Published : Mar 04, 2025, 08:26 AM ISTUpdated : Mar 04, 2025, 08:30 AM IST
ಸಾಯಿ ಪಲ್ಲವಿ ಹೆಚ್ಚಾಗಿ ಮೇಕಪ್ ವಸ್ತುಗಳನ್ನು ಬಳಸೋದಿಲ್ಲ. ಪ್ರತಿಯೊಂದು ಸಿನಿಮಾದಲ್ಲೂ ಅವರು ನ್ಯಾಚುರಲ್ ಆಗಿಯೇ ಕಾಣಿಸ್ತಾರೆ. ಅನಿವಾರ್ಯ ಅಂದ್ರೆ ಮಾತ್ರ ಸ್ವಲ್ಪ ಲೈಟಾಗಿ ಮೇಕಪ್ ಮಾಡ್ತಾರೆ. ಆದ್ರೆ ಸಾಯಿ ಪಲ್ಲವಿ ರೆಗ್ಯುಲರ್ ಆಗಿ ಯೂಸ್ ಮಾಡೋ ಎರಡು ಮೇಕಪ್ ಪ್ರಾಡಕ್ಟ್ಸ್ ಏನು ಅಂತ ನಿಮಗೆ ಗೊತ್ತಾ?
ಸಾಯಿ ಪಲ್ಲವಿ ನ್ಯಾಚುರಲ್ ಬ್ಯೂಟಿ. ಕಥೆ ಇಷ್ಟ ಆದ್ರೆ ಮಾತ್ರ ಸಿನಿಮಾಗಳನ್ನ ಮಾಡ್ತಾರೆ. ಇತ್ತೀಚೆಗೆ ಅವರ ಟೈಮ್ ಚೆನ್ನಾಗಿ ನಡೀತಿದೆ. ಎರಡು ಸಿನಿಮಾಗಳು ಮಾಡಿದ್ರೆ, ಆ ಎರಡು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆದವು
26
ಸಾಯಿ ಪಲ್ಲವಿ ತಂಡೆಲ್ ಸಿನಿಮಾ ಕಲೆಕ್ಷನ್ ರಿಪೋರ್ಟ್ ರಿಲೀಸ್
ಶಿವಕಾರ್ತಿಕೇಯನ್ ಜೊತೆ ಮಾಡಿದ ಅಮರನ್ ಸಿನಿಮಾ ಅದ್ಭುತವಾದ ರೆಸ್ಪಾನ್ಸ್ ಪಡೆದುಕೊಂಡಿದೆ. ಅಷ್ಟೇ ಅಲ್ಲ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಈ ರಿಯಲ್ ಲೈಫ್ ಸ್ಟೋರಿ. ಇನ್ನು ತೆಲುಗಿನಲ್ಲಿ ನಾಗಚೈತನ್ಯ ಜೊತೆ ನಟಿಸಿದ ತಾಂಡೆಲ್ ಮೂವಿ ಕೂಡ ಸೂಪರ್ ಹಿಟ್ ಆಗಿದೆ.
100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಸಿನಿಮಾ. ಹೀಗೆ ಸಕ್ಸೆಸ್ ನಲ್ಲಿ ತೇಲುತ್ತಿರುವ ಸಾಯಿ ಪಲ್ಲವಿ ಸದ್ಯಕ್ಕೆ ಬಾಲಿವುಡ್ ನಲ್ಲಿ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂತ ಹೇಳಲಾಗ್ತಿದೆ.
36
ಸಾಯಿ ಪಲ್ಲವಿ
ಎಲ್ಲಾ ಹೀರೋಯಿನ್ ತರ ಅಲ್ಲ ಸಾಯಿ ಪಲ್ಲವಿ. ಸಿನಿಮಾಗಳ ವಿಚಾರದಲ್ಲಿ ಆಗಲಿ, ಆ ಸಿನಿಮಾಗಳ ಪಾತ್ರಗಳ ವಿಚಾರದಲ್ಲಿ ಆಗಲಿ ತುಂಬಾ ಸ್ಟ್ರಿಕ್ಟ್ ಆಗಿ ಇರ್ತಾರೆ. ಅಷ್ಟೇ ಅಲ್ಲ ಎಕ್ಸ್ ಪೋಸಿಂಗ್ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟ್ ಆಗಿ ಇರ್ತಾರೆ.
ಮುಖಕ್ಕೆ ಬಣ್ಣ, ತುಟಿಗೆ ಲಿಪ್ ಸ್ಟಿಕ್ ಹಾಕಿಕೊಂಡು, ಚಿಕ್ಕ ಡ್ರೆಸ್ ಹಾಕಿಕೊಳ್ಳೋದು ಅವರಿಗೆ ಅಭ್ಯಾಸ ಇಲ್ಲ. ತುಂಬಾ ಸಿಂಪಲ್ ಆಗಿ ನ್ಯಾಚುರಲ್ ಆಗಿ ಇರೋದು ಸಾಯಿ ಪಲ್ಲವಿಗೆ ಅಭ್ಯಾಸ. ಅವಶ್ಯಕತೆ ಇಲ್ಲ ಅಂದ್ರು ಬಣ್ಣಗಳನ್ನ ಹಚ್ಚಿಕೊಳ್ಳೋಕೆ ಇಷ್ಟ ಪಡೋದಿಲ್ಲ.
46
ಸಾಯಿ ಪಲ್ಲವಿ, ಅಮರನ್, ದುಲ್ಕರ್ ಸಲ್ಮಾನ್
ಸಾಯಿ ಪಲ್ಲವಿ ತನ್ನ ಮೇಕಪ್ ಬಗ್ಗೆ ತುಂಬಾ ಸಲ ಮಾತನಾಡಿದ್ದಾರೆ. ಈ ಹಿಂದೆ ಒಂದು ಇಂಟರ್ವ್ಯೂನಲ್ಲಿ ತನ್ನ ಮೇಕಪ್ ಬಗ್ಗೆ ಡೀಟೇಲ್ಸ್ ಹೇಳಿದ್ದಾರೆ. ಆ ವಿಡಿಯೋದಲ್ಲಿ ಸಾಯಿ ಪಲ್ಲವಿ ಮೇಕಪ್ ರೂಪದಲ್ಲಿ ತಾನು ಯೂಸ್ ಮಾಡುವ ವಸ್ತುಗಳ ಬಗ್ಗೆ ವಿವರಿಸಿದ್ದಾರೆ. ಅವರು ಏನು ಯೂಸ್ ಮಾಡ್ತಾರೆ ಅಂತ ನಿಮಗೆ ಗೊತ್ತಾ?
ಸಾಯಿ ಪಲ್ಲವಿಗೆ ಮೇಕಪ್ ಗಾಗಿ ಈ ಎರಡು ವಸ್ತುಗಳು ಮಾತ್ರ ಜಾಸ್ತಿ ಯೂಸ್ ಮಾಡ್ತಾರಂತೆ. ಸಾಯಿ ಪಲ್ಲವಿ ತನ್ನ ಮುಖಕ್ಕೆ ಸ್ಪೆಷಲ್ ಆಗಿ ಕ್ರೀಮ್ ಏನು ಹಚ್ಚೋದಿಲ್ಲ. ಆದ್ರೆ ಅವರ ಬ್ಯಾಗ್ ನಲ್ಲಿ ಒಂದು ಐಲೈನರ್, ಮಾಯಿಶ್ಚರೈಸರ್ ಕ್ರೀಮ್ ಇರುತ್ತೆ. ಈ ಎರಡು ವಸ್ತುಗಳನ್ನ ಮಿಸ್ ಮಾಡ್ದೆ ಬ್ಯಾಗ್ ನಲ್ಲಿ ಕ್ಯಾರಿ ಮಾಡ್ತಾರಂತೆ.
56
ಸಾಯಿ ಪಲ್ಲವಿ
ಆದ್ರೆ ಹೇರ್ ಗೆ ಸಂಬಂಧ ಪಟ್ಟ ಹಾಗೆ ಸಾಯಿ ಪಲ್ಲವಿ ಆಗಾಗ ಡಿಸೈನ್ ಚೇಂಜ್ ಮಾಡ್ಕೊಳ್ತಾ ಇರ್ತಾರಂತೆ. ಸಿನಿಮಾ ಪಾತ್ರಕ್ಕೆ ತಕ್ಕಂತೆ ಸಾಯಿ ಪಲ್ಲವಿ ತನ್ನ ಹೇರ್ ಸ್ಟೈಲ್ ಚೇಂಜ್ ಮಾಡ್ಕೊಳ್ತಾರೆ.
ಆದ್ರೆ ಹೆಚ್ಚಾಗಿ ಅವರ ಹೇರ್ ಸ್ಟ್ರೈಟ್ ಕರ್ಲಿಯಾಗಿ ಇರೋದನ್ನ ನಾವು ನೋಡ್ತಿವಿ. ಸಾಯಿ ಪಲ್ಲವಿ ರಾತ್ರಿ ಶೂಟಿಂಗ್ ಮಾಡುವಾಗ ಮಾತ್ರ ಐಲೈನರ್ ಯೂಸ್ ಮಾಡ್ತಾರೆ. ಕಣ್ಣು ಚೆನ್ನಾಗಿ ಕಾಣಿಸೋದಕ್ಕೆ ಜೊತೆಗೆ ಆಕರ್ಷಕವಾಗಿ ಕಾಣಿಸೋದಕ್ಕೆ ಐಲೈನರ್ ಯೂಸ್ ಮಾಡ್ತಾರಂತೆ.
66
ಗಾರ್ಗಿ, ವಿರಾಟಪರ್ವಂ ಸಿನಿಮಾಗಳಲ್ಲಿ ಸಾಯಿ ಪಲ್ಲವಿ ಯಾವುದೇ ಮೇಕಪ್ ಹಾಕಿಕೊಂಡಿಲ್ಲ. ಮುಖ ತೊಳೆದುಕೊಂಡು ಒರೆಸಿಕೊಂಡು ಶೂಟಿಂಗ್ ಗೆ ಬಂದಿದ್ದೀನಿ ಅಂತ ಸಾಯಿ ಪಲ್ಲವಿ ತಮಾಷೆಯಾಗಿ ಹೇಳಿದ್ದಾರೆ. ಸಿನಿಮಾ ಪೂರ್ತಿ ಸಾಯಿ ಪಲ್ಲವಿ ತನ್ನ ಮೇಕಪ್ ಗಾಗಿ ಕೇವಲ ಐಲೈನರ್ ಮಾತ್ರ ಯೂಸ್ ಮಾಡಿದ್ರಂತೆ.
ಇನ್ನು ತಾನು ಮಾಡುವ ಡಿಫರೆಂಟ್ ಕ್ಯಾರೆಕ್ಟರ್ ಗಳಿಗೆ ತಕ್ಕ ಹಾಗೆ ಹೇರ್ ಸ್ಟೈಲ್ ಅನ್ನು ತಾನೇ ಚೇಂಜ್ ಮಾಡ್ಕೊಳ್ತಾರಂತೆ. ಮೇಕಪ್ ಹಾಕಿಕೊಳ್ಳೋದಕ್ಕಿಂತ ಪಾತ್ರಕ್ಕೆ ತಕ್ಕಂತೆ ನಟಿಸೋದು ಮುಖ್ಯ ಅಂತ ಅವರು ನಂಬ್ತಾರೆ.