ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಮತ್ತು ಕಿರುತರೆ ನಟಿ ಕಮ್ ನಿರೂಪಕಿ ಮಹಾಲಕ್ಷ್ಮಿ ಸೆಪ್ಟೆಂಬರ್ 1ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಿರುಪತಿಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಸಪ್ತಪದಿ ತುಳಿದಿದ್ದಾರೆ. ಮದುವೆ ನಂತರ ಅವರೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ತಿಳಿಸಿದ್ದಾರೆ.
ಇಬ್ಬರಿಗೂ ಇದು ಎರಡನೇ ಮದುವೆ ಎಂದು ತಿಳಿದು ಬಂದಿದೆ. 'ಜೀವನ ಪೂರ್ತಿ ನೀವು ನನ್ನ ಜೊತೆಯಾಗಿರುವುದಕ್ಕೆ ನಾನು ಲಕ್ಕಿ. ಬೆಚ್ಚಗಿರುವ ಪ್ರೀತಿ ನನ್ನನ್ನು ಕಾಪಾಡಲಿದೆ. ಲವ್ ಯು ಅಮ್ಮು' ಎಂದು ಮಹಾಲಕ್ಷ್ಮಿ ಬರೆದುಕೊಂಡಿದ್ದಾರೆ.
ಕೆಂಪು ಮತ್ತು ಹಸಿರು ಸೀರೆಯಲ್ಲಿ ಮಹಾಲಕ್ಷ್ಮಿ ಮಿಂಚಿದ್ದಾರೆ, ರೇಶ್ಮೆ ಪಂಚೆ-ಶರ್ಟ್‌ನಲ್ಲಿ ರವೀಂದ್ರ ಕಾಣಿಸಿಕೊಂಡಿದ್ದಾರೆ. ಸರಳವಾಗಿ ಮೇಕಪ್ ಮತ್ತು ಆರಂಭ ಧರಿಸಿದ್ದಾರೆ ನಟಿ.
ಅನಿಲ್ ಎಂಬುವವರ ಜೊತೆ ಮಹಾಲಕ್ಷ್ಮಿ ಮದುವೆಯಾಗಿದ್ದರು. ಕೆಲವು ಪರ್ಸನಲ್ ಕಾರಣಗಳಿಂದ 2019ರಲ್ಲಿ ವಿಚ್ಛೇದನ ಪಡೆದುಕೊಂಡರು. ಇವರಿಬ್ಬರಿಗೂ ಒಂದು ಗಂಡು ಮಗುವಿದೆ.
ಆಗಸ್ಟ್ 29, 2012ರಲ್ಲಿ ರವೀಂದ್ರ ಚಂದ್ರಶೇಖರ್ ಮತ್ತು ಶಾಂತಿ ಮದುವೆಯಾಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ.