ಅಬ್ಬಬ್ಬಾ.. ಪುಷ್ಪ 2ಗೆ ಅಲ್ಲು ಅರ್ಜುನ್‌ಗೆ ಕೊಡುತ್ತಿರುವ ಸಂಭಾವನೆ ಇಷ್ಟು ಕೋಟಿನಾ?: ನಿರ್ಮಾಪಕ ಬನ್ನಿ ವಾಸು ಹೇಳಿದ್ದೇನು!

First Published | Sep 25, 2024, 5:52 PM IST

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟಿಸುತ್ತಿರುವ ಚಿತ್ರ ಪುಷ್ಪ 2. ಸುಕುಮಾರ್ ನಿರ್ದೇಶನದಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಕ್ರೇಜ್ ಪಡೆದುಕೊಂಡಿದ್ದಾರೆ. ಕೆಂಪು ಚಂದನ ಕಳ್ಳಸಾಗಣೆ ಹಿನ್ನೆಲೆಯಲ್ಲಿ ತೆರೆಕಾಣುತ್ತಿರುವ ಪುಷ್ಪ 2 ಮೇಲೆ ಭಾರೀ ನಿರೀಕ್ಷೆ ಇದೆ.

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟಿಸುತ್ತಿರುವ ಚಿತ್ರ ಪುಷ್ಪ 2. ಸುಕುಮಾರ್ ನಿರ್ದೇಶನದಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಕ್ರೇಜ್ ಪಡೆದುಕೊಂಡಿದ್ದಾರೆ. ಕೆಂಪು ಚಂದನ ಕಳ್ಳಸಾಗಣೆ ಹಿನ್ನೆಲೆಯಲ್ಲಿ ತೆರೆಕಾಣುತ್ತಿರುವ ಪುಷ್ಪ 2 ಮೇಲೆ ಭಾರೀ ನಿರೀಕ್ಷೆ ಇದೆ. ಪುಷ್ಪ 2 ಚಿತ್ರ 400 ಕೋಟಿ ರೂಪಾಯಿ ಬಜೆಟ್ ನಲ್ಲಿ ತೆರೆಗೆ ಬರುತ್ತಿದೆ.

ಪ್ಯಾನ್ ಇಂಡಿಯಾ ಮಾರುಕಟ್ಟೆ ಕಾರಣದಿಂದ ಪ್ರಭಾಸ್, ಎನ್ ಟಿ ಆರ್, ರಾಮ್ ಚರಣ್, ಅಲ್ಲು ಅರ್ಜುನ್ ಹೀಗೆ ಎಲ್ಲಾ ಹೀರೋಗಳು ಭಾರೀ ಸಂಭಾವನೆ ಪಡೆಯುತ್ತಿದ್ದಾರೆ. ಎಲ್ಲರ ಸಂಭಾವನೆ 100 ಕೋಟಿ ರೂಪಾಯಿ ತಲುಪುತ್ತಿದೆ ಎಂಬ ಮಾತಿದೆ. ಹಾಗಾದರೆ ಪುಷ್ಪ 2 ಚಿತ್ರಕ್ಕೆ ಅಲ್ಲು ಅರ್ಜುನ್ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ಕೂಡ ಕುತೂಹಲ ಮೂಡಿಸಿದೆ. ಸದ್ಯ ಹರಿದಾಡುತ್ತಿರುವ ಸುದ್ದಿ ಪ್ರಕಾರ ಅಲ್ಲು ಅರ್ಜುನ್ ಸಂಭಾವನೆ 10 ರಿಂದ 150 ಕೋಟಿ ರೂಪಾಯಿ ಇರಬಹುದು ಎನ್ನಲಾಗುತ್ತಿದೆ.

Tap to resize

ಅಲ್ಲು ಅರ್ಜುನ್ ಹಾಗೂ ಅವರ ಕುಟುಂಬದ ಜೊತೆ ಆಪ್ತ ಸಂಬಂಧ ಹೊಂದಿರುವ ನಿರ್ಮಾಪಕ ಬನ್ನಿ ವಾಸು ಇತ್ತೀಚೆಗೆ ಅಲ್ಲು ಅರ್ಜುನ್ ಸಂಭಾವನೆ ಬಗ್ಗೆ ಆಸಕ್ತಿಕರ ಹೇಳಿಕೆ ನೀಡಿದ್ದಾರೆ. ಒಂದು ಸಂದರ್ಶನದಲ್ಲಿ ನಿರೂಪಕರು, ಅಲ್ಲು ಅರ್ಜುನ್ ಪುಷ್ಪ 2 ಚಿತ್ರಕ್ಕೆ 150 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಇದೆ, ಇದು ನಿಜಾನಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಬನ್ನಿ ವಾಸು, ಒಂದು ವೇಳೆ ಬನ್ನಿ ನಿಜವಾಗಲೂ 150 ಕೋಟಿ ರೂಪಾಯಿ ಸಂಭಾವನೆ ಪಡೆದರೆ ಅದು ತುಂಬಾ ಕಡಿಮೆ ಎಂದಿದ್ದಾರೆ.

ಅಲ್ಲು ಅರ್ಜುನ್‌ಗೆ ಪ್ಯಾನ್ ಇಂಡಿಯಾ ಕ್ರೇಜ್ ಇದೆ. ಪುಷ್ಪ 2 ಚಿತ್ರಕ್ಕಾಗಿ ಅಲ್ಲು ಅರ್ಜುನ್ ಕಳೆದ ಮೂರು ವರ್ಷಗಳಿಂದ ಕಷ್ಟಪಡುತ್ತಿದ್ದಾರೆ. ಅಲ್ಲು ಅರ್ಜುನ್ ಪಡೆಯುವ 150 ಕೋಟಿ ರೂಪಾಯಿಗಳಲ್ಲಿ ಸುಮಾರು 50 ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಹೋಗುತ್ತದೆ. ಹಾಗಾಗಿ ಅಲ್ಲು ಅರ್ಜುನ್ ಗೆ ಬರುವುದು 100 ಕೋಟಿ ರೂಪಾಯಿ. ಮೂರು ವರ್ಷಗಳಿಗೆ 100 ಕೋಟಿ ರೂಪಾಯಿ ಅಂದರೆ, ವರ್ಷಕ್ಕೆ ಅಲ್ಲು ಅರ್ಜುನ್‌ಗೆ ಸುಮಾರು 33 ಕೋಟಿ ರೂಪಾಯಿ ಮಾತ್ರ.

ಈ ಲೆಕ್ಕದಲ್ಲಿ ನೋಡಿದರೆ ಅಲ್ಲು ಅರ್ಜುನ್ ಸಂಭಾವನೆ ತುಂಬಾ ಕಡಿಮೆ ಎಂದು ನಿರ್ಮಾಪಕ ಬನ್ನಿ ವಾಸು ಹೇಳಿದ್ದಾರೆ. ಆದರೆ ಹೊರಗಿನವರಿಗೆ ಕಾಣುವುದು ಮಾತ್ರ ಅಲ್ಲು ಅರ್ಜುನ್ 150 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎಂದು. ಈ ವಿಷಯಗಳೆಲ್ಲಾ ಅವರಿಗೆ ತಿಳಿದಿರುವುದಿಲ್ಲ ಎಂದು ಬನ್ನಿ ವಾಸು ತಿಳಿಸಿದ್ದಾರೆ. ಪುಷ್ಪ 2 ಚಿತ್ರ ಡಿಸೆಂಬರ್ 6 ರಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಿಸುತ್ತಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದಾರೆ.

Latest Videos

click me!