Wedding Anniversary: ಪತ್ನಿ ದೀಪಿಕಾಗೆ ಈ ರೀತಿ ಸರ್‌ಪ್ರೈಸ್‌ ನೀಡಿದ ರಣವೀರ್‌

Published : Nov 15, 2022, 05:48 PM IST

ರಣವೀರ್ ಸಿಂಗ್ (Ranveer Singh)  ಮತ್ತು ದೀಪಿಕಾ ಪಡುಕೋಣೆ (Deepika Padukone) ದಾಂಪತ್ಯ ಜೀವನದ ನಾಲ್ಕು ವರ್ಷಗಳನ್ನು ಪೂರೈಸಿದ್ದಾರೆ. ನಾಲ್ಕನೇ ವಿವಾಹ ವಾರ್ಷಿಕೋತ್ಸವದಂದು, ದಂಪತಿ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಆದರೆ ರಣವೀರ್ ತಮ್ಮ ಹೆಂಡತಿಗೆ ಸರ್‌ಪ್ರೈಸ್‌ ನೀಡಲು ಮರೆಯಲಿಲ್ಲ. ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ, ದೀಪಿಕಾಗೆ ಹೂವುಗಳು ಮತ್ತು ಚಾಕೊಲೇಟ್‌ಗಳನ್ನು ನೀಡಿ ರಣವೀರ್ ಅಚ್ಚರಿಗೊಳಿಸಿದ್ದರು. ಈ ಸಂದರ್ಭದ ಫೋಟೋವನ್ನು ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. 

PREV
19
Wedding Anniversary: ಪತ್ನಿ ದೀಪಿಕಾಗೆ ಈ ರೀತಿ ಸರ್‌ಪ್ರೈಸ್‌ ನೀಡಿದ ರಣವೀರ್‌

ಸೋಮವಾರ ಅಂದರೆ ನವೆಂಬರ್‌ 14 ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ವಿವಾಹ ವಾರ್ಷಿಕೋತ್ಸವವಾಗಿತ್ತು, ಆದರೆ ದುಃಖದ ಸಂಗತಿಯೆಂದರೆ ದೀಪಿಕಾರಿಗೆ ಇದು ಬ್ಯುಸಿ ಕೆಲಸದ ದಿನವಾಗಿತ್ತು.

29

ದೀಪಿಕಾ ತನ್ನ ಆಫೀಸ್‌ನಲ್ಲಿ ತಮ್ಮ ದಿನವನ್ನು ಕಳೆದರೆ, ರಣವೀರ್ ಪರ್ಫೆಕ್ಟ್  ಗಂಡನ ಪಾತ್ರವನ್ನು ನಿರ್ವಹಿಸಿದರು ಮತ್ತು ರಣವೀರ್‌ ಅನಿರೀಕ್ಷಿತವಾಗಿ ದೀಪಿಕಾರ ಆಫೀಸ್‌ಗೆ ಭೇಟಿ ನೀಡಿ ದಿನವನ್ನು ವಿಶೇಷ ಮತ್ತು ಸ್ಮರಣೀಯವಾಗಿಸಿದರು.

39

ವಿದೇಶ ಪ್ರವಾಸದಿಂದ ಮನೆಗೆ ಮರಳಿದ ರಣವೀರ್‌ ಹೂವುಗಳು ಮತ್ತು ಚಾಕೊಲೇಟ್‌ಗಳೊಂದಿಗೆ ಆಫೀಸ್‌ಗೆ ತೆರಳಿ ಪತ್ನಿಗೆ ಸರ್‌ಪ್ರೈಸ್‌ ನೀಡಿದರು.

49

ಫೋಟೋದಲ್ಲಿ ದೀಪಿಕಾ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಸಹೋದ್ಯೋಗಿಗಳು ಸುತ್ತಲೂ ನಿಂತಿದ್ದಾರೆ. ಈ ಫೋಟೋ ಹಂಚಿಕೊಂಡ ರಣವೀರ್,  'ಅವಳು ನಿಮ್ಮ ವಾರ್ಷಿಕೋತ್ಸವದಂದು ಕೆಲಸ ಮಾಡಬೇಕಾದಾಗ ನೀವು ಅವಳ ಕಚೇರಿಯಲ್ಲಿ ಅವಳಿಗೆ ಸರ್‌ಪ್ರೈಸ್‌ ನೀಡಬೇಕು' ಎಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.

59

'ಹೂಗಳು ಮತ್ತು ಚಾಕೊಲೇಟ್‌ಗಳ ಶಕ್ತಿಯನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ. ವಜ್ರಗಳು ಅಗತ್ಯವಿಲ್ಲ .ನನ್ನ ಸಲಹೆ ತೆಗೆದುಕೊಳ್ಳಿ ಮತ್ತು ನಂತರ ನನಗೆ ಧನ್ಯವಾದಗಳನ್ನು ಹೇಳಿ ಮಹನೀಯರೇ' ಎಂದೂ ವಿಶೇಷ ಟಿಪ್ಪಣಿಯನ್ನೂ ಅವರು ಬರೆದಿದ್ದಾರೆ.

69

ಈ ವರ್ಷದ ಆರಂಭದಲ್ಲಿ, ದೀಪಿಕಾ ಅವರನ್ನು ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭೇಟಿಯಾದಾಗ ರಣವೀರ್ ಪತ್ನಿಯ ನೆಚ್ಚಿನ ಚಾಕೊಲೇಟ್‌ನೊಂದಿಗೆ ಸರ್‌ಪ್ರೈಸ್‌ ನೀಡಿದ್ದರು. ದೀಪಿಕಾ ಜ್ಯೂರಿಯಾಗಿ  ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದರು

79

ಗೋಲಿಯೋನ್ ಕಿ ರಾಸ್ಲೀಲಾ ರಾಮಲೀಲಾ ಚಿತ್ರದಲ್ಲಿ ದಂಪತಿ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರದ ನಂತರವೇ ಇಬ್ಬರ ನಡುವಿನ ಸಂಬಂಧ ಬಯಲಿಗೆ ಬಂದಿತ್ತು. ಇಬ್ಬರೂ 2018 ರಲ್ಲಿ ಮದುವೆಯಾಗಲು ನಿರ್ಧರಿಸಿದರು. 

89

ಬಾಲಿವುಡ್‌ನ ಈ ಪವರ್ ಜೋಡಿಯು ನವೆಂಬರ್ 14 ರಂದು ತಮ್ಮ 4ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ದೀಪಿಕಾ ಮತ್ತು ರಣವೀರ್ ಇಟಲಿಯಲ್ಲಿ ತಮ್ಮ ಹತ್ತಿರದ ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ವಿವಾಹವಾದರು.

99

ರಣವೀರ್ ಸಿಂಗ್ ಅವರ ಈ ವರ್ಷದ ಚಿತ್ರ ಜಯೇಶ್‌ಭಾಯ್ ಜೋರ್ದಾರ್ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಫ್ಲಾಪ್ ಎಂದು ಸಾಬೀತುಪಡಿಸಿದೆ. ಅವರ ಮುಂಬರುವ ಚಿತ್ರ ರೋಹಿತ್ ಶೆಟ್ಟಿ ಅವರ ಸರ್ಕಸ್, ಇದು ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಜೊತೆಯಾಗಿದ್ದಾರೆ. ಇದಲ್ಲದೆ, ಅವರು ರಾಕಿ ಔರ್‌ ರಾಣಿ ಕಿ ಪ್ರೇಮ್‌ಕಹಾನಿಯಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಫೈಟರ್, ಪಠಾಣ್ ಮತ್ತು ಪ್ರಾಜೆಕ್ಟ್ ಚಿತ್ರಗಳಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories