‌ ಆಗಿಸಬೇಕು  ಹೆಚ್ಚು ಹಸ್ತಕ್ಷೇಪ ಮಾಡಬಾರದು ಎಂಬ ಜವಾಬ್ದಾರಿ ಹುಡುಗನ ಕಡೆಯ.ವರದ್ದು ಏಕೆಂದರೆ ಅದು ಹೊಸ ಸಂಬಂಧವಾಗಿದೆ . ನಾನು ಹೇಳಿದರೆ, 'ನನ್ನ ಮಗ ಚಿಕ್ಕವನಿದ್ದಾಗ, ಇದು ಅವನಿಗೆ ಇಷ್ಟವಾಗುತ್ತಿತ್ತು, ಮತ್ತು ಇದು ಅವನ ಫೇವರೇಟ್‌ ತಿಂಡಿಯಾಗಿತ್ತು ಎಂದು ನಾನು ಹೇಳಿದರೆ ಆ ರೀತಿಯ ಶೋ ಆಫ್‌ ಕೆಡಕಾಗುತ್ತದೆ. ಸ್ವಾಧೀನಪಡಿಸಿಕೊಳ್ಳಲು  ಪ್ರಯತ್ನಿಸುವುದಕ್ಕಿಂತ ಹೆಚ್ಚಾಗಿ ಅವರ ಸಂಬಂಧ ಬೆಳೆಯಲು ನೀವು ಅವಕಾಶ ಮಾಡಿಕೊಡಬೇಕು' ಎಂದ ಶರ್ಮಿಳಾ.

click me!

Recommended Stories