ಮದುವೆ ನಂತರ Alia Bhatಗೆ ಸಂಬಂಧದಲ್ಲಿ ಅತ್ತಿಗೆಯಾಗಲಿದ್ದಾರೆ Kareena Kapoor
First Published | Apr 9, 2022, 6:52 PM ISTಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಇಬ್ಬರೂ ಏಪ್ರಿಲ್ 17 ರಂದು ಸಪ್ತಪದಿ ತುಳಿಯಲ್ಲಿದ್ದಾರೆ ಮತ್ತು ಇದರೊಂದಿಗೆ ಆಲಿಯಾ ಭಟ್ ಕಪೂರ್ ಕುಟುಂಬದ ಸೊಸೆಯಾಗುತ್ತಾರೆ. ಕಪೂರ್ ಕುಟುಂಬದ ಸೊಸೆಯಾದ (Kapoor Family) ತಕ್ಷಣ ಆಲಿಯಾ ಅನೇಕ ಸಂಬಂಧಗಳ ಜೊತೆ ಬೆಸೆಯಲ್ಲಿದ್ದಾರೆ. ಅವರು ಕರೀನಾ ಕಪೂರ್ (Kareena Kapoor) ಅವರ ಮಕ್ಕಳಾದ ತೈಮೂರ್-ಜೆಹ್ ಅವರಿಗೆ ಅತ್ತೆಯಾದರೆ, ಮತ್ತೊಂದೆಡೆ, ಕರಿಷ್ಮಾ-ಕರೀನಾ ಮತ್ತು ರಿದ್ಧಿಮಾ ಕಪೂರ್ ಅವರ ಅತ್ತಿಗೆಯಾಗುತ್ತಾರೆ. ಈ ಮದುವೆಯ ಮೂಲಕ ರಣಬೀರ್ ಕಪೂರ್ ಪೂಜಾ ಭಟ್ ಅವರ ಭಾವ ಆಗಲಿದ್ದಾರೆ. ಆಲಿಯಾ ಅವರನ್ನು ಕರೀನಾ-ಕರಿಷ್ಮಾ ಮತ್ತು ರಿದ್ಧಿಮಾ ಅವರ ಅತ್ತಿಗೆ ಆಗುತ್ತಾರೆ