ಶ್ರುತಿ ಹಾಸನ್‌ ಮುಖಕ್ಕೆ ಏನಾಯಿತು? ಸೆಲ್ಫಿ ಶೇರ್ ಮಾಡಿ ಕಮಲ್ ಪುತ್ರಿ ಹೇಳಿದ್ದೇನು?

Published : Nov 30, 2022, 10:39 AM IST

ಸಕಲಕಲಾ ವಲ್ಲಭ ಕಮನ್ ಹಾಸನ್ ಪುತ್ರಿ ಶ್ರುತಿ ಹಾಸನ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದ್ಯ ಶ್ರುತಿ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

PREV
16
ಶ್ರುತಿ ಹಾಸನ್‌ ಮುಖಕ್ಕೆ ಏನಾಯಿತು? ಸೆಲ್ಫಿ ಶೇರ್ ಮಾಡಿ ಕಮಲ್ ಪುತ್ರಿ ಹೇಳಿದ್ದೇನು?

ಸಕಲಕಲಾ ವಲ್ಲಭ ಕಮನ್ ಹಾಸನ್ ಪುತ್ರಿ ಶ್ರುತಿ ಹಾಸನ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿ ಬರ್ತಿರುವ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಶ್ರುತಿ ಶೇರ್ ಮಾಡಿರುವ ಫೋಟೋಗಳು ಈಗ ಅಚ್ಚರಿ ಮೂಡಿಸಿವೆ. 

26

ಫೋಟೋಗಳನ್ನು, ಸೆಲ್ಫಿಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಶ್ರುತಿ ಹಂಚಿಕೊಂಡ ಫೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

36

ಶ್ರುತಿ ಹಾಸನ್ ಊದಿಕೊಂಡಿರುವ ಮುಖ ಮತ್ತು ತುಟಿ ಹಾಗೂ ಕೆಟ್ಟದಾಗಿ ಹರಡಿಕೊಂಡಿರುವ ಕೂದಲಿನ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಶ್ರುತಿ ಹಾಸನ್ ಸೆಲ್ಫಿ ನೋಡಿ ಏನಾಯಿತು ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಮೇಕಪ್ ಇಲ್ಲದೆ ಸಹಜ ಫೋಟೋ ಹಂಚಿಕೊಂಡ ಶ್ರುತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.   

46

ಫೋಟೋ ಶೇರ್ ಮಾಡಿ, 'ಜಗತ್ತಿನಲ್ಲಿ ಪರಿಪೂರ್ಣ ಸೆಲ್ಫಿ ಮತ್ತು ಫೋಟೋಗಳು ಇವೆ.  ಯಾವುದೇ ಎಡಿಟ್ ಇಲ್ಲದ ಫೋಟೋಗಳು ಇಲ್ಲಿವೆ. ಕೆಟ್ಟದಾದ ಕೂದಲು, ಜ್ವರ, ಊದಿಕೊಂಡ ಮುಖ, ಪೀರಿಯಡ್ಸ್ ದಿನದ ಫೋಟೋಗಳು. ಇದನ್ನು ಕೂಡ ಎಂಜಾಯ್ ಮಾಡುತ್ತೀರಿ ಅಂದುಕೊಂಡಿದ್ದೀನಿ' ಎಂದು ಹೇಳಿದ್ದಾರೆ. 

56

ಶ್ರುತಿ ಹಾಸನ್ ಇತ್ತೀಚಿನ ದಿನಗಳಲ್ಲಿ ಸಿನಿಮಾ ವಿಚಾರಕ್ಕಿಂತ ಹೆಚ್ಚಾಗಿ ಬಾಯ್ ಫ್ರೆಂಡ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸಂತಾನು ಹಜಾರಿಕ ಜೊತೆ ಶ್ರುತಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಬ್ಬರೂ ಆಗಾಗ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಅಲ್ಲದೆ ಬಾಯ್ ಫ್ರೆಂಡ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

66

ಶ್ರುತಿ ಹಾಸನ್ ಸದ್ಯ ಸಲಾರ್ ಸಿನಿಮಾ ಜೊತೆಗೆ ಇನ್ನು ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಜೊತೆ ಸಲಾರ್ ನಲ್ಲಿ ಮಿಂಚುತ್ತಿದ್ದಾರೆ. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.  ಇನ್ನು ವೀರ ಸಿಂಹ ರೆಡ್ಡಿ, ವೀರಯ್ಯ. ದಿ ಐ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories