ಜನಪ್ರಿಯ ಟಾಪ್ 10 ನಟಿಯ ಲಿಸ್ಟ್ ಔಟ್; ಆಲಿಯಾ, ದೀಪಿಕಾರನ್ನ ಹಿಂದಿಕ್ಕಿದ ಸಮಂತಾ, ರಶ್ಮಿಕಾ ಸ್ಥಾನ ಎಲ್ಲಿ?

Published : Sep 23, 2022, 01:56 PM IST

ಅತ್ಯಂತ ಜನಪ್ರಿಯ ಟಾಪ್ 10 ನಟಿಯರ ಲಿಸ್ಟ್ ಔಟ್ ಆಗಿದೆ. ಆರ್ಮ್ಯಾಕ್ಸ್ ಇಂಡಿಯಾ ಅವರು ಮಾಡಿರುವ ಸರ್ವೆಯ ಲಿಸ್ಟ್ ಬಹಿರಂಗ ಪಡಿಸಿದ್ದು ಜನಪ್ರಿಯ ನಟಿ ಮತ್ತು ನಟರ ಲಿಸ್ಟ್ ಔಟ್ ಆಗಿದೆ. ಈ ಲಿಸ್ಟ್ ನಲ್ಲಿ ಸೌತ್ ಕಲಾವಿದರೆ ಟಾಪ್ ಸ್ಥಾನ ಅಲಂಕರಿಸಿರುವುದು ಸೌತ್ ಸಿನಿ ಅಭಿಮಾನಿಗಳಿಗೆ ಸಂತಸ ತಂದಿದೆ. ಅದರಲ್ಲೂ ನಟಿ ಸಮಂತಾ ರುತ್ ಪ್ರಭು ಅಚ್ಚರಿ ಮೂಡಿಸಿದ್ದಾರೆ. 

PREV
17
ಜನಪ್ರಿಯ ಟಾಪ್ 10 ನಟಿಯ ಲಿಸ್ಟ್ ಔಟ್; ಆಲಿಯಾ, ದೀಪಿಕಾರನ್ನ ಹಿಂದಿಕ್ಕಿದ ಸಮಂತಾ, ರಶ್ಮಿಕಾ ಸ್ಥಾನ ಎಲ್ಲಿ?

ಅತ್ಯಂತ ಜನಪ್ರಿಯ ಟಾಪ್ 10 ನಟಿಯರ  ಲಿಸ್ಟ್ ಔಟ್ ಆಗಿದೆ. ಆರ್ಮ್ಯಾಕ್ಸ್ ಇಂಡಿಯಾ ಅವರು ಮಾಡಿರುವ ಸರ್ವೆಯ ಲಿಸ್ಟ್ ಬಹಿರಂಗ ಪಡಿಸಿದ್ದು ಜನಪ್ರಿಯ ನಟಿ ಮತ್ತು ನಟರ ಲಿಸ್ಟ್ ಔಟ್ ಆಗಿದೆ. ಈ ಲಿಸ್ಟ್ ನಲ್ಲಿ ಸೌತ್ ಕಲಾವಿದರೆ ಟಾಪ್ ಸ್ಥಾನ ಅಲಂಕರಿಸಿರುವುದು ಸೌತ್ ಸಿನಿ ಅಭಿಮಾನಿಗಳಿಗೆ ಸಂತಸ ತಂದಿದೆ. ಅದರಲ್ಲೂ ನಟಿ ಸಮಂತಾ ರುತ್ ಪ್ರಭು ಅಚ್ಚರಿ ಮೂಡಿಸಿದ್ದಾರೆ. 

27

ಹೂ ಅಂಟಾವ ಸುಂದರಿ ಸಮಂತಾ ಟಾಪ್ ನಟಿಯರನ್ನೆಲ್ಲ ಹಿಂದಿಕ್ಕು ಮೊದಲ ಸ್ಥಾನಕ್ಕೆ ಏರಿದ್ದಾರೆ. ಬಾಲಿವುಡ್ ಸ್ಟಾರ್ ನಟಿಯರಾದ ಅಲಿಯಾ ಭಟ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಸೇರಿದಂತೆ ಅನೇಕ ಸ್ಟಾರ್ ನಟಿಯರನ್ನ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ. ಇದು ಸಮಂತಾ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. 

37

ಸಮಂತಾ ರುತ್ ಪ್ರಭು ದಿ ಫ್ಯಾಮಿಲಿ ಮ್ಯಾನ್ 2 ಬಳಿಕ ಬಂದಗ ಸಿನಿಮಾ ಹಿಟ್ ಆಗಿಲ್ಲ. ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದ್ದರು ಸಮಂತಾ ಸದಾ ಸುದ್ದಿಯಲ್ಲಿದ್ದರು. ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಕ್ಕೆ ಸದ್ದು ಮಾಡುತ್ತಿದ್ದರು. ಇದೀಗ ಆರ್ಮ್ಯಾಕ್ಸ್  ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿರುವುದು ಅಚ್ಚರಿ ಮೂಡಿಸಿದೆ. 

47

ಇನ್ನು ನಟಿ ರಶ್ಮಿಕಾ ಮಂದಣ್ಣ ಕೂಡ 10 ಲಿಸ್ಟ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಈ ಪ್ಟಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಸೌತ್ ಮತ್ತು ಬಾಲಿವುಡ್ ಎರಡು ಕಡೆ ಬ್ಯುಸಿ ಇರುವ ರಶ್ಮಿಕಾ ದೇಶದ ಜನಪ್ರಿಯ ನಟಿಯರಲ್ಲಿ 6ನೇ ಸ್ಥಾನದಲ್ಲಿದ್ದಾರೆ.    

57

ಇನ್ನು ಉಳಿದಂತೆ 10 ಲಿಸ್ಟ್ ನಲ್ಲಿ ಸಮಂತಾ ಮೊದಲ ಸ್ಥಾನ ಪಡೆದರೆ ನಂತರ ಕ್ರಮವಾಗಿ ಅಲಿಯಾ ಭಟ್ ಎರಡನೇ ಸ್ಥಾನದಲ್ಲಿದ್ದಾರೆ. ನಯನತಾರಾ, ಕಾಜಲ್ ಅಗರ್ವಾಲ್, ದೀಪಿಕಾ ಪಡುಕೋಣೆ, ರಶ್ಮಿಕಾ ಮದಂಣ್ಣ, ಕೀರ್ತಿ ಸುರೇಶ್, ಕತ್ರಿನಾ ಕೈಫ್, ಪೂಜಾ ಹೆಗ್ಡೆ, ಅನುಷ್ಕಾ ಶೆಟ್ಟಿ ಹೆಸರಿದೆ. 

67

ನಟಿ ಸಮಂತಾ ಬಗ್ಗೆ ಹೇಳುವುದಾದರೆ ಸಮಂತಾ ಈ ವರ್ಷ ವಿಚ್ಛೇದನ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿದ್ದರು. ಸಿನಿಮಾ ವಿಚಾರಕ್ಕೆ ಬರುವುದಾದರೆ ಸಮಂತಾ ಶಾಕುಂತಲಂ, ಖುಷಿ, ಯಶೋಧ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶಾಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದು ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ ನವೆಂಬರ್ ನಲ್ಲಿ ರಿಲೀಸ್ ಆಗುತ್ತಿದೆ. 

77

ಇನ್ನು ಇತ್ತೀಚಿಗೆ ಸಮಂತಾ ಅನಾರೋಗ್ಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ವಿದೇದಲ್ಲಿ ಚಿಕಿತ್ಸೆ ಪಡೆಯಲು ಯೋಚಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಸಮಂತಾ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಚರ್ಮ ರೋಗದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories