ಮಹಾನಟಿ ಸಾವಿತ್ರಿ ತೆಲುಗು ಸಿನೆಮಾ ಇತಿಹಾಸದಲ್ಲಿ ಒಂದು ಲೆಜೆಂಡ್. ಎನ್ ಟಿ ಆರ್, ಎಎನ್ ಆರ್ ಅವರಿಗೆ ಪೈಪೋಟಿ ನೀಡುವಂತೆ ಕ್ರೇಜ್ ಸಂಪಾದಿಸಿಕೊಂಡ ಸಾವಿತ್ರಿ ತೆಲುಗು ಪ್ರೇಕ್ಷಕರ ಹೃದಯದಲ್ಲಿ ಮಹಾನಟಿಯಾಗಿ ಉಳಿದುಹೋದರು. ಆ ಕಾಲದಲ್ಲಿ ತಮಿಳಿನ ಹಿರಿಯ ನಟರಾದ ಎಂಜಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಅವರ ಚಿತ್ರಗಳು ತೆಲುಗಿನಲ್ಲಿ ಅಷ್ಟಾಗಿ ಡಬ್ ಆಗುತ್ತಿರಲಿಲ್ಲ. ರಜನೀಕಾಂತ್, ಕಮಲ್ ಹಾಸನ್ ಕಾಲದಿಂದ ಡಬ್ಬಿಂಗ್ ಹವಾ ಹೆಚ್ಚಾಯಿತು. ಇದರಿಂದ ಜೆಮಿನಿ ಗಣೇಶನ್ ಅವರಂತಹ ಲೆಜೆಂಡರಿ ನಟರ ನಟನೆಯ ಬಗ್ಗೆ ತೆಲುಗು ಆಡಿಯನ್ಸ್ ಗೆ ಅಷ್ಟಾಗಿ ತಿಳಿದಿರಲಿಲ್ಲ.