ಜನವರಿ ತಿಂಗಳಲ್ಲಿ ಮತ್ತೆ ನಾಲ್ಕು ದಿನ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತೇನೆ. ಇದು ಯೂನಿವರ್ಸಲ್ ಕಂಟೆಂಟ್ ಸಿನಿಮಾ. ನಿರ್ದೇಶಕ ನೆಲ್ಸನ್ ಅವರು ರಜನಿಕಾಂತ್ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಶಿವಣ್ಣ ಹೇಳಿದರು.
ಸೂಪರ್‌ಸ್ಟಾರ್ ರಜನಿಕಾಂತ್ ಅವರ ‘ಜೈಲರ್ 2’ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟಿಸುತ್ತಿರುವುದು ಅಧಿಕೃತವಾಗಿದೆ. ಈ ಕುರಿತು ಶಿವಣ್ಣ ಸ್ಪಷ್ಟನೆ ನೀಡಿದ್ದಾರೆ.
26
ಗೆಸ್ಟ್ ರೋಲ್ ಪಾತ್ರ ಆಗಿರಲ್ಲ
ತಮಿಳುನಾಡಿನಲ್ಲಿ 45 ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಶಿವಣ್ಣ, ಜೈಲರ್ 2ನಲ್ಲಿ ತಮ್ಮ ಪಾತ್ರ ಗೆಸ್ಟ್ ರೋಲ್ ಆಗಿರಲ್ಲ. ಅದಕ್ಕೂ ಮಿಗಿಲು ಎಂದು ಬಹಿರಂಗಪಡಿಸಿದ್ದಾರೆ.
36
ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೇನೆ
‘ಜೈಲರ್’ ಎಲ್ಲಿಗೆ ನಿಂತಿತ್ತೋ, ಅಲ್ಲಿಂದಲೇ ‘ಜೈಲರ್ 2’ ಕತೆ ಶುರುವಾಗುತ್ತದೆ. ನನ್ನ ಪಾತ್ರವೂ ಸಹ. ಅಲ್ಲದೆ, ಈ ಬಾರಿ ಅತಿಥಿ ಪಾತ್ರಕ್ಕಿಂತ ಮೀರಿದ ಪಾತ್ರವಿದೆ. ಈಗಾಗಲೇ ಒಂದು ದಿನ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೇನೆ.
ಜನವರಿ ತಿಂಗಳಲ್ಲಿ ಮತ್ತೆ ನಾಲ್ಕು ದಿನ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತೇನೆ. ಇದು ಯೂನಿವರ್ಸಲ್ ಕಂಟೆಂಟ್ ಸಿನಿಮಾ. ನಿರ್ದೇಶಕ ನೆಲ್ಸನ್ ಅವರು ರಜನಿಕಾಂತ್ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಈ ಚಿತ್ರದ ಭಾಗವಾಗಿರುವುದಕ್ಕೆ ಖುಷಿ ಪಡುತ್ತೇನೆ ಎಂದಿದ್ದಾರೆ.
56
ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನಿ
ʻಜೈಲರ್ 2ʼ ಸಿನಿಮಾವನ್ನು ನೆಲ್ಸನ್ ನಿರ್ದೇಶಿಸಿದ್ದು, ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ʻಜೈಲರ್ 2ʼ ಚಿತ್ರದಲ್ಲಿ 'ಟೈಗರ್' ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ.
66
2026ರ ಆಗಸ್ಟ್‌ನಲ್ಲಿ ತೆರೆಗೆ
ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದು, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಮತ್ತು ಆರ್ ನಿರ್ಮಲ್ ಸಂಕಲನ ಮಾಡುತ್ತಿದ್ದಾರೆ. ಅಂದಹಾಗೆ, 2026ರ ಆಗಸ್ಟ್‌ನಲ್ಲಿ ಈ ಸಿನಿಮಾವು ತೆರೆ ಮೇಲೆ ರಾರಾಜಿಸುವ ನಿರೀಕ್ಷೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.