ರಾಮ್‌ ಗೋಪಾಲ್‌ ವರ್ಮಾ ವರಸೆ ಬದಲಾಯ್ತಾ? ಚಡ್ಡಿ ಸುಂದರಿ ಕೈಬಿಟ್ಟು, ಸೀರೆ ಸುಂದರಿಗೆ ನಾಯಕಿ ಚಾನ್ಸ್‌ ಕೊಟ್ರು!

Published : Oct 03, 2023, 08:35 PM ISTUpdated : Oct 04, 2023, 11:30 AM IST

ಭಾರತದ ದಕ್ಷಿಣ ಚಿತ್ರರಂಗದ ರಾಮ್ ಗೋಪಾಲ್ ವರ್ಮಾ ವಿಚಿತ್ರ ಡೈರೆಕ್ಟರ್ ಆಗಿದ್ದಾರೆ. ಇತ್ತೀಚೆಗೆ ಅವರು ಹೊಸ ಆಫೀಸ್ ಓಪನ್ ಮಾಡಿದ್ದು, 'ಆರ್‌ಜಿವಿ ಡೆನ್‌' ಎಂದು ಹೆಸರಿಟ್ಟಿದ್ದಾರೆ. ಯಾವಾಗಲೂ ಚಡ್ಡಿ ಚಲುವೆ ಅಪ್ಸರಾಗೆ ನಾಯಕಿ ಚಾನ್ಸ್‌ ಕೊಡ್ತಿದ್ದ ಆರ್‌ಜಿವಿ ಈಗ ಸೀರೆ ಚೆಲುವೆಯ ಅಂದಕ್ಕೆ ಮನ ಸೋತಿದ್ದು, ನಾಯಕಿ ಚಾನ್ಸ್‌ ಕೊಡುವುದಾಗಿ ತಿಳಿಸಿದ್ದಾರೆ.

PREV
111
ರಾಮ್‌ ಗೋಪಾಲ್‌ ವರ್ಮಾ ವರಸೆ ಬದಲಾಯ್ತಾ? ಚಡ್ಡಿ ಸುಂದರಿ ಕೈಬಿಟ್ಟು, ಸೀರೆ ಸುಂದರಿಗೆ ನಾಯಕಿ ಚಾನ್ಸ್‌ ಕೊಟ್ರು!

ಬಿಕಿನಿ ಸುಂದರಿ, ಚಡ್ಡಿ ಸುಂದರಿ ಎಂದೇ ಖ್ಯಾತಿಯಾಗಿದ್ದ ಅಪ್ಸರಾ ರಾಣಿಯ ಜೊತೆಗೆ ಈಗ ಹೊಸ ಸೀರೆ ಸುಂದರಿಯೊಬ್ಬಳು ಆರ್‌ಜಿವಿ ಕಣ್ಣಿಗೆ ಬಿದ್ದಿದ್ದಾಳೆ. 

211

ಹಳದಿ ಸೀರೆಯುಟ್ಟು, ಕೈಯಲ್ಲಿ ಕ್ಯಾಮೆರಾ ಹಿಡಿದು ಪೋಸ್ ಕೊಟ್ಟಿರುವ ಅಪರಿಚಿತ ಸುಂದರಿಯ ವಿಡಿಯೋವನ್ನು ಶೇರ್‌ ಮಾಡಿದ ರಾಮ್ ಗೋಪಾಲ್ ವರ್ಮಾ Can someone tell me who she is? ಅಂತ ಪ್ರಶ್ನಿಸಿದ್ದರು.

311

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿದ್ದ ಸೀರೆ ಸುಂದರಿಗೆ ಮನಸೋತ ಆರ್‌ಜಿವಿ ಸಂಬಂಧಿತ ವಿಡಿಯೋ ರೀಲ್ಸ್‌ ಹಂಚಿಕೊಂಡು ಯಾರೀ ಸುಂದರಿ ಹುಡುಕಿಕೊಡಿ ಎಂದು ಟ್ವೀಟ್‌ ಮಾಡಿಕೊಂಡಿದ್ದರು.

411

ಇದಾದ ಒಂದೆರಡು ದಿನಗಳಲ್ಲಿ ಆ ಹುಡುಗಿ ಯಾರು ಅಂತ ಗೊತ್ತಾಯ್ತು ಎಂದು ಆರ್‌ಜಿವಿ ಸಾಮಾಜಿಕ ಜಾಲತಾಣ ಯುವತಿಯ ಇನ್‌ಸ್ಟಾಗ್ರಾಮ್‌ ಐಡಿಯನ್ನು ಪೋಸ್ಟ್ ಮಾಡಿದ್ದರು.  ಇದಾದ ನಂತರ ಸೀರೆ ಸುಂದರಿ ವೈರಲ್‌ ಆಗುತ್ತಿದ್ದಾಳೆ.

511

ಸೀರೆಯುಟ್ಟುಕೊಂಡು ಸುಂದರ ರೀಲ್ಸ್‌ಗಳನ್ನು ಮಾಡಿ ಹಂಚಿಕೊಂಡಿದ್ದ ನಟಿ ಕೇರಳದ ಶ್ರೀಲಕ್ಷ್ಮಿ ಸತೀಶನ್‌ ಎಂದು ಗುರಿತಿಸಲಾಗಿದೆ. ಈಕೆಯ ಹಲವು ವಿಡಿಯೋಗಳಿಗೆ ಸಾವಿರಾರು ಕಮೆಂಟ್ಸ್‌ಗಳು ಬರುತ್ತಿವೆ.

611

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ರಾಮ್ ಗೋಪಾಲ್ ವರ್ಮಾ ಒಬ್ಬರಾಗಿದ್ದಾರೆ. ಶಿವ, ರಂಗೀಲಾ, ಸತ್ಯ, ರಕ್ತಚರಿತ್ರೆ ಸೇರಿದಂತೆ ಅನೇಕ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟಿದ್ದಾರೆ. ಅನೇಕ ಹೊಸ ನಾಯಕಿಯರನ್ನು ಸಿನಿಮಾ ಕ್ಷೇತ್ರಕ್ಕೆ ಪರಿಚಯಿಸಿದ್ದಾರೆ.

711

ಕಳೆದ ಕೆಲವು ವರ್ಷಗಳಿಂದ ಹಾಟ್‌ ಬ್ಯೂಟಿ ಅಪ್ಸರಾ ರಾಣಿಗೋಸ್ಕರ ಕೆಲವು ಸಿನಿಮಾಗಳನ್ನು ಮಾಡಿದ್ದ ಆರ್‌ಜಿವಿ ಈಗ ಮನಸ್ಸು ಬದಲಿಸಿದ್ದಾರೆ. 

811

ಕಳೆದ ಕೆಲ ವರ್ಷಗಳಲ್ಲಿ ವಿದೇಶಗಳಿಗೆ ಹಾರಿದ್ದ ಆರ್‌ಜಿವಿ ಅಲ್ಲಿ ಫ್ಯಾಂಟಸಿ ಚಿತ್ರದ ಮಂದೆ ನಿಂತು ಪೋಸ್‌ ಕೊಟ್ಟಿದ್ದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಕ್ಕೆ ತರಹೇವಾರಿ ಕಮೆಂಟ್‌ ಬಂದಿದ್ದವು.

911

ಮಹಿಳಾ ವಿದ್ಯಾರ್ಥಿಗಳ ನಡುವೆ ಫೋಟೋಗೆ ಪೋಸ್‌ ಕೊಟ್ಟಿದ್ದ ಆರ್‌ಜಿವಿ ವಿದ್ಯಾರ್ಥಿಗಳೇ ನೀವು ಕೂಡ ನನ್ನ ಯೂನಿವರ್ಸಿಟಿಗೆ ಸೇರ್ತೀರಾ ಎಂದು ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು. 

1011

ಈಗ ರಾಮ್‌ ಗೋಪಾಲ್‌ ವರ್ಮಾ ಕಣ್ಣಿಗೆ ಬಿದ್ದಿದ್ದು, ಸಿನಿಮಾ ಚಾನ್ಸ್‌ ಕೂಡ ಗಿಟ್ಟಿಸಿಕೊಂಡಿದ್ದಾಳೆ. ಸ್ವತಃ ಆರ್‌ಜಿವಿ ಸೀರೆ ಹೆಸರಿನ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.

1111

ಆರ್‌ಜಿವಿ ಶೇರ್‌ ಮಾಡಿಕೊಂಡಿದ್ದ ವೀಡಿಯೊ ಪೋಸ್ಟ್ ವೈರಲ್ ಆಗಿದ್ದು, ಅದನ್ನು ಶ್ರೀಲಕ್ಷ್ಮಿ ಕೂಡ ರೀ ಪೋಸ್ಟ್‌ ಮಾಡಿಕೊಂಡಿದ್ದಾಳೆ. ಈಗ ಕೇರಳದ ಸೀರೆ ಚಲುವೆಗೆ ಹೊಂದಾಣಿಕೆ ಆಗುವ ಸಿನಿಮಾ ಸಿದ್ಧವಾಗಲಿದೆ.

click me!

Recommended Stories