ದಿ ಹಾಲಿವುಡ್ ರಿಪೋರ್ಟರ್ ಜೊತೆಗಿನ ಇಂಟರ್ವ್ಯೂನಲ್ಲಿ ರಶ್ಮಿಕ, "ಮನೆ ನನ್ನ ಸಂತೋಷದ ಜಾಗ. ಇದು ನನ್ನನ್ನು ಸ್ಟೇಬಲ್ ಆಗಿ ಇಡುತ್ತೆ, ನನಗೆ ಶಕ್ತಿ ಕೊಡುತ್ತೆ, ಸಕ್ಸಸ್ ಬರಬಹುದು, ಹೋಗಬಹುದು, ಆದ್ರೆ ಅದು ಶಾಶ್ವತ ಅಲ್ಲ ಅಂತ ನನಗೆ ಅನಿಸುತ್ತೆ. ಆದ್ರೆ ಮನೆ ಶಾಶ್ವತ.
ಹಾಗಾಗಿ, ನಾನು ಆ ಜಾಗದಿಂದ ಕೆಲಸ ಮಾಡ್ತೀನಿ. ನನಗೆ ಸಿಗೋ ಪ್ರೀತಿ, ಫೇಮ್, ಸ್ಟಾರ್‌ಡಮ್ ಎಷ್ಟೇ ಇದ್ರೂ, ನಾನು ಇನ್ನೂ ಒಬ್ಬ ಮಗಳು, ಒಬ್ಬ ಸಹೋದರಿ, ಒಬ್ಬ ಪಾರ್ಟ್ನರ್. ನನ್ನ ಆ ಪರ್ಸನಲ್ ಲೈಫ್‌ಗೆ ನಾನು ಗೌರವ ಕೊಡ್ತೀನಿ" ಅಂದಿದ್ದಾರೆ.