ನಟಿ Sai Pallavi ಗೆ Filmfare ತಂದು ಕೊಟ್ಟ ಸಿನಿಮಾಗಳಿವು.. ಮಿಸ್ ಮಾಡ್ದೇ ನೋಡಿ

Published : Feb 26, 2026, 12:38 PM IST

Sai Pallavi: ನ್ಯಾಚುರಲ್ ಬ್ಯೂಟಿ ಮತ್ತು ತಮ್ಮ ನಟನೆಯಿಂದ ಮನಗೆದ್ದ ನಟಿ ಸಾಯಿ ಪಲ್ಲವಿ, ಅತಿ ಹೆಚ್ಚು ಫಿಲಂ ಫೇರ್ ಪಡೆದ ಹೊಸ ಜನರೇಶನ್ ನಟಿ ಎನ್ನುವ ಖ್ಯಾತಿ ಪಡೆದಿದ್ದು. ಇಲ್ಲಿದೆ ನಟಿಗೆ ಪ್ರಶಸ್ತಿ ತಂದು ಕೊಟ್ಟ ಸಿನಿಮಾಗಳ ಲಿಸ್ಟ್. ಮಿಸ್ ಮಾಡದೇ ನೋಡಿ. ಖಂಡಿತಾ ಇಷ್ಟವಾಗುತ್ತೆ. 

PREV
18
ಸಾಯಿ ಪಲ್ಲವಿ

 ದಕ್ಷಿಣ ಭಾರತದ ಖ್ಯಾತ ನಟಿಯಲ್ಲಿ ಒಬ್ಬರಾದ ಸಾಯಿ ಪಲ್ಲವಿ, ತಮ್ಮ ನ್ಯಾಚುರಲ್ ಬ್ಯೂಟಿ ಮತ್ತು ಅದ್ಭುತ ನಟನೆಯಿಂದ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದಿದ್ದಾರೆ. ಸದ್ಯ ಸಾಯಿ ಪಲ್ಲವಿ ಅತಿ ಹೆಚ್ಚು ಫಿಲಂ ಫೇರ್ ಪಡೆದ ಹೊಸ ಜನರೇಶನ್ ನಟಿ ಎನ್ನುವ ಖ್ಯಾತಿ ಪಡೆದಿದ್ದಾರೆ. ಇಲ್ಲಿವರೆಗೆ ಪಲ್ಲವಿ ಒಟ್ಟು 7 ಫಿಲಂ ಪೇರ್ ಪ್ರಶಸ್ತಿ ಪಡೆದಿದ್ದು, ಯಾವೆಲ್ಲಾ ಸಿನಿಮಾಗಳಿಗೆ ಅವರಿಗೆ ಪ್ರಶಸ್ತಿ ಬಂದಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

28
ಪ್ರೇಮಂ (ಮಲಯಾಲಂ)

‘ಪ್ರೇಮಂ’ ಸಿನಿಮಾ ಮೂಲಕ ಸಾಯಿ ಪಲ್ಲವಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ನಂತರ ನಟಿ ಹಿಂದಿರುಗಿ ನೋಡಲೇ ಇಲ್ಲ. ಮೊದಲ ಸಿನಿಮಾದಲ್ಲಿ ನಟನೆಗಾಗಿ ಸಾಯಿ ಪಲ್ಲವಿ ಮೊದಲ ಫಿಲಂ ಫೇರ್ ಪ್ರಶಸ್ತಿ ಪಡೆದರು. ಇದು ಸಮಯ ಕಳೆದ ಹಾಗೆ ಪ್ರೀತಿ ಯಾವ ರೀತಿಯೆಲ್ಲಾ ಬದಲಾಗುತ್ತದೆ ಎನ್ನುವ ಕಥೆಯನ್ನು ಹೊಂದಿದೆ. ಈ ಸಿನಿಮಾದ ಮಲರ್ ಪಾತ್ರ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿತ್ತು.

38
ಶ್ಯಾಮ್ ಸಿಂಗ್ ರಾಯ್ (ತೆಲುಗು)

ಸಾಯಿ ಪಲ್ಲವಿ ಮತ್ತು ನಾಣಿ ಅಭಿನಯದ ಪುನರ್ಜನ್ಮದ ಕಥೆಯನ್ನು ಹೊಂದಿರುವ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ದೇವದಾಸಿಯಾಗಿ ಅಂದರೆ ದೇವಸ್ಥಾನದಲ್ಲಿ ನೃತ್ಯ ಮಾಡುವವಳಾಗಿ ನಟಿಸಿದ್ದು, ಒಂದು ಅತ್ಯದ್ಭುತವಾದ ಸಿನಿಮಾ ಇದಾಗಿತ್ತು. ಸೂಪರ್ ಹಿಟ್ ಕೂಡ ಆಗಿತ್ತು.

48
ಲವ್ ಸ್ಟೋರಿ (ತೆಲುಗು)

ಶೇಖರ್ ಕಮ್ಮುಲ ನಿರ್ದೇಶನದ ಸಿನಿಮಾದಲ್ಲಿ ಸಾಯಿ ಪಲ್ಲವಿ ಜೊತೆ ನಾಗ ಚೈತನ್ಯ ನಟಿಸಿದ್ದಾರೆ. ಈ ಚಿತ್ರವು ಮ್ಯೂಸಿಕಲ್ ರೊಮ್ಯಾಂಟಿಕ್ ಡ್ರಾಮಾ ಆಗಿದ್ದು, ಕ್ರಿಶ್ಚಿಯನ್ ಜೂಂಬಾ ಟ್ರೈನರ್ ಪ್ರೀತಿಯಲ್ಲಿ ಬೀಳುವ ಹಿಂದೂ ಹುಡುಗಿಯ ಕಥೆ ಇದಾಗಿದೆ.

58
ಫಿದಾ (ತೆಲುಗು)

ವರುಣ್ ತೇಜ್ ಮತ್ತು ಸಾಯಿ ಪಲ್ಲವಿ ನಟಿಸಿರುವ ಸಿನಿಮಾ ಫಿದಾ. NRI ಹುಡುಗ ಮತ್ತು ಹಳ್ಳಿ ಹುಡುಗಿಯ ನಡುವಿನ ಪ್ರೀತಿ, ಇಬ್ಬರ ನಡುವೆ ಬರುವ ವಿಭಿನ್ನತೆ, ಮತ್ತೆ ಅದನ್ನು ಸರಿ ಮಾಡಿ, ಇಬ್ಬರು ಹೇಗೆ ಒಂದಾಗುತ್ತಾರೆ ಎಂದು ತೋರಿಸಿದ ಸುಂದರವಾದ ಪ್ರೇಮ ಕಥೆ ಇದಾಗಿದೆ.

68
ಗಾರ್ಗಿ (ತಮಿಳು)

ಇದೊಂದು ಪ್ರತಿಯೊಬ್ಬರು ನೋಡಲೇಬೇಕಾದ ಅದ್ಭುತವಾದ ಸಿನಿಮಾ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಸ್ಕೂಲ್ ಟೀಚರ್ ಪಾತ್ರದಲ್ಲಿ ನಟಿಸಿದ್ದು, ಮಗುವಿನ ಲೈಂಗಿಕ ಶೋಷಣೆ ಕೇಸ್ ನಲ್ಲಿ ಸಿಕ್ಕಿ ಬಿದ್ದ ತಮ್ಮ ತಂದೆಯನ್ನು ನಿರಪರಾಧಿ ಎಂದು ಸಾಬೀತು ಪಡಿಸಲು ಹೋರಾಡುವ ಕಥೆಯನ್ನು ಹೊಂದಿದೆ.

78
ವಿರಾಟ ಪರ್ವಂ (ತೆಲುಗು)

ರಾಣಾ ದಗ್ಗುಭಾಟಿ ಜೊತೆ ಸಾಯಿ ಪಲ್ಲವಿ ನಟಿಸಿದ್ದ ಸಿನಿಮಾ ಇದಾಗಿದೆ. ಕ್ರಾಂತಿಕಾರಿ ಯುವಕ ರವಿಶಂಕರ್‌ನನ್ನು ಪ್ರೀತಿಸುವ ವೆನ್ನೆಲಾ ಎಂಬ ಯುವತಿ, ತನ್ನ ಮದುವೆಯನ್ನು ಮುರಿದುಕೊಂಡು, ತಾನು ಪ್ರೀತಿಸುವ ವ್ಯಕ್ತಿಯೊಂದಿಗೆ ಮತ್ತೆ ಒಂದಾಗಲು ಹೊರಡುವಾಗ ಏನೆಲ್ಲಾ ತೊಂದರೆಗೆ ಸಿಲುಕಿಕೊಳ್ಳುತ್ತಾಳೆ ಎನ್ನುವ ಕಥೆ ಇದಾಗಿದೆ.

88
ಅಮರನ್ (ತಮಿಳು)

ಭಾರತೀಯ ಸೇನೆಯ ರಜಪೂತ್ ರೆಜಿಮೆಂಟ್‌ನಲ್ಲಿ ನಿಯೋಜಿತ ಅಧಿಕಾರಿಯಾಗಿದ್ದ ಮೇಜರ್ ಮುಕುಂದ್ ವರದರಾಜನ್ ಅವರ ನಿಜ ಜೀವನದ ಕಥೆ ಹೊಂದಿದ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಸಿವ ಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ನಟಿಸಿದ್ದಾರೆ. ಸಾಯಿ ಪಲ್ಲವಿ ಪವರ್ ಫುಲ್ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories