ಪ್ಯಾರಿಸ್‌ ಬದಲು ಡಾರ್ಜಿಲಿಂಗ್‌ಗೆ ಹನಿಮೂನ್‌ ಕರೆದುಕೊಂಡು ಹೋದ ಕಿಂಗ್‌ ಖಾನ್‌

Suvarna News   | Asianet News
Published : Apr 30, 2020, 03:56 PM IST

ಇದೊಂಥರಾ 90ರ ದಶಕದ ನೆನಪುಗಳನ್ನು ಮೆಲಕು ಹಾಕುವ ಸಮಯವಾಗಿದೆ. ಬಾಲವುಡ್ ಸ್ಟಾರ್‌ಗಳ ಹತ್ತು ಹಲವು ಘಟನೆಗಳಿಗೆ ಇದೀಗ ಸೋಷಿಯಲ್ ಮೀಡಿಯಾ ಸಾಕ್ಷಿಯಾಗುತ್ತಿದೆ. ಸೆಲೆಬ್ರೆಟಿಗಳ ಹಲವು ಹಳೆಯ ವಿಷಯಗಳು ಮತ್ತೆ ಜೀವ ಪಡೆಯುತ್ತಿವೆ. ಕೆಲವು ವೈರಲ್‌ ಕೂಡ ಆಗಿವೆ. ಇದೇ ರೀತಿ ಶಾರುಖ್‌ ಖಾನ್‌ ಮತ್ತು ಪತ್ನಿ ಗೌರಿ ಖಾನ್‌ ಹನಿಮೂನ್‌ಗೆ ಸಂಬಂಧಿಸಿದ ಘಟನೆಯೊಂದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪತ್ನಿಯನ್ನು ಪ್ಯಾರಿಸ್‌ಗೆ ಹನಿಮೂನ್‌ಗೆ ಕರೆದುಕೊಂಡು ಹೋಗುವ ಬದಲು ಡಾರ್ಜಿಲಿಂಗ್‌ಗೆ ಕರೆದು ಕೊಂಡು ಹೋಗಿದ್ದರಂತೆ ಬಾಲಿವುಡ್‌ ಸ್ಟಾರ್‌.  

PREV
111
ಪ್ಯಾರಿಸ್‌ ಬದಲು ಡಾರ್ಜಿಲಿಂಗ್‌ಗೆ ಹನಿಮೂನ್‌ ಕರೆದುಕೊಂಡು ಹೋದ ಕಿಂಗ್‌ ಖಾನ್‌

ಹೆಂಡತಿ ಗೌರಿಗೆ ಮದುವೆಯ ನಂತರ ಪ್ಯಾರಿಸ್‌ಗೆ ಕರೆದೊಯ್ದು ಐಫೆಲ್ ಟವರ್ ತೋರಿಸುವುದಾಗಿ ಪ್ರಾಮಿಸ್‌ ಮಾಡಿದ್ದರಂತೆ ಶಾರುಖ್ ಖಾನ್‌. ಆದರೆ ಗೌರಿಗೆ ಶಾರುಖ್‌ ನೀಡಿದ ಭರವಸೆ ಸುಳ್ಳಾಯಿತಂತೆ.

211

ಮದುವೆಯಾದ ನಂತರ ಶಾರುಖ್ ಗೌರಿಯನ್ನು ಮಧುಚಂದ್ರಕ್ಕೆ  ಪ್ಯಾರಿಸ್‌ಗೆ ಕರೆದೊಯ್ಯುವುದಾಗಿ ಭರವಸೆ ನೀಡಿದ ವಿಷಯವನ್ನು ಸ್ವತಃ ಶಾರುಖ್ ಅವರೇ ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದರು.

311

2019ರಲ್ಲಿ ಮುಂಬೈನಲ್ಲಿ ನಡೆದ ಆವಾರ್ಡ್‌ ಕಾರ್ಯಕ್ರಮದಲ್ಲಿ ವಿಕ್ಕಿ ಕೌಶಲ್ ಹನಿಮೂನ್‌ ಫೋಟೋವನ್ನು ಶಾರುಖ್ ಅವರಿಗೆ ತೋರಿಸಿದಾಗ, ಫೋಟೋ ನೋಡಿದ ಶಾರುಖ್ ಗೌರಿಗೆ ನೀಡಿದ ಸುಳ್ಳು ಭರವಸೆಯನ್ನು ನೆನಪಿಸಿಕೊಂಡರು.

411

'ಇದು ನನ್ನ ನೆಚ್ಚಿನ ಫೋಟೋ. ನಾನು ಮದುವೆಯಾದಾಗ, ನಾನು ತುಂಬಾ ಬಡವನಾಗಿದ್ದೆ, ಗೌರಿ ಸಹ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವಳು. ಮದುವೆ ನಂತರ ನಾನವಳನ್ನು ಪ್ಯಾರಿಸ್‌ಗೆ ಕರೆದೊಯ್ಯುತ್ತೇನೆ ಎಂದು ಭರವಸೆ ನೀಡಿದ್ದೆ. ಆದರೆ ನಮ್ಮ ಬಳಿ ಹಣ ಇಲ್ಲದ ಕಾರಣ ಆ ಭರವಸೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಗೌರಿಯ ರಿಯಾಕ್ಷನ್‌ ನೋಡಲು ಯೋಗ್ಯವಾಗಿತ್ತು, ಕೊನೆಗೆ ಹೇಗೋ ಮಾಡಿ ಗೌರಿಗೆ ಮನವರಿಕೆ ಮಾಡಿಕೊಟ್ಟೆ,' ಎಂದು ಶಾರುಖ್ ಹೇಳಿದ್ದರು.

511

ಗೌರಿಯನ್ನು ಪ್ಯಾರಿಸ್‌ಗೆ ಕರೆದೊಯ್ಯಲಾಗಲಿಲ್ಲ  ಆದರೆ ಪ್ಯಾರಿಸ್‌ ಎಂದು ಹೇಳಿ ಡಾರ್ಜಿಲಿಂಗ್‌ಗೆ ಕರೆದುಕೊಂಡು ಹೋದೆ ಎಂದು ಶಾರುಖ್ ಹೇಳಿದ್ದರು. 

611

ಆಗ ನಾನು ರಾಜು ಬಾನ್ ಗಯಾ ಜಂಟಲ್‌ಮ್ಯಾನ್  ಸಿನಿಮಾದ ಹಾಡನ್ನು ಚಿತ್ರೀಕರಿಸಲು ಡಾರ್ಜಿಲಿಂಗ್‌ಗೆ ಹೋಗಬೇಕಾಗಿತ್ತು ಎಂದು ಹೇಳಿಕೊಂಡ ಖಾನ್‌.

711

ಶಾರುಖ್ ಮತ್ತು ಗೌರಿ  ಪ್ರೀತಿಗೆ ಧರ್ಮ ಒಂದು ದೊಡ್ಡ ಗೋಡೆಯಾಗಿತ್ತು. ಗೌರಿ ಕುಟುಂಬವನ್ನು ಒಪ್ಪಿಸಲು 5 ವರ್ಷಗಳ ಕಾಲ ಶಾರುಖ್ ಹಿಂದೂ ಆಗಿದ್ದರಂತೆ. ಅನೇಕ ತೊಂದರೆಗಳನ್ನು ಎದುರಿಸಿದ ನಂತರ, ಕುಟುಂಬವು ಅಂತಿಮವಾಗಿ ಸಂಬಂಧವನ್ನು ಒಪ್ಪಿಕೊಂಡಿತು.

811

ಕಾಲೇಜು ದಿನಗಳಲ್ಲಿ, ದೆಹಲಿಯಲ್ಲಿ ಮೊದಲ ಬಾರಿಗೆ ಭೇಟಿಯಾದ ಇಬ್ಬರು ಪ್ರೀತಿಸಿ, 6 ವರ್ಷಗಳ ಕಾಲ ಡೇಟಿಂಗ್‌ ನೆಡೆಸಿದರು. ಶಾರುಖ್‌ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಒಂದು ವರ್ಷದ ನಂತರ 1991ರಲ್ಲಿ ಗೌರಿಯನ್ನು ಮದುವೆಯಾದರು.

911

ದೆಹಲಿಯ ಕ್ಲಬ್‌ನಲ್ಲಿ ಮೊದಲ ಬಾರಿಗೆ ಗೌರಿಯನ್ನು ಭೇಟಿಯಾಗಿದ್ದು. ಇಬ್ಬರು ಒಟ್ಟಿಗೆ ಕುಳಿತು ತಂಪು ಪಾನೀಯವನ್ನು ಸೇವಿಸಿದ ಆ ಡೇಟ್‌ ಕೇವಲ 5 ನಿಮಿಷಳಾಗಿತ್ತು ಅಷ್ಟೇ. ಸಾಕಷ್ಟು ನಾಚಿಕೆ ಪಡುತ್ತಿದ್ದ ನನಗೆ 3 ಡೇಟಿಂಗ್‌ ನಂತರವೇ ಗೌರಿಯ ಪೋನ್‌ ನಂಬರ್‌ ಕೇಳಲು ಸಾಧ್ಯವಾಯಿತು, ಎಂದು ಶಾರುಖ್ ಸಂದರ್ಶನವೊಂದರಲ್ಲಿ ತಮ್ಮ ಪ್ರೀತಿಯ ಬಗ್ಗೆ ಹೇಳಿದ್ದರು.

1011

ಶಾರುಖ್ ಮತ್ತು ಗೌರಿ ಒಮ್ಮೆ ಅಲ್ಲ ಮೂರು ಬಾರಿ ಮದುವೆಯಾದದ್ದು. ಮೊದಲ ಮದುವೆ  ಕೋರ್ಟ್‌ ಮ್ಯಾರೇಜ್‌ ಆದರೆ ಎರಡನೆಯ ಬಾರಿ ಮುಸ್ಲಿಂ ಪದ್ಧತಿಯಂತೆ  ಮತ್ತು  3ನೇ ಬಾರಿ ಪಂಜಾಬಿ ಶೈಲಿಯಲ್ಲಿ.

1111

ಕೊನೆಯದಾಗಿ ಜೀರೊ ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಯಾವುದೇ ಚಿತ್ರವನ್ನು ಇನ್ನೂ ಅನೌನ್ಸ್‌ ಮಾಡಿಲ್ಲ ಸೂಪರ್‌ ಸ್ಟಾರ್‌.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories