ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿಯ 50ನೇ ಸಿನಿಮಾ ಮಹಾರಾಜ. ನಿತಿಲನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಜೂನ್‌ನಲ್ಲಿ ರಿಲೀಸ್ ಆಗಿತ್ತು. ಬಿಗ್ ಬಾಸ್ ಖ್ಯಾತಿಯ ಸಾಚನಾ ವಿಜಯ್ ಸೇತುಪತಿಯವರ ಮಗಳಾಗಿ ನಟಿಸಿದ್ದಾರೆ. ದಿವ್ಯ ಭಾರತಿ, ಅಭಿರಾಮಿ, ಅನುರಾಗ್ ಕಶ್ಯಪ್, ನಟಿ ನಟರಾಜ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಈ ಸಿನಿಮಾ ಒಳ್ಳೆ ವಿಮರ್ಶೆ ಪಡೆದಿತ್ತು, ಚೆನ್ನಾಗಿ ದುಡ್ಡು ಮಾಡಿತ್ತು.