ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನ ದಂಪತಿಗೆ ಕಳೆದ ವರ್ಷ ಕ್ಲಿನ್ ಕಾರಾ ಎಂಬ ಮುದ್ದಾದ ಮಗಳು ಜನಿಸಿದಳು. ರಾಮ್ ಚರಣ್ ಮತ್ತು ಉಪಾಸನ ಮದುವೆಯಾಗಿ ಹತ್ತು ವರ್ಷಗಳ ನಂತರ ಜನಿಸಿದ ಮುದ್ದು ಮಗಳು ಕ್ಲಿನ್ ಕಾರಾ. ಮೆಗಾ ಫ್ಯಾಮಿಲಿ ಮಗುವನ್ನು ಅಕ್ಕರೆಯಿಂದ ಸಾಕುತ್ತಿದೆ.
ಕ್ಲಿನ್ ಕಾರಾ ಹೇಗಿರುತ್ತಾಳೆ, ಯಾರನ್ನ ಹೋಲುತ್ತಾಳೆ ಅಂತ ಮೆಗಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮುಖವನ್ನು ಮಾತ್ರ ಸ್ಪಷ್ಟವಾಗಿ ತೋರಿಸದೆ ಟೀಸ್ ಮಾಡ್ತಿದ್ದಾರೆ. ಉಪಾಸನ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ.
ವೆಂಕಟೇಶ್ವರ ಸ್ವಾಮಿ ಉತ್ಸವಗಳಲ್ಲಿ ತನ್ನ ಮಗಳಿಗೂ ಭಾಗವಹಿಸುವ ಅವಕಾಶ ಸಿಕ್ಕಿದೆ ಎಂದು ಉಪಾಸನ ತಿಳಿಸಿದ್ದಾರೆ. ಅನಿಲ್ ಕ್ಲಿನ್ ಕಾರಾಳನ್ನು ಎತ್ತಿಕೊಂಡಿದ್ದಾರೆ. ಒಂದು ಕಡೆಯಿಂದ ಕ್ಲಿನ್ ಕಾರಾಳ ಮುಖ ಕಾಣಿಸ್ತಿದೆ.
ಕ್ಲಿನ್ ಕಾರಾಳ ಮುಖ ಸ್ವಲ್ಪ ಕಾಣಿಸಿಕೊಂಡ ತಕ್ಷಣ ಅಭಿಮಾನಿಗಳು ತಮಗೆ ತೋಚಿದಂತೆ ಕಾಮೆಂಟ್ ಮಾಡ್ತಿದ್ದಾರೆ. ಕೆಲವರು ಕ್ಲಿನ್ ಕಾರಾ ರಾಮ್ ಚರಣ್ ಅವರನ್ನೇ ಹೋಲುತ್ತಿದ್ದಾರೆ ಅಂತ ಹೇಳ್ತಿದ್ದಾರೆ. ಕಳೆದ ವರ್ಷ ಜೂನ್ 20 ರಂದು ಕ್ಲಿನ್ ಕಾರಾ ಜನಿಸಿದಳು.