ವಾರ್ 2 ನಂತರ ಎನ್.ಟಿ.ಆರ್, ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡ್ತಾರೆ. ಡ್ರಗ್ ಮಾಫಿಯಾ ಕಥೆಯ ಗ್ಯಾಂಗ್‌ಸ್ಟರ್ ಡ್ರಾಮಾ ಇದಂತೆ. ಡ್ರ್ಯಾಗನ್ ಅನ್ನೋ ಟೈಟಲ್ ಇಡೋಕೆ ಯೋಚಿಸ್ತಿದ್ದಾರಂತೆ. ಎನ್.ಟಿ.ಆರ್-ಪ್ರಶಾಂತ್ ನೀಲ್ ಸಿನಿಮಾ ಅನೌನ್ಸ್ ಆಗಿ ವರ್ಷಗಳೇ ಆಗಿವೆ. ಸಲಾರ್‌ಗಿಂತ ಮೊದಲು ಈ ಸಿನಿಮಾ ಶುರುವಾಗಬೇಕಿತ್ತು. ಬೇರೆ ಕಾರಣಗಳಿಂದ ತಡವಾಯಿತು.
ಕೊನೆಗೂ ಫ್ಯಾನ್ಸ್‌ಗಳ ಕಾಯುವಿಕೆಗೆ ಅಂತ್ಯವಾಗುತ್ತಿದೆ. ಸಂಕ್ರಾಂತಿ ನಂತರ ಎನ್.ಟಿ.ಆರ್ ಸಿನಿಮಾ ಶೂಟಿಂಗ್ ಶುರುವಾಗುತ್ತಂತೆ. ರುಕ್ಷ್ಮಿಣಿ ವಸಂತ್ ಹೀರೋಯಿನ್ ಅಂತೆ. ಮಲಯಾಳಂ ಸ್ಟಾರ್ಸ್ ಟೋವಿನೋ ಥಾಮಸ್, ಬಿಜು ಮೀನನ್ ಕೂಡ ಈ ಸಿನಿಮಾದಲ್ಲಿ ನಟಿಸ್ತಿದ್ದಾರಂತೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.