ನಟ ವಿಜಯ್‌ಗೆ ಶಾಕ್ ಕೊಟ್ಟ ತ್ರಿಷಾ; ಮದುವೆ ಹೇಳಿಕೆ ಮೂಲಕ ಬ್ರೇಕ್ಅಪ್ ಸೂಚನೆ ಕೊಟ್ರಾ?

Published : May 05, 2025, 12:01 AM IST

ನಟಿ ತ್ರಿಷಾ ಹಾಗೂ ದಳಪತಿ ವಿಜಯ್ ಡೇಟಿಂಗ್ ಸುದ್ದಿ, ರಿಲೇಶನ್‌ಶಿಪ್ ಮಾತಗಳು ಹೊಸದೇನಲ್ಲ. ಇವರಿಬ್ಬರು ಮದುವೆಯಾಗುತ್ತಾರೆ ಅನ್ನೋ ಸುದ್ದಿ ಕೂಡ ಹಬ್ಬಿತ್ತು. ಆದರೆ ಸಿನಿಮಾ ಪ್ರಮೋಶನ್ ಒಂದರಲ್ಲಿ ತ್ರಿಷಾ ಮದುವೆ ಕುರಿತು ಹೇಳಿಕೆ ನೀಡಿ, ನಟ ವಿಜಯ್‌ಗೆ ಶಾಟ್ ಕೊಟ್ಟಿದ್ದಾರೆ.   

PREV
15
ನಟ ವಿಜಯ್‌ಗೆ ಶಾಕ್ ಕೊಟ್ಟ ತ್ರಿಷಾ; ಮದುವೆ ಹೇಳಿಕೆ ಮೂಲಕ ಬ್ರೇಕ್ಅಪ್ ಸೂಚನೆ ಕೊಟ್ರಾ?
ನಟಿ ತ್ರಿಷಾ ಕೃಷ್ಣನ್

ನಟಿ ತ್ರಿಷಾ ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ತ್ರಿಷಾ ಮದುವೆ ಮಾತುಗಳು, ನಟ ವಿಜಯ್ ಜೊತೆಗಿನ ಡೇಟಿಂಗ್ ಕುರಿತು ಸುದ್ದಿಗಳು ಹರಿದಾಡುತ್ತಲೇ ಇದೆ.  ವಿಜಯ್ ಹಾಗೂ ತ್ರಿಷಾ ಡೇಟಿಂಗ್‌ನಲ್ಲಿದ್ದಾರೆ, ಮದುವೆಯಾಗತ್ತಾರೆ ಅನ್ನೋ ಸುದ್ದಿ ಹಲವು ಬಾರಿ ಹರಿದಾಡಿದೆ. ಆದರೆ ಇದೀಗ ತ್ರಿಷಾ ಸಿನಿಮಾ ಪ್ರಮೋಶನ್ ವೇದಿಕೆಯಲ್ಲಿ ಮದುವೆ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ತ್ರಿಷಾ ಹೇಳಿಕೆಯಿಂದ ಶಾಕ್ ಆಗಿದ್ದು ಮಾತ್ರ ನಟ ವಿಜಯ್.  

25

'ಥಗ್ ಲೈಫ್' ಸಿನಿಮಾ ಪ್ರಮೋಷನ್‌ನಲ್ಲಿ ಮದುವೆ ಬಗ್ಗೆ ತ್ರಿಷಾ ಮಾತಾಡಿದ್ದಾರೆ. ಮದುವೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ತ್ರಿಷಾ,  ಮದುವೆ ಬಗ್ಗೆ ನಂಬಿಕೆ ಇಲ್ಲ, ಮದುವೆ ಆದ್ರೂ ಓಕೆ, ಇಲ್ಲ ಅಂದ್ರೂ ಓಕೆ ಅಂತ ಹೇಳಿದ್ದಾರೆ.. ಯಾವಾಗ ಮದುವೆ ಅಂತ ಗೊತ್ತಿಲ್ಲ ಅಂತ ಹೇಳಿದ್ದಾರೆ. ಈ ಮೂಲಕ ತನಗೆ ಮದುವೆ ಜೀವನದಲ್ಲಿ ಹೆಚ್ಚಿನ ನಂಬಿಕೆ ಇಲ್ಲಾ ಎಂದು ತ್ರಿಷಾ ಸ್ಪಷ್ಟಪಡಿಸಿದ್ದಾರೆ. 

35
ಡಿವೋರ್ಸ್ ಆಗೋದಾದರೆ ಮದುವೆ ಬೇಡ

ಮನಸ್ಸಿಗೆ ಇಷ್ಟ ಆದವರು ಸಿಕ್ಕಿದ್ರೆ ಮದುವೆ ಆಗ್ತೀನಿ. ಜೀವನಪೂರ್ತಿ ಜೊತೆ ಇರೋ ನಂಬಿಕೆ ಇದ್ರೆ ಮಾತ್ರ ಮದುವೆ. ಮದುವೆ ಆಗಿ ಡಿವೋರ್ಸ್ ತಗೋಳೋದು ಬೇಡ. ಅಸಂತೃಪ್ತಿಯಿಂದ ಬದುಕೋದು ಬೇಡ ಅಂತ ತ್ರಿಷಾ ಹೇಳಿದ್ದಾರೆ. ತ್ರಿಷಾ ನೀಡಿದ ಈ ಹೇಳಿಕೆ ವಿಜಯ್ ಕುರಿತಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಹೇಳಿಕೆ, ವಿಜಯ್ ಹಾಗೂ ತ್ರಿಷಾ ನಡುವೆ ಮದುವೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಅನ್ನೋ ಮಾತುಗಳಿಗೂ ಪುಷ್ಟಿ ನೀಡಿದೆ. 

45

ವಿಜಯ್ ಜೊತೆ ಲವ್ ಅಂತ ಗಾಳಿಸುದ್ದಿ ಇತ್ತು. 'ದಿ ಗೋಟ್' ಸಿನಿಮಾದಲ್ಲಿ ಐಟಂ ಸಾಂಗ್ ಕೂಡ ಇದೇ ಕಾರಣಕ್ಕೆ ಸೇರಿಸಲಾಗಿತ್ತು ಎಂದು ಹೇಳಲಾಗಿತ್ತು. ವಿಜಯ್, ಹೆಂಡ್ತಿಗೆ ಡಿವೋರ್ಸ್ ಕೊಟ್ಟು ತ್ರಿಷಾನ ಮದುವೆ ಆಗ್ತಾರೆ ಅಂತೆಲ್ಲಾ ಸುದ್ದಿ ಹಬ್ಬಿತ್ತು. ಈಗ ತ್ರಿಷಾ ಹೇಳಿದ್ದಕ್ಕೆ ನೆಟ್ಟಿಗರು ವಿಜಯ್ ಬಗ್ಗೆನೇ ಹೇಳ್ತಿದ್ದಾರಾ ಅಂತ ಚರ್ಚೆ ಮಾಡ್ತಿದ್ದಾರೆ.

55

ಮಣಿರತ್ನಂ 'ಥಗ್ ಲೈಫ್' ಸಿನಿಮಾದಲ್ಲಿ ತ್ರಿಷಾ ಹೀರೋಯಿನ್. ಸಿಂಬು ಜೊತೆ ನಟಿಸ್ತಿದ್ದಾರೆ. ಶುಕ್ರವಾರ ಹಾಡು ರಿಲೀಸ್ ಆಗಿದೆ. ಪ್ರೆಸ್ ಮೀಟ್ ನಲ್ಲಿ ಕಮಲ್, ಸಿಂಬು, ಮಣಿರತ್ನಂ, ತ್ರಿಷಾ ಇದ್ರು. ಜೂನ್ 5 ಕ್ಕೆ ಸಿನಿಮಾ ರಿಲೀಸ್. ಇದೇ ವೇಳೆ ಹಲವು ಸಿನಿಮಾಗಳಲ್ಲಿ ತ್ರಿಷಾ ತೊಡಗಿಸಿಕೊಂಡಿದ್ದಾರೆ. ವಯಸ್ಸು 40 ದಾಟಿದರೂ ತ್ರಿಷಾ ಈಗಲೂ 20ರ ಯುವತಿಯರನ್ನೇ ನಾಚಿಸುವಂತಿದ್ದಾರೆ. 

Read more Photos on
click me!

Recommended Stories