ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೊನಾಸ್ ಅವರು ಇತ್ತೀಚೆಗೆ ಬೈಕು ಅಪಘಾತವಾಗಿತ್ತು.
ಅಮೆರಿಕದ ಪಾಪ್ ಗಾಯಕ ನಿಕ್ ಜೊನಸ್ ರಿಯಾಲಿಟಿ ಶೋ ದಿ ವಾಯ್ಸ್ ಚಿತ್ರದ ಶೂಟಿಂಗ್ ಸಮಯದಲ್ಲಿ ತಮ್ಮ ಆಕ್ಸಿಡೆಂಟ್ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ.
ನಿಕ್‌ಗೆ ಅನೇಕ ಗಾಯಗಳಾಗಿದ್ದವು. ಈಗ ಅವರು ಕೆಲಸಕ್ಕೆ ಮರಳಿದ್ದಾರೆ.
ಲೈವ್ ಎನ್‌ಬಿಸಿ ಸಿಂಗಿಂಗ್ ಕಾಪಿಟೇಷನ್‌ನ ಶೂಟಿಂಗ್ ಸೆಟ್‌ಗಳಿಂದ ಸೆಲ್ಫಿಗಳು ಮತ್ತು ವೀಡಿಯೊಗಳನ್ನು ನಿಕ್ ಶೇರ್ ಮಾಡಿಕೊಂಡಿದ್ದಾರೆ.
ಬೈಕ್‌ನಿಂದ ಬಿದ್ದಾಗ ತನ್ನ ಪಕ್ಕೆಲುಬು ಬಿರುಕು ಬಿಟ್ಟಿದೆ ಮತ್ತು ಕೆಲವು ಇತರ ಪೆಟ್ಟುಗಳಾಗಿವೆ ಎಂದು ಇ ಆನ್‌ಲೈನ್‌ಗೆ ನಿಕ್ ಹೇಳಿದರು.
ಅಪಘಾತದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕೆಲವು ಗಂಟೆಗಳ ನಂತರ, ಅವರನ್ನು ಡಿಸಾರ್ಜ್ ಮಾಡಲಾಯಿತು.
ನಿಕ್ ತನ್ನ ಗಾಯಗಳ ತೀವ್ರತೆಯನ್ನು ಬಹಿರಂಗಪಡಿಸಲಿಲ್ಲ. ಆದರೆ ನಾನು ಸರಿಯಾಗಿದ್ದೇನೆ ಎಂದು ಹೇಳಿದ್ದಾರೆ .
ಪ್ರಿಯಾಂಕಾ ಚೋಪ್ರಾ ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
ತಮ್ಮ ಕೆಲಸಗಳ ಕಮ್ಮಿಟ್ಮೆಟ್‌ಗಳ ಜೊತೆಗೆ ನಿಕ್ ಮತ್ತು ಪ್ರಿಯಾಂಕಾ ಇಬ್ಬರೂ ಕೋವಿಡ್ 19 ವಿರುದ್ಧ ಹೋರಾಡಲು ಭಾರತಕ್ಕೆ ಹಣ ಸಂಗ್ರಹಿಸುವಲ್ಲಿ ಬ್ಯುಸಿಯಾಗಿದ್ದಾರೆ.
ವರದಿಗಳ ಪ್ರಕಾರ, ಈ ಪರಿಹಾರ ಕಾರ್ಯಕ್ಕಾಗಿ ಇವರಿಬ್ಬರು ಸುಮಾರು 3 ಮಿಲಿಯನ್ ಡಾಲರ್ ಸಂಗ್ರಹಿಸಿದ್ದಾರೆ.
ಪ್ರಸ್ತುತ, ನಿಕ್ ಲಾಸ್ ಏಂಜಲೀಸ್‌ನಲ್ಲಿದ್ದಾರೆ ಮತ್ತು ಪ್ರಿಯಾಂಕಾ ಲಂಡನ್‌ನಲ್ಲಿ ಶೂಟಿಂಗ್‌ನಲ್ಲಿದ್ದಾರೆ.
ಟೆಕ್ಸ್ಟ್ ಫಾರ್ ಯು ಸಿನಿಮಾದ ಶೂಟಿಂಗ್ ಮುಗಿಸಿದ್ದು ಇದೀಗ ತನ್ನ ಮುಂಬರುವ ವೆಬ್ ಶೋ ಚಿತ್ರೀಕರಣದಲ್ಲಿದ್ದಾರೆ ಪಿಸಿ.
Suvarna News