ಸ್ಮಾರ್ಟ್‌ಫೋನ್ ಯುಗದಲ್ಲಿ ಖ್ಯಾತ ದಕ್ಷಿಣ ಭಾರತೀಯ ನಟ ಫಹಾದ್ ಫಾಸಿಲ್ ಸಿಂಪಲ್ಲಾದ ಕೀಪ್ಯಾಡ್ ಮೊಬೈಲ್ ಬಳಸುತ್ತಿರುವುದು ಆಶ್ಚರ್ಯ ಹುಟ್ಟಿಸಿದೆ.
ಮೇಲ್ನೋಟಕ್ಕೆ ಬೇಸಿಕ್ ಸೆಟ್‌ನಂತೆ ಕಾಣುವ ಈ ಫೋನನ್ನು ಫಹಾದ್ ಕೈಯಲ್ಲಿ ನೋಡಿ ಜನ ‘ಪುಷ್ಪ’ ನಟನ ಸರಳತನವನ್ನು ಕೊಂಡಾಡಿದ್ದರು.
ಆದರೆ ಈ ಬಗ್ಗೆ ಪರಿಶೀಲಿಸಿ ನೋಡಿದಾಗ ತಿಳಿದು ಬಂದಿದ್ದೇನೆಂದರೆ ಇದು 10 ಲಕ್ಷ ರು. ಬೆಲೆಯ ವರ್ತು ಕಂಪನಿಯ ಲಕ್ಸುರಿ ಮೊಬೈಲ್ ಎಂಬುದು.
ಈ ಕಂಪನಿಯ ಫೋನುಗಳಲ್ಲಿ ಕನ್ಸಿಯರ್ಜ್ ಅನ್ನುವ ಫೀಚರ್ ಇದ್ದು ಅದು ಯಾವ ದೇಶದಲ್ಲಿದ್ದರೂ ವೈಯುಕ್ತಿಕ ಸಲಹೆ, ಸೂಚನೆ ನೀಡುತ್ತದೆ.
ಸದ್ಯಕ್ಕೆ ಈ ಫೋನ್ ಔಟ್ ಆಫ್ ಸ್ಟಾಕ್ ಆಗಿದ್ದು ಖರೀದಿಗೆ ಲಭ್ಯವಿಲ್ಲ. ಈ ಕಂಪನಿ, ಚಿನ್ನದ, ವಜ್ರದ ಫೋನ್ ಮಾರಾಟಕ್ಕೂ ಹೆಸರುವಾಸಿಯಾಗಿದೆ.
Govindaraj S