ನಾಗ ಚೈತನ್ಯ ಅಕ್ಕಿನೇನಿ ಮತ್ತು ಸಾಯಿ ಪಲ್ಲವಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಲವ್ ಸ್ಟೋರಿ ಏಪ್ರಿಲ್ 16 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ಚಿತ್ರದ ತಯಾರಕರು ಸೋಮವಾರ ಸಂಜೆ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ.
ಈ ಚಿತ್ರವು ನಾನಿಯ ಟಕ್ ಜಗದೀಶ್ ಸಿನಿಮಾದ ಜೊತೆ ಕ್ಲಾಶ್ ಆಗಲಿದೆ. ಒಂದೇ ದಿನ ಎರಡು ಸಿನಿಮಾಗಳು ರಿಲೀಸ್ ಆಗಲಿವೆ.
ಪ್ರೊಡಕ್ಷನ್ ಹೌಸ್ ಶ್ರೀ ವೆಂಕಟೇಶ್ವರ ಸಿನೆಮಾಸ್ ಎಲ್ ಎಲ್ ಪಿ ತಮ್ಮ ಟ್ವಿಟ್ಟರ್‌ನಲ್ಲಿ ಹೊಸ ಪೋಸ್ಟರ್ ಜೊತೆ ಬಿಡುಗಡೆ ದಿನಾಂಕವನ್ನು ಎನೌನ್ಸ್ ಮಾಡಿದ್ದಾರೆ.
“ಏಪ್ರಿಲ್ 16 ರಂದು ಚಿತ್ರಮಂದಿರಗಳಲ್ಲಿ ಲವ್‌ಸ್ಟೋರಿಯ ಜಗತ್ತು, ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಲವ್ ಸ್ಟೋರಿ 2020 ರ ಬೇಸಿಗೆಯಲ್ಲಿ ಬಿಡುಗಡೆಯಾಗಬೇಕಿತ್ತು, ಆದರೆ ಕರೋನವೈರಸ್ ಲಾಕ್‌ಡೌನ್‌ನಿಂದಾಗಿ ಸಿನಿಮಾ ಚಿತ್ರೀಕರಣ ವಿಳಂಬವಾಗಿತ್ತು.
Suvarna News