ಆಮೇಲೆ ರಾಜಶೇಖರ್ ಬೆಳವಣಿಗೆನ, ಅವರಿಗೆ ಆಡಿಯೆನ್ಸ್‌ನಿಂದ ಬರ್ತಿರೋ ರೆಸ್ಪಾನ್ಸ್ ನೋಡಿದ ನಿರ್ಮಾಪಕ ಪೋಕೂರಿ ಬಾಬೂರಾವು ರಿಯಲೈಸ್ ಆದ್ರು. ರಾಜಶೇಖರ್ ಜೊತೆನೆ ಸಿನಿಮಾಗಳನ್ನು ತೆಗಿಯೋಕೆ ಮುಂದೆ ಬಂದರು. ಹಾಗೆ ಅವರ `ಈತರಂ ಫಿಲ್ಮ್ಸ್` ಸ್ಥಾಪಿಸಿ ತುಂಬಾ ವಿಜಯಶಾಲಿ ಸಿನಿಮಾಗಳನ್ನು ಮಾಡಿದ್ರು. ರಾಜಶೇಖರ್ ಜೊತೆ ಐದಾರು ಚಿತ್ರಗಳನ್ನು ನಿರ್ಮಿಸಿದ್ರು. ಅದರಲ್ಲಿ ತುಂಬಾ ದೊಡ್ಡ ಹಿಟ್ಸ್. ರಾಜಶೇಖರ್ ಕೆರಿಯರ್‌ನಲ್ಲಿ ಬಿಗ್ಗೆಸ್ಟ್ ಹಿಟ್ ಆಗಿ ನಿಂತ `ಅನ್ನ` ಮೂವಿನ ಅವರೇ ನಿರ್ಮಿಸಿದ್ರು. ಆ ಸಿನಿಮಾ 1994ರಲ್ಲಿ ಬಂದು ಗಮನ ಸೆಳೆಯಿತು. ಇದರ ಜೊತೆಗೆ `ಮಾ ಆಯನ ಬಂಗಾರಂ`, `ಎರ್ರ ಮಂದಾರಂ` ಅಂಥ ಚಿತ್ರಗಳನ್ನು ಮಾಡಿದ್ರು. ತನ್ನನ್ನ ಅವಮಾನಿಸಿದ ನಿರ್ಮಾಪಕನ ಬ್ಯಾನರ್‌ಗೆ ಹೆಮ್ಮೆ ಪಡುವಂಥ ಚಿತ್ರಗಳನ್ನು ಕೊಟ್ಟರು ರಾಜಶೇಖರ್.