ಶಾರುಖ್‌ ಗೌರಿಯ ಭವ್ಯ ಬಂಗ್ಲೆ 'ಮನ್ನತ್'‌ ಹೇಗಿದೆ ನೋಡಿ

Suvarna News   | Asianet News
Published : May 07, 2020, 06:16 PM IST

ಶಾರುಖ್ ಖಾನ್ ಸುಮಾರು 28 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ.ಕೇವಲ 300 ರೂಪಾಯಿಳೊಂದಿಗೆ ವಾಸಿಸಲು ಮನೆ ಕೂಡ ಇಲ್ಲದಿದ್ದಾಗ ಶಾರುಖ್ ಮುಂಬೈಗೆ ಬಂದವರು. ಆದರೆ ಇಂದು, ಅವರು ಮನ್ನತ್ ಎಂಬ ಐಷಾರಾಮಿ ಸಮುದ್ರದೆಡೆಗೆ ಮುಖ ಮಾಡಿರುವ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಈ ಬಂಗಲೆಯ ಮೌಲ್ಯ 200 ಕೋಟಿ ರೂ.ಗಳಿಗಿಂತ ಹೆಚ್ಚು. ಶಾರುಖ್ ಇದನ್ನು 1995ರಲ್ಲಿ 15 ಕೋಟಿ ರೂ.ಗೆ ಖರೀದಿಸಿದರು. ಶಾರುಖ್‌ನ ಈ ಬಂಗಲೆಯ ಫೋಟೋಗಳನ್ನು ನೀವು ನೋಡಿರಬಹುದು, ಆದರೆ ಇನ್ನೂ ಕೆಲವು ಹೊಸ ಫೋಟೋಗಳು ಹೊರಬಂದಿದ್ದು ಇಲ್ಲಿವೆ.

PREV
115
ಶಾರುಖ್‌ ಗೌರಿಯ  ಭವ್ಯ ಬಂಗ್ಲೆ 'ಮನ್ನತ್'‌ ಹೇಗಿದೆ ನೋಡಿ

ಶಾರುಖ್ ಖಾನ್  ಬಂಗಲೆ 'ಮನ್ನತ್' ನ ಭವ್ಯತೆ ಹೊರಗಿನಿಂದ ನೊಡುವಾಗಲೇ ತಿಳಿದು ಹೋಗುತ್ತದೆ. ಮನ್ನತ್ ಮುಂದೆ ಹಾದುಹೋಗುವ ಪ್ರತಿಯೊಬ್ಬ ವ್ಯಕ್ತಿಯ ಕಣ್ಣು  ಅದರ ಸೌಂದರ್ಯದ ಮೇಲೆ ಬೀಳುತ್ತದೆ

215

ಇಲ್ಲಿನ  ವಿಶೇಷತೆ ಗಣಪತಿ ಮೂರ್ತಿ ಹಾಗೂ ಕುರಾನ್ ಎರಡು ಒಟ್ಟಿಗೆ ಕಾಣಸಿಗುತ್ತದೆ. ಇದರ ಪೋಟೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದಕ್ಕಾಗಿ ಅಭಿಮಾನಿಗಳು ಶಾರುಖ್‌ರನ್ನು ತುಂಬಾ ಹೊಗಳಿದ್ದಾರೆ.

315

ಆರು ಸಾವರ ಚದುರಡಿಯ ಈ ಬಂಗಲೆಯನ್ನು ನಾಲ್ಕು ವರ್ಷಗಳ ಕಾಲ ರಿನೋವೇಟ್ ಮಾಡಲಾಗಿದೆ. ನಂತರ ಬಂಗಲೆಗೆ ಮನ್ನತ್ ಎಂಬ ಹೆಸರಿಡಲಾಗಿತ್ತು. 
 
415

ಗಣೇಶನೂ ಸಿಗುತ್ತಾನೆ, ಕುರಾನ್ ಕೂಡ ಸಿಗುತ್ತದೆ, ಇದು SRKಯ ಮನ್ನತ್‌ ಸರ್, ನೀವು ಇಲ್ಲಿ ಪ್ರತಿಯೊಂದು ಧರ್ಮವನ್ನೂ ಪಡೆಯುತ್ತೀರಿ. ಎಂದು  ಒಬ್ಬರು ಖಾನ್‌ಗೆ ಹೊಗಳಿದರೆ, ಇನ್ನೊಬ್ಬರು ಗಣಪತಿ ವಿಗ್ರಹ ಎಡಕ್ಕೆ ಮತ್ತು ಕುರಾನ್ ಬಲಕ್ಕೆ, ಶಾರುಖ್ ಖಾನ್ ಭಾರತದ ಹೆಮ್ಮೆ ಎಂದು ಕಾಮೆಂಟ್‌ ಮಾಡಿದ್ದಾರೆ.

515

ಶಾರುಖ್ ಖಾನ್ ಪತ್ನಿ ಗೌರಿ ಮತ್ತು ಮೂವರು ಮಕ್ಕಳೊಂದಿಗೆ 6000 ಚದರ ಅಡಿ ವಿಸ್ತೀರ್ಣದ ಈ ಬಂಗಲೆಯಲ್ಲಿ ವಾಸಿಸುತ್ತಾರೆ.

615

ಐದು ಬೆಡ್‌ ರೂಮ್‌, ಅನೇಕ ಲೀವಿಂಗ್‌ ರೂಮ್‌ಗಳು, ಜಿಮ್ ಮತ್ತು ಲೈಬ್ರರಿ ಹೊಂದಿದ್ದು, ಖಾಸಗಿ ಪ್ರದೇಶವನ್ನೂ  ಹೊಂದಿದೆ. 

715

ಇದರ ಒಳಾಂಗಣವನ್ನು ಪತ್ನಿ ಗೌರಿ ಖಾನ್ ಸ್ವತಃ ವಿನ್ಯಾಸಗೊಳಿಸಿದ್ದು, ನಾಲ್ಕು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದರಂತೆ. 

815

ಸಂಪೂರ್ಣವಾಗಿ ಬಿಳಿ ಅಮೃತಶಿಲೆಯಿಂದ ಮಾಡಿದ ಈ ಬಂಗಲೆವನ್ನು ಶಾರುಖ್ ಅವರು 2001ರಲ್ಲಿ ಬಾಯಿ ಖೋರ್ಶೆಡ್ ಭಾನು ಸಂಜನಾ ಟ್ರಸ್ಟ್‌ನಿಂದ ಖರೀದಿಸಿದರು.  

915

ನಾಲ್ಕು ವರ್ಷಗಳ ಕಾಲ ಅದರ ನವೀಕರಣದ ನಂತರ ಅದಕ್ಕೆ ಮನ್ನತ್ ಎಂದು ಹೆಸರಿಡಲಾಯಿತು. 6000 ಚದರ ಅಡಿ ಬಂಗಲೆ ರಿನೆವೇಟ್‌ ಮಾಡಿದ್ದು ಮುಂಬೈ ಮೂಲದ ಫಕಿಹ್ & ಅಸೋಸಿಯೇಟ್ಸ್.

1015

ಒಳಾಂಗಣಕ್ಕೆ ಕ್ಲಾಸಿಕ್ ಲುಕ್ ನೀಡಲಾಗಿದ್ದು. ಮನೆಯ ಬಾಗಿಲು ತೆರೆದ ತಕ್ಷಣ, ಬಂಗಲೆಯ ಕ್ಲಾಸಿಕ್ ಲುಕ್‌ ಕಾಣಬಹುದು. ಡ್ರಾಮಾಟಿಕ್‌ ಹಾಗೂ ಮಡ್ಡಿ ಸೆಟ್ಟಿಂಗ್ ಹೊಂದಿದೆ ಕಿಂಗ್‌ ಖಾನ್‌ರ ಬಂಗ್ಲೆ. 

1115

ಸಮಕಾಲೀನ ಗೋಥಿಕ್ ಐರೋನಿಕ್ ಕಲಾತ್ಮಕತೆಯನ್ನು ಸಂಯೋಜಿಸಲಾಗಿದ್ದು  ಅನ್‌ಫಿನಿಶ್ಡ್‌ ಮೇಲ್ಮೈನೊಂದಿಗೆ ಪ್ಯಾಲೆಟ್  ಡಾರ್ಕ್‌ ಕಲರ್‌ ಹೊಂದಿದೆ.

1215

ಇಂಟಿರೀಯರ್‌ ಜೊತೆ ಸ್ಟೈಲಿಂಗ್ ಕೆಲಸವನ್ನು ಗೌರಿ ಸ್ವತಃ ಮಾಡಿದ್ದು, ಇದಕ್ಕಾಗಿ ನಾಲ್ಕು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದರು. 

1315

ಈ ಬಂಗಲೆಯನ್ನು ಒಂದು ಕಾಲದಲ್ಲಿ 'ವಿಲ್ಲಾ ವಿಯೆನ್ನಾ' ಎಂದು ಕರೆಯಲಾಗುತ್ತಿತ್ತು. ಈ ಬಂಗಲೆಯ ಮಾಲೀಕರು ಮುಂಬೈನ ಕಲಾ ಜಗತ್ತಿನಲ್ಲಿ ದೊಡ್ಡ ಹೆಸರನ್ನು ಹೊಂದಿರುವ ಗುಜರಾತ್‌ನ ಪಾರ್ಸಿ ಕಿಕು ಗಾಂಧಿ.

1415

ಕಿಕು ಗಾಂಧಿ ಮುಂಬೈನ ಅಪ್ರತಿಮ 'ಶಿಮೋಲ್ಡ್ ಆರ್ಟ್ ಗ್ಯಾಲರಿ'ಯ ಸ್ಥಾಪಕರಾಗಿದ್ದು. ಮನ್ನತ್‌ನ ಪಕ್ಕದಲ್ಲಿರು ಕಿಕಿ ಮಂಜಿಲ್ ಎಂಬ ಬಂಗಲೆಯಲ್ಲಿ ಕಿಕು ಗಾಂಧಿಯ ಪೋಷಕರು ವಾಸಿಸುತ್ತಿದ್ದರು. ಅಕ್ಕಪಕ್ಕದಲ್ಲಿರುವ ಅವುಗಳ ನಡುವೆ ಒಂದು ಗೋಡೆಯ ವ್ಯತ್ಯಾಸವಷ್ಟೇ.

1515

'ಎಸ್‌ ಬಾಸ್' ಚಿತ್ರದ ಶೂಟಿಂಗ್‌ನಲ್ಲಿರುವಾಗ ಈ ಮನೆಯನ್ನು ಖರೀದಿಸುವ ಆಸೆಯಾಯಿತು ಎಂದು ಶಾರುಖ್ ತಮ್ಮ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

click me!

Recommended Stories