ಕೊನೆಗೂ ತನ್ನ ಸುಂದರ ಗುಂಗುರು ಕೂದಲಿನ ರಹಸ್ಯ ಬಾಯಿಬಿಟ್ಟ ಸಾಯಿ ಪಲ್ಲವಿ
First Published | May 27, 2020, 4:34 PM ISTನ್ಯಾಚುರಲ್ ಲುಕ್‌ನಿಂದಲ್ ನಮ್ಮನೆ ಹುಡುಗಿ ಎನಿಸುವಷ್ಟು ಅಭಿಮಾನಿಗಳಿಗೆ ಆಪ್ತಳಾಗಿ, ಸಿಕ್ಕಾಪಟ್ಟೆ ಫೇಮಸ್ ಆದ ಸೌತ್‌ಬ್ಯೂಟಿ ಸಾಯಿ ಪಲ್ಲವಿ. ಮಲೆಯಾಳಿ ಸಿನಿಮಾಗಳಿಂದ ಜನಪ್ರಿಯವಾದ ನಟಿ ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡುತ್ತಾರೆ. ನಟನೆಯೊಂದಿಗೆ ಸಾಯಿ ಪಲ್ಲವಿ ಒಳ್ಳೆಯ ಡ್ಯಾನ್ಸರ್ ಕೂಡ ಆಗಿದ್ದು, ದಕ್ಷಿಣದ ಮಾಧುರಿ ದಿಕ್ಷೀತ್ ಎಂದು ಕರೆಯಿಸಿಕೊಳ್ಳುತ್ತಾರೆ. ಸಾಯಿ ಪಲ್ಲವಿ ನೋ ಮೇಕಪ್ ಲುಕ್‌ನಿಂದ ಫ್ಯಾನ್ಸ್ ಹೃದಯ ಕದ್ದವರು, ಅಭಿಮಾನಿಗಳ ಹೃದಯ ಗೆದ್ದವರು. ಸುಂದರವಾದ ಉದ್ದ ಗುಂಗುರು ಕೂದಲ ಈ ಚೆಲುವೆ ಕೊನೆಗೂ ತನ್ನ ಕೂದಲಿನ ರಹಸ್ಯ ಬಾಯಿ ಬಿಟ್ಟಿದ್ದಾರೆ.