Ram Pothineni ಪ್ಯಾನ್‌ ಇಂಡಿಯಾ ಚಿತ್ರಕ್ಕೆ 'ಅಖಂಡ' ಡೈರೆಕ್ಟರ್ ಆಕ್ಷನ್ ಕಟ್!

First Published | Feb 19, 2022, 8:01 PM IST

ಟಾಲಿವುಡ್‌ನ ಹಿರಿಯ ನಟ ನಂದಮೂರಿ ಬಾಲಕೃಷ್ಣ-ಬೊಯಪಾಟಿ ಶ್ರೀನು ಕಾಂಬಿನೇಷನ್‌ನಲ್ಲಿ ತೆರೆ ಕಂಡಿದ್ದ 'ಅಖಂಡ' ಸಿನಿಮಾ ಸೂಪರ್ ಹಿಟ್‌ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಬೊಯಪಾಟಿ ಶ್ರೀನು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.
 

ಇತ್ತೀಚೆಗೆ 'ಅಖಂಡ' (Akhanda) ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಚಿತ್ರವನ್ನು ಟಾಲಿವುಡ್‌ಗೆ (Tollywood) ಕೊಟ್ಟಂತಹ ನಿರ್ದೇಶಕ ಬೊಯಪಾಟಿ ಶ್ರೀನು (Boyapati Srinu) ಇದೀಗ ಪ್ಯಾನ್ ಇಂಡಿಯಾ (Pan India) ಸಿನಿಮಾಗೆ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. 

ತೆಲುಗಿನ ಕ್ರೇಜಿ ಹೀರೋ ನಟ ರಾಮ್ ಪೋತಿನೇನಿ (Ram Pothineni), ನಿರ್ಮಾಪಕ ಶ್ರೀನಿವಾಸ ಚಿತ್ತೂರಿ (Srinivas Chitturi) ಅವರ ಜೊತೆಗೂಡಿ ಬೋಯಪಾಟಿ ಶ್ರೀನು ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದು, ಈ ಹೊಸ ಸಿನಿಮಾ ಅಭಿಮಾನಿಗಳಲ್ಲಿ (Fans) ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.

Tap to resize

ಈಗಾಗಲೇ ನಿರ್ಮಾಪಕ ಶ್ರೀನಿವಾಸ ಚಿತ್ತೂರಿ ತಮ್ಮದೇ ಬ್ಯಾನರ್‌ನ ಅಡಿಯಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಬ್ಲಾಕ್‌ಬಸ್ಟರ್‌ ಹಿಟ್ ಚಿತ್ರಗಳನ್ನು ನೀಡಿದ್ದು, ಸದ್ಯ ರಾಮ್ ಪೋತಿನೇನಿ ಅಭಿನಯದ ಮತ್ತು ಎನ್ ಲಿಂಗುಸಾಮಿ (N Lingusamy) ನಿರ್ದೇಶನದ 'ದಿ ವಾರಿಯರ್' (The Warrior) ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಚಿತ್ರದ ಬಗ್ಗೆ ಮಾತನಾಡಿರುವ ಶ್ರೀನು, 'ಅಖಂಡ' ಚಿತ್ರದ ಯಶಸ್ಸಿನ ಬಳಿಕ ರಾಮ್‌ ಪೋತಿನೇನಿ ಅವರಿಗೆ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಸಂತಸ ತರಿಸಿದೆ. ಈ ಚಿತ್ರ ಪ್ರೇಕ್ಷಕರಿಗೆ ಹೆಚ್ಚು ಮನರಂಜನೆ ನೀಡಲಿದೆ ಎಂದು ನಾನು ಭರವಸೆ ನೀಡುತ್ತೇನೆ' ಎಂದಿದ್ದಾರೆ. 

'ಬೊಯಪಾಟಿ ಶ್ರೀನು ಅವರ ನಿರ್ದೇಶನದಲ್ಲಿ ನಟಿಸಲು ಹೆಚ್ಚು ಉತ್ಸುಕನಾಗಿದ್ದೇನೆ. ಮೆಗಾ ಪ್ರಾಜೆಕ್ಟ್ ಚಿತ್ರದ ಚಿತ್ರೀಕರಣ, ನಟಿ ಯಾರೆಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುತ್ತದೆ' ಎಂದು ನಟ ರಾಮ್‌ ಪೋತಿನೇನಿ ತಿಳಿಸಿದ್ದಾರೆ. 

Latest Videos

click me!