ಸೋಲಿನ ಭೀತಿ ಯಾವ ಮಟ್ಟಿಗೆ ಆವರಿಸಿತು ಎಂದರೆ ನನಗೆ ಕಂಫರ್ಟೇಬಲ್ ಆಗಿದ್ದ ಬಾಲಿವುಡ್ ಇಂಡಸ್ಟ್ರಿಯನ್ನು ತೊರೆದು ಹೊಸ ಅವಕಾಶಗಳಿಗೆ ಎದುರು ನೋಡುತ್ತ ನನ್ನ ಅಪರಿಚಿತವಾಗಿದ್ದ ಹಾಲಿವುಡ್ ಪ್ರವೇಶಿಸಿದೆ ಎಂದು ಪ್ರಿಯಾಂಕಾ ಹೇಳಿರುವುದು ಟ್ರೆಂಡಿಂಗ್ ಆಗಿದೆ.
ಎಸ್.ಎಸ್. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾದಲ್ಲಿ ಮಂದಾಕಿನಿ ಪಾತ್ರದಲ್ಲಿ ಎಂಟ್ರಿ ಕೊಟ್ಟಿರುವ ಪ್ರಿಯಾಂಕಾ ಚೋಪ್ರಾ, ಸಂದರ್ಶನವೊಂದರಲ್ಲಿ ತನ್ನನ್ನು ಕಾಡಿದ ಸೋಲಿನ ಭೀತಿಯ ಬಗ್ಗೆ ಮಾತನಾಡಿದ್ದಾರೆ.
25
ಸತತ ಆರು ಸೋಲುಗಳು
ಒಂದಲ್ಲ ಎರಡಲ್ಲ ಸತತ ಆರು ಸೋಲುಗಳು. ಈ ಪಾತ್ರಕ್ಕೆ ಪ್ರಿಯಾಂಕಾ ಸೂಟ್ ಆಗ್ತಾರೆ ಅಂದುಕೊಂಡವರೂ, ಆಕೆಯ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ನಿಲ್ಲಲ್ಲ, ಬೇರೆಯವರನ್ನು ಹಾಕ್ಕೊಳ್ಳೋಣ ಎನ್ನತೊಡಗಿದರು. ಅವಕಾಶಗಳ ಹರಿವು ಕ್ಷೀಣವಾಗತೊಡಗಿತು.
35
ಬಾಲಿವುಡ್ ಇಂಡಸ್ಟ್ರಿಯನ್ನು ತೊರೆದೆ
ಸೋಲಿನ ಭೀತಿ ಯಾವ ಮಟ್ಟಿಗೆ ಆವರಿಸಿತು ಎಂದರೆ ನನಗೆ ಕಂಫರ್ಟೇಬಲ್ ಆಗಿದ್ದ ಬಾಲಿವುಡ್ ಇಂಡಸ್ಟ್ರಿಯನ್ನು ತೊರೆದು ಹೊಸ ಅವಕಾಶಗಳಿಗೆ ಎದುರು ನೋಡುತ್ತ ನನ್ನ ಅಪರಿಚಿತವಾಗಿದ್ದ ಹಾಲಿವುಡ್ ಪ್ರವೇಶಿಸಿದೆ ಎಂದು ಪ್ರಿಯಾಂಕಾ ಹೇಳಿರುವುದು ಟ್ರೆಂಡಿಂಗ್ ಆಗಿದೆ.
ಆರಂಭದಲ್ಲಿ ಬಂದ ಎಲ್ಲಾ ಅವಕಾಶ ಬಳಸಿಕೊಂಡೆ. ಆಗ ಪ್ರತಿ ಅವಕಾಶವೂ ಮಹತ್ವದ್ದು ಅನಿಸಿತ್ತು. ಹಾಗೆ ಮಾಡಿದ ಕಾರಣ ಇಂದು ಹಾಲಿವುಡ್, ಬಾಲಿವುಡ್‌ಗಳಲ್ಲಿ ನನಗೆ ಪಾತ್ರಗಳ ಆಯ್ಕೆಯ ಅವಕಾಶ ಸಿಕ್ಕಿದೆ ಎಂದು ತನ್ನ ಸಕ್ಸಸ್ ಸ್ಟೋರಿಯ ಬಗ್ಗೆ ಹೇಳಿಕೊಂಡಿದ್ದಾರೆ.
55
ಪ್ಯಾನ್ ವರ್ಲ್ಡ್ ಸಿನಿಮಾ
ಸುಮಾರು 1500 ಕೋಟಿ ಬಜೆಟ್‌ನ 'ವಾರಣಾಸಿ' ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ. ಮಹೇಶ್ ಬಾಬು ಮೊದಲ ಬಾರಿಗೆ ಪ್ಯಾನ್ ವರ್ಲ್ಡ್ ಸಿನಿಮಾ ಮಾಡುತ್ತಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಈ ಸಿನಿಮಾ 2027ರ ಬೇಸಿಗೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.