ಪ್ರಿಯಾಂಕ ಚೋಪ್ರಾ ಕಪ್ಪೆಂದು ಬಂಧುಗಳೇ ಹೀಯಾಳಿಸಿದ್ದರು!

First Published | Jun 13, 2020, 6:20 PM IST

ಮಾಜಿ ಮಿಸ್‌ ವಲ್ಡ್‌ ಪ್ರಿಯಾಂಕ  ಚೋಪ್ರಾ ಇಂದು ಕೇವಲ ಬಾಲಿವುಡ್‌ನಲ್ಲಿ ಮಾತ್ರವಲ್ಲದೇ, ಹಾಲಿವುಡ್‌ನಲ್ಲಿಯೂ ಯಶಸ್ಸು ಗಳಿಸಿದ್ದಾರೆ. ಆದರೆ ಹಿಂದೊಮ್ಮೆ ಪ್ರಿಯಾಂಕರನ್ನು ಕಸಿನ್ಸ್ ಕಪ್ಪೆಂದು ಅಣುಕಿಸಿ ಅವಹೇಳನ ಮಾಡುತ್ತಿದ್ದರಂತೆ. ಇತ್ತೀಚೆಗೆ, ಪ್ರಿಯಾಂಕಾ ಅವರ ಹಳೆಯ ಸಂದರ್ಶನವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ತಮ್ಮ ಕೆಲವು ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿರುವ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ಪಿಗ್ಗಿ ಎಂದೇ ಫೇಮಸ್.
ಬಾಲಿವುಡ್‌ನ ಹೊರತಾಗಿ, ಬೇ ವಾಚ್, ಮ್ಯಾಟ್ರಿಕ್ಸ್ 4 ನಂತಹ ಹಾಲಿವುಡ್‌ನಲ್ಲೂ ಹೆಸರು ಗಳಿಸಿದ್ದಾರೆ ಮಾಜಿ ಮಿಸ್‌ ವಲ್ಡ್‌ ಪ್ರಿಯಾಂಕಾ ಚೋಪ್ರಾ.
Tap to resize

ಬಾಜಿರಾವ್ ಮಸ್ತಾನಿಯ ನಟಿ ಪ್ರಿಯಾಂಕಾ ತನ್ನ ಹೋರಾಟದ ಬಗ್ಗೆ ಸಂದರ್ಶನಗಳಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ.
ತಮ್ಮ ಮೈಬಣ್ಣದ ಕಪ್ಪಿದ್ದರಿಂದ ಅವಹೇಳನಕ್ಕೆ ಗುರಿಯಾದ ಬಗ್ಗೆ ಹಳೆಯ ಸಂದರ್ಶನದಲ್ಲಿ ಕ್ರಿಶ್ ನಟಿ ನೋವು ತೊಂಡಿಕೊಂಡಿದ್ದಾರೆ.
ಕಸಿನ್ಸ್‌ ಅವರನ್ನು ಕಪ್ಪು ಎಂದು ಕರೆಯುವ ಮೂಲಕ ಕೀಟಲೆ ಮಾಡುತ್ತಿದ್ದರಂತೆ. 'ನನ್ನ ಕಸಿನ್ಸ್‌ ಬಿಳಿಯಾಗಿದ್ದರು. ನನ್ನ ತಂದೆಯ ಬಣ್ಣ ಗೋಧಿಯಾಗಿರುವುದರಿಂದ ನಾನು ಮಾತ್ರ ಅವರಂತೆಗೋಧಿ ಬಣ್ಣ ಹೊಂದಿರುವ,' ಎಂದಿದ್ದರು ಡಾನ್ ನಟಿ.
'ನನ್ನ ಪಂಜಾಬಿ ಕುಟುಂಬ ನನ್ನನ್ನು ಕಾಲಿ-ಕಾಲಿ ಎಂದು ಕರೆಯುತ್ತಿತ್ತು. 13ನೇ ವಯಸ್ಸಿನಲ್ಲೇ ಫೇರ್‌ನೆಸ್‌ ಕ್ರೀಮ್‌ ಬಳಸುವ ಮೂಲಕ ತನ್ನ ಮೈಬಣ್ಣವನ್ನು ಬದಲಾಯಿಸಲು ಯೋಚಿಸುತ್ತಿದ್ದೆ,' ಎಂದು ಬಾಲ್ಯದಲ್ಲಿಯೇ ತಮ್ಮ ಮೈ ಬಣ್ಣದ ಕಾರಣದಿಂದ ಅನುಭವಿಸಿದ ಸಂಕಟವನ್ನು ಶೇರ್ ಮಾಡಿಕೊಂಡಿದ್ದ ಮೇರ್ ಕೋಮ್ ಖ್ಯಾತಿಯ ಪಿಗ್ಗಿ.
ನಾನು ಉದ್ಯಮಕ್ಕೆ ಕಾಲಿಟ್ಟಾಗ, ನಾನು ಸುಂದರವಾಗಿದ್ದೇನೆ ಎಂಬುವುದು ನನ್ನ ಅರಿವಿಗೆ ಬಂತು.ಆದರೆ ಫೇರ್‌ನೆಸ್ ಕ್ರೀಮ್ ಜಾಹೀರಾತಿನಲ್ಲಿ ಕೆಲಸ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೆ. ಆಮೇಲೆ ಆ ನಿರ್ಧಾರವೂ ತಪ್ಪೆನಿಸಿತು, ಎಂದಿದ್ದರು ರಾಮ್‌ಲೀಲಾ ನಟಿ.
ಈ ನಟಿ ಚಿತ್ರರಂಗಕ್ಕೆ ಕಾಲಿಟ್ಟಾಗ ಗಾಡ್‌ಫಾದರ್ ಇರಲಿಲ್ಲ ಮತ್ತು ಬೆಂಬಲವೂ ಇರಲಿಲ್ಲ. ಅವರ ಕುಟುಂಬ ಮಾತ್ರ ಬೆಂಬಲಕ್ಕೆ ಇತ್ತು.
ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ನಿರ್ದೇಶಕರೊಬ್ಬರು ತುಂಬಾ ಕೆಟ್ಟ ಮಾತುಗಳನ್ನು ಹೇಳಿದ್ದರಂತೆ. ಅದನ್ನು ಕೇಳಿದ ಪ್ರಿಯಾಂಕಾಗೆ ನಿರ್ದೇಶಕರನ್ನು ಕತ್ತು ಹಿಸುಕಬೇಕು ಎಂಬಷ್ಟು ಸಿಟ್ಟು ಬಂದಿತ್ತಂತೆ.
ಒಮ್ಮೆ ಮೈಬಣ್ಣದಿಂದ ಅವಮಾನಕ್ಕೆ ಗುರಿಯಾದ ಪ್ರಿಯಾಂಕಾ ಇಂದು ಗ್ಲೋಬಲ್‌ ಸ್ಟಾರ್‌.
ಮಾಡಿದ ಚಿತ್ರಗಳೆಷ್ಟೋ, ಮುಡಿಗೇರಿಸಿಕೊಂಡ ಪ್ರಶಸ್ತಿಗಳೆಷ್ಟೋ. ಅಮೆರಿಕದ ಪ್ರಜೆಯನ್ನು ಮದುವೆಯಾಗಿದ್ದಾರೀಗ.

Latest Videos

click me!