ಎರಡನೇ ಮದುವೆ ಸುದ್ದಿ ಬೆನ್ನಲ್ಲೇ ಟರ್ಕಿ ಟ್ರಿಪ್ ಎಂಜಾಯ್ ಮಾಡುತ್ತಿರುವ ಸಾನಿಯಾ, ಜತೆಯಲ್ಲಿರೋರು ಯಾರು?

First Published | Oct 16, 2024, 3:45 PM IST

ಕ್ರಿಕೆಟಿಗ  ಶೋಯೆಬ್ ಮಲಿಕ್‌ರನ್ನ ವಿಚ್ಛೇದನ ಮಾಡಿಕೊಂಡ ನಂತರ ಭಾರತದ ಟೆನಿಸ್ ತಾರೆ ಸಾನಿಯಾ ಮೀರ್ಜಾ ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ ಎಂಬ ವದಂತಿಗಳ ನಡುವೆ, ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಅವರ ಪತಿ ರಾಘವ್ ಚಡ್ಡಾ ಜೊತೆ ಟರ್ಕಿಯಲ್ಲಿರುವ ಸಾನಿಯಾ ಫೋಟೋಗಳು ವೈರಲ್ ಆಗಿವೆ.

ಶೋಯೆಬ್ ಮಲಿಕ್‌ ರಿಂದ ವಿಚ್ಛೇದನ ಪಡೆದುಕೊಂಡ ನಂತರ ಸಾನಿಯಾ ಒಬ್ಬಂಟಿಯಾಗಿದ್ದಾರೆ. ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೆದ್‌ರನ್ನ ಮದುವೆಯಾಗಿದ್ದಾರೆ. ಸಾನಿಯಾ ಕೂಡ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳಿವೆ.

ಇದೀಗ ಸಾನಿಯಾ ಮಿರ್ಜಾ ಎರಡನೇ ಮದುವೆ ಆಗಿದ್ದಾರೆ ಎಂಬ ಸುದ್ದಿಗಳ ಮಧ್ಯೆ ಪರಿಣೀತಿ ಚೋಪ್ರಾ ಜೊತೆ ಟರ್ಕಿಯಲ್ಲಿ ಸಾನಿಯಾ ಮೀರ್ಜಾ ಕಾಣಿಸಿಕೊಂಡಿದ್ದಾರೆ. ಪರಿಣೀತಿ ತಮ್ಮ ಪತಿ ರಾಘವ್ ಚಡ್ಡಾ ಜೊತೆಗಿನ ಫೋಟೋಗಳನ್ನ ಹಂಚಿಕೊಂಡಿದ್ದು, ಅದರಲ್ಲಿ ಸಾನಿಯಾ ಕೂಡ ಅವರ ಜೊತೆ ಇದ್ದಾರೆ. 

ಸಾನಿಯಾ ಮಿರ್ಜಾ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಟರ್ಕಿಯಲ್ಲಿ ಸಮಯ ಕಳೆಯುತ್ತಿದ್ದು, Instagram ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಸಾನಿಯಾ ಮತ್ತು ಪರಿಣಿತಿ ಸಂಜೆ ದೋಣಿಯಲ್ಲಿ ವಿಹರಿಸುತ್ತಿರುವುದು ಕಾಣಿಸಿದೆ.

Tap to resize

ಯಾರ ಜೊತೆ ಮದುವೆ?

ಸಾನಿಯಾ ಮೀರ್ಜಾ ಯಾರನ್ನ ಮದುವೆಯಾಗಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಸನಾ ಜಾವೆದ್‌ರ ಮಾಜಿ ಪತಿ ಉಮೈರ್ ಜಸ್ವಾಲ್ ಜೊತೆ ಮದುವೆ ಆಗಿದ್ದಾರೆಂದು ಸುದ್ದಿ ಹಬ್ಬಿತ್ತು. ಆದರೆ ಇತ್ತೀಚೆಗೆ ಸನಾ ಜಾವೇದ್‌ ಅವರ ಮೊದಲ ಪತಿ ಉಮೈರ್‌ ಜಸ್ವಾಲ್‌ 2ನೇ ಮದುವೆಯಾಗಿದ್ದಾರೆ. ಮದುವೆಯ ಫೋಟೋವನ್ನು ಉಮೈರ್‌ ಜಸ್ವಾಲ್‌ ಹಂಚಿಕೊಳ್ಳುವ ಮೂಲಕ  ಎಲ್ಲರಿಗೂ ಅಚ್ಚರಿ ನೀಡಿದ್ದರು. ಮದುವೆ ಮಾಡಿಕೊಂಡಿದ್ದನ್ನೂ ಖಚಿತಪಡಿಸಿದ್ದರೂ. ವಧು ಯಾರು, ಆಕೆಯ ಹೆಸರೇನು? ಎಂಬುದಾಗಲಿ ಆಕೆಯ ಫೋಟೋ ಆಗಲಿ ಹಾಕಿಕೊಂಡಿಲ್ಲ

ಈ ಹಿಂದೆ ಟೀಮ್‌ ಇಂಡಿಯಾ ಕ್ರಿಕೆಟರ್‌ ಮೊಹಮದ್‌ ಶಮಿ ಅವರೊಂದಿಗೆ ಸಾನಿಯಾ ಮಿರ್ಜಾ 2ನೇ ಮದುವೆ ಆಗುತ್ತಾರೆ ಎನ್ನುವ ಗಾಸಿಪ್‌ಗಳು ದೊಡ್ಡ ಮಟ್ಟದಲ್ಲು ಚರ್ಚೆಯಾಗಿತ್ತು. ಆದರೆ ಮೊಹಮ್ಮದ್ ಶಮಿ ಅವರು ಸಾನಿಯಾ ಜತೆಗಿನ ಮದುವೆ ಎಂಬ ವದಂತಿಗಳನ್ನ ಶಮಿ ತಳ್ಳಿಹಾಕಿದ್ದರು. ಇದು ಸುಳ್ಳು ವದಂತಿ ಎಂದಿದ್ದರು.

ಟರ್ಕಿ ಪ್ರವಾಸಕ್ಕೆ ಮುನ್ನ ಪರಿಣೀತಿ ಚೋಪ್ರಾ ತಮ್ಮ ಮೊದಲ ವಿವಾಹ ವರ್ಷದ ಆಚರಣೆಯನ್ನ ಮಾಲ್ಡೀವ್ಸ್‌ನಲ್ಲಿ ಆಚರಿಸಿಕೊಂಡರು. ಪರಿಣಿತಿ ಅವರು ಮತ್ತು ರಾಘವ್ ಚಡ್ಡಾ ಸಮುದ್ರದ ನೋಟವನ್ನು ಆನಂದಿಸುತ್ತಾ ಕಾಲು ಚಾಚಿ ಕುಳಿತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಮುಖದ ಚಿತ್ರಗಳನ್ನು ಹಂಚಿಕೊಳ್ಳಲಿಲ್ಲ ಆದರೆ ಅವರ ಕಾಲುಗಳ ಚಿತ್ರಗಳನ್ನು ಮಾತ್ರ ಹಂಚಿಕೊಂಡಿದ್ದಾರೆ. 

Latest Videos

click me!