ಬಿಗ್‌ಬಾಸ್ 13 ಸ್ಪರ್ಧಿ ನಟಿ ರಾಖಿ ಸಾವಂತ್ ಅವರು ಮಸ್ತಾನಿಯಾಗಿದ್ದಾರೆ. ನಟಿಯ ಮಸ್ತಾನಿ ಲುಕ್ ಈಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಮಸ್ತಾನಿ ಲುಕ್‌ನಲ್ಲಿ ನಟಿ ರಸ್ತೆಯಲ್ಲಿ ತಿರುಗುತ್ತಿರುವುದು ಕಂಡುಬಂದಿದೆ. ತಾನು ತನ್ನ ಬಾಜಿರಾವ್‌ನನ್ನು ಹುಡುಕುತ್ತಿದ್ದೇನೆ ಎಂದಿದ್ದಾರೆ ರಾಖಿ.
ಕೊರೋನಾದಿಂದಾಗಿ ನನ್ನ ಪತಿ ರಿತೇಷ್‌ನನ್ನು ಭೇಟಿಯಾಗಲು ಸಾಧ್ಯವಾಗ್ತಿಲ್ಲ. ನಚ್ ಬಲಿಯೇ ಮೂಲಕ ಆತನನನ್ನು ಭೇಟಿಯಾಗಬಹುದೆಂದು ಶೋ ಸೈನ್ ಮಾಡಿದೆ, ಅದೂ ಕ್ಯಾನ್ಸಲ್ ಆಯ್ತು ಎಂದು ದುಃಖಿಸಿದ್ದಾರೆ.
ಬಿಗ್‌ಬಾಸ್ ನಂತರ ಖತರೋಂಕಿ ಖಿಲಾಡಿಯಲ್ಲೂ ಭಾಗವಹಿಸಲು ಸಾಧ್ಯವಾಗಲಿಲ್ಲ. ನಾನು ಖುಷಿಯಾಗಿಲ್ಲ ಎಂದಿದ್ದಾರೆ.
ರಾಖಿ ಬಹುತೇಕ ಎಲ್ಲಾ ದಿನ ಹೊರಗಡೆ ಬರುತ್ತಾರೆ. ತರಕಾರಿ, ಹಣ್ಣು, ಜಿಮ್ ಎಂದು ಪಪ್ಪಾರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗುತ್ತಿರುತ್ತಾರೆ.
ತಮ್ಮ ಕಾಮೆಡಿ, ಘಟನೆಗಳ ಬಗ್ಗೆ ಪ್ರತಿಕ್ರಿಯಿಸುತ್ತಾ ಜನರನ್ನು ರಂಜಿಸುತ್ತಿರುತ್ತಾರೆ ನಟಿ