ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಈ ಸಂಕ್ರಾಂತಿಗೆ ಗೇಮ್ ಚೇಂಜರ್ ಸಿನಿಮಾದಿಂದ ಬರ್ತಿದ್ದಾರೆ. ಜನವರಿ 10 ರಂದು ವಿಶ್ವದಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದೆ. ಶಂಕರ್ ನಿರ್ದೇಶನದ ಗೇಮ್ ಚೇಂಜರ್‌ನಲ್ಲಿ ಚರಣ್ ಜೋಡಿಯಾಗಿ ಕಿಯಾರಾ ಅದ್ವಾನಿ, ಅಂಜಲಿ ನಟಿಸಿದ್ದಾರೆ. ಇವರ ಜೊತೆಗೆ ಶ್ರೀಕಾಂತ್, ಎಸ್ ಜೆ ಸೂರ್ಯ, ಸಮುದ್ರಖನಿ, ಸುನಿಲ್, ನವೀನ್ ಚಂದ್ರ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.