ನನ್ನ ನಗ್ನ ಪೋಟೋಗಳು ಲೀಕ್ ಆಗಿವೆ ಎಂಬ ಸುದ್ದಿ ಕೇಳಿ ನಾಲ್ಕು ದಿನ ಮನೆಯಿಂದ ಹೊರಗೆ ಬಂದಿರಲಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.
ವರ್ಷಗಳ ಹಿಂದೆ ರಾಧಿಕಾ ಅಪ್ಟೆ ಅವರದ್ದು ಎನ್ನಲಾದ ಬೆತ್ತಲೆ ವಿಡಿಯೋಗಳು ಲೀಕ್ ಆಗಿದ್ದವು.
'ಮ್ಯಾಡ್ಲಿ' ಚಿತ್ರದ 'ಕ್ಲೀನ್ ಶೇವನ್' ಸೆಗ್ಮೆಂಟ್‌ನಲ್ಲಿನ ರಾಧಿಕಾ ಅಪ್ಟೆ ಅವರದ್ದು ಎನ್ನಲಾದ ಬೆತ್ತಲೆ ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡಿದ್ದವು.
ಅದರಲ್ಲಿರುವುದು ನಾನಲ್ಲ ಎಂದು ರಾಧಿಕಾ ಅಪ್ಟೆ ಸ್ಪಷ್ಟ ಪಡಿಸಿದ್ದರು. ಹೀಗಿದ್ದರೂ, ಆ ಸಮಯದಲ್ಲಿ ರಾಧಿಕಾ ಅಪ್ಟೆ ಅನುಭವಿಸಿದ್ದ ಸಂಕಟ ಮಾತ್ರ ಕಡಿಮೆ ಅಲ್ಲ.
ರಾಧಿಕಾ 2005ರಲ್ಲಿ ಬಿಡುಗಡೆಯಾದ ವಾಹ್ ಲೈಫ್ ಹೋ ತೊ ಐಸಿ ಚಿತ್ರದಲ್ಲಿ ನಟಿಸಿದರು. ಶಾಹಿದ್ ಕಪೂರ್ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಾಗ ಹೆಚ್ಚು ಗಮನ ಸೆಳೆದಿರಲಿಲ್ಲ. ಇದರ ನಂತರ, ಅವರು 2011ರಶೋರ್ ಇನ್ ದಿ ಸಿಟಿ ಸಿನಿಮಾದಲ್ಲಿ ಪ್ರಮುಖ ನಟಿಯಾಗಿ ಕಾಣಿಸಿಕೊಂಡರು .ನಂತರ ಅವರು 'ರಕ್ತ ಚರಿತ್ರಾ', 'ರಕ್ತ ಚರಿತ್ರ 2' ಮತ್ತು 'ಐ ಆಮ್' ಚಿತ್ರಗಳಲ್ಲಿ ನಟಿಸಿದರು.
ವರ್ಷಗಳ ಹಿಂದೆ ಲೀಕ್ ಆಗಿದ್ದ ಯಾರದ್ದೋ ವಿಡಿಯೋ ನನ್ನದು ಎಂದರು
2016ರಲ್ಲಿ ರಾಧಿಕಾ ಆಪ್ಟೆ ಅಭಿನಯದ ಮ್ಯಾಡ್ಲಿ ಚಿತ್ರ ತೆರೆ ಕಂಡಿತ್ತು. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನನ್ನ ಕೆಲ ನಗ್ನ ದೃಶ್ಯಗಳು ಲೀಕ್ ಆಗಿದ್ದವು. ಈ ವಿಚಾರ ನನ್ನ ಡ್ರೈವರ್ ನಿಂದ ತಿಳಿಯಿತು. ಆದರೆ ಅದರಲ್ಲಿ ಇದ್ದುದ್ದು ಮಾತ್ರ ನಾನಲ್ಲ.
ನನ್ನನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಇದು ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತ್ತು. ಹೀಗಾಗಿ ನಾನು ನಾಲ್ಕು ದಿನ ಮನೆಯಿಂದ ಹೊರಬರಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಲೀಕ್ ಆಗಿದ್ದ ಫೋಟೋಗಳು ಎಲ್ಲವೂ ನಗ್ನ ಸೆಲ್ಫಿಗಳಾಗಿದ್ದವು. ಸರಿಯಾಗಿ ನೋಡಿದರೆ ಅದು ನಾನು ಅಲ್ಲ ಎಂಬುದು ಗೊತ್ತಿದ್ದರೂ ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.
ಇನ್ನು ಪಾರ್ಚ್ಡ್ ಚಿತ್ರಕ್ಕಾಗಿ ನಾನು ನಗ್ನವಾಗಿ ಕಾಣಿಸಿಕೊಂಡೆ. ಈ ವಿಚಾರ ಮುಚ್ಚಿಡುವ ಅಗತ್ಯವೂ ಇರಲಿಲ್ಲ.
ನನ್ನ ಡ್ರೈವರ್, ನನ್ನ ವಾಚ್‌ಮ್ಯಾನ್, ನನ್ನ ಸ್ಟೈಲಿಸ್ಟ್ ಆ ಫೋಟೋಗಳನ್ನು ನೋಡಿದ್ದರು. ಅವರಿಂದ ವಿಚಾರ ಗೊತ್ತಾಗಿತ್ತು ಎಂದು ಅಂದಿನ ಘಟನೆ ವಿವರಿಸಿದ್ದಾರೆ.
ಬಾಲಿವುಡ್ ಜತೆಗೆ ವೆಬ್ ಸೀರಿಸ್ ನಲ್ಲಿಯೂ ರಾಧಿಕಾ ಕಾಣಿಸಿಕೊಂಡಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.