ಸುಶಾಂತ್ ಸಿಂಗ್ ರಜಪೂತ್(Sushant Singh Rajput) ಬಾಲಿವುಡ್‌ನ ಹ್ಯಾಂಡ್‌ಸಮ್ ನಟ ಇಹಲೋಕ ತ್ಯಾಜಿಸಿ 2 ವರ್ಷಗಳೇ ಕಳೆಯಿತು. ಇಂದಿಗೆ ಸರಿಯಾಗಿ (ಜೂನ್ 14, 2020) ಸುಶಾಂತ್ ಸಿಂಗ್ ಇನ್ನಿಲ್ಲ ಎನ್ನುವ ಸುದ್ದಿ ಬಾಲಿವುಡ್‌ಗೆ ಬರಸಿಡಿಲಿನಂತೆ ಬಂದು ಬಡಿದಿತ್ತು. ಬಾಂದ್ರದ ತನ್ನ ಅಪಾರ್ಟ್ನೆಂಟ್‌ನಲ್ಲಿ ಸುಶಾಂತ್ ಸಿಂಗ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ರೊಮ್ಯಾಂಟಿಕ್ ಫೋಟೋ ಶೇರ್ ಮಾಡುವ ಮೂಲಕ ಪ್ರಿಯತಮನನ್ನು ಸ್ಮರಿಸಿದ್ದಾರೆ. ಸುಶಾಂತ್ ಸಿಂಗ್ ಜೊತೆ ಕಳೆದ ಸುಂದರ ಕ್ಷಣಗಳ ಪೋಟೋ ಶೇರ್ ಮಾಡಿದ್ದಾರೆ.
ಸುಶಾಂತ್ ಜೊತೆಗಿನ ಫೋಟೋ ಹಂಚಿಕೊಂಡು ಪ್ರತಿದಿನ ಮಿಸ್ ಯು ಎಂದು ಹೇಳಿದ್ದಾರೆ. ಸುಶಾಂತ್ ಜೊತೆಗಿನ ಆಪ್ತವಾಗಿರುವ ಫೋಟೋವನ್ನು ರಿಯಾ ಶೇರ್ ಮಾಡಿದ್ದಾರೆ. ಸುಶಾಂತ್‌ಗೆ ಕಿಸ್ ಮಾಡುತ್ತಿರುವ ಫೋಟೋ, ರಿಯಾರನ್ನು ಸುಶಾಂತ್ ಎತ್ತಿಕೊಂಡಿರುವ ಪೋಟೋ ಸೇರಿದಂತೆ ತರಹೇವಾರಿ ಫೋಟೋ ಶೇರ್ ಮಾಡಿದ್ದಾರೆ.
sushant
ಸುಶಾಂತ್ ಸಿಂಗ್ ಸಾವಿನ ಬಳಿಕ ರಿಯಾ ಚಕ್ರವರ್ತಿ ಜೈಲು ಸೇರಿದ್ದರು. ಸುಶಾವಿನ ತನಿಖೆ ಆರಂಭಿಸಿದ ಸಿಬಿಐಗೆ ಡ್ರಗ್ಸ್ ಜಾಲ ಪತ್ತೆಯಾಗಿತ್ತು. ಬಳಿಕ ಪ್ರಕರಣ ಎನ್‌ಸಿಬಿಗೆ ವರ್ಗಾವಣೆಯಿತು. ಬಾಲಿವುಡ್‌ನ ಡ್ರಗ್ಸ್ ಜಾಲದ ಹಿಂದೆ ಬಿದ್ದ ಅಧಿಕಾರಿಗಳಿಗೆ ಘಾನುಘಟಿ ಕಲಾವಿದರು ಸಿಕ್ಕಿಬಿದ್ದರು. ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಕೂಡ ಜೈಲು ಸೇರಿದರು. ಅನೇಕ ತಿಂಗಳ ಬಳಿಕ ಬೇಲಿನ ಮೇಲೆ ಹೊರಬಂದರು.
ಸುಶಾಂತ್ ಅಸಹಜ ಸಾವು ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಮಾಡಿತ್ತು. ಸಾವಿನ ಬಳಿಕ ನಡೆದ ಅನೇಕ ಬೆಳವಣಿಗಳು ಬಾಲಿವುಡ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಸುಶಾಂತ್ ನಿಧನಹೊಂದಿ ಎರಡು ವರ್ಷ ಕಳೆದರು ಸಾವಿನ ತನಿಖೆ ಇನ್ನು ಸಂಪೂರ್ಣವಾಗಿಲ್ಲ. ಇನ್ನು ಸಿಬಿಐ ಅಂಗಳದಲ್ಲಿರುವ ಸುಶಾಂತ್ ಪ್ರಕರಣದ ಅಂತಿಮ ತೀರ್ಪು ಇನ್ನು ಹೊರಬಿದ್ದಿಲ್ಲ.
ಪ್ರತಿಭಾವಂತ ನಟ ಸುಶಾಂತ್ ಸಿಂಗ್ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಪವಿತ್ರ ರಿಸ್ತಾ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಪ್ರಸಿದ್ಧ ಪಡೆದ ಸುಶಾಂತ್ ಬಳಿಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 2013ರಲ್ಲಿ ರಿಲೀಸ್ ಆದ ಕೈ ಪೋ ಛೇ ಸಿನಿಮಾ ಮೂಲಕ ಸುಶಾಂತ್ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಮಿಂಚಿದರು.
ವರ್ಷಗಳ ವೃತ್ತಿ ಜೀವನದಲ್ಲಿ ಸುಶಾಂತ್ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಪ್ರತಿಭಾವಂತ ನಟನ ಪಯಣ ಅಲ್ಪಕಾಲಿಕವಾಗಿತ್ತು ಎನ್ನುವುದೆ ದುರಂತ. ಸುಶಾಂತ್ ಸಿಂಗ್ ಕಾಯ್ ಪೋ ಛೆ, ಡಿಟೆಕ್ಟಿವ್ ಬ್ಯೂಮ್ಕೇಶ್ ಬಕ್ಷಿ, ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ, ಛಿಛೋರೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.