ಪ್ರಭಾಸ್‌ಗೆ ಅಣ್ಣನಾಗಿ ಸ್ಟಾರ್ ಹೀರೋ, ಸ್ಪಿರಿಟ್​ಗೆ ನಿರ್ದೇಶಕ ಸಂದೀಪ್ ಪ್ಲ್ಯಾನ್ ಬೇರೆ ಲೆವೆಲ್ ಗುರು!

ಪ್ರಭಾಸ್​ರನ್ನು ಸ್ಪಿರಿಟ್​ನಲ್ಲಿ ಸಂದೀಪ್ ರೆಡ್ಡಿ ಹೆಂಗ್ ತೋರಿಸ್ತಾರಪ್ಪಾ ಅಂತ ಫ್ಯಾನ್ಸ್ ಕಾಯ್ತಿದ್ದಾರೆ. ಸಂದೀಪ್ ರೆಡ್ಡಿ ಸಿನಿಮಾಗಳಲ್ಲಿ ಹೀರೋಗಳ ಟೆಂಪರ್ ಯಾವ ರೇಂಜ್​ಗೆ ಇರುತ್ತೆ ಅಂತ ಗೊತ್ತಲ್ವಾ. ಪ್ರಭಾಸ್ ಹೈಟ್, ಪರ್ಸನಾಲಿಟಿ, ಇಮೇಜ್​ನ್ನು ಯಾವ ರೀತಿ ಯೂಸ್ ಮಾಡ್ತಾರೋ ಅಂತ ಅನ್ಕೊಂಡಿರೋ ಟೈಮ್​ನಲ್ಲಿ ಈ ಸಿನಿಮಾ ಬಗ್ಗೆ ಒಂದು ಅಪ್​ಡೇಟ್ ಬಂದಿದೆ.

Prabhas to Star in Spirit Sandeep Reddy Plans to Showcase the Rebel Star with a Powerful Character gvd

ಸಂದೀಪ್ ರೆಡ್ಡಿ ವಂಗ ಹೀರೋಗಳೆಲ್ಲಾ ಹೇಗಿರ್ತಾರೆ ಅಂತ ಸ್ಪೆಷಲ್ ಆಗಿ ಹೇಳಬೇಕಾಗಿಲ್ಲ. ಸೈಲೆಂಟ್ ಆಗಿರೋ ಹೀರೋನೂ ಅನಿಮಲ್ ತರ ಚೇಂಜ್ ಆಗ್ತಾನೆ. ಅಗ್ಗರೇಸ್ಸೀವ್ ಕ್ಯಾರೆಕ್ಟರ್ಸ್ ಡಿಸೈನ್ ಮಾಡೋದ್ರಲ್ಲಿ ಸಂದೀಪ್​ಗೆ ಯಾರೂ ಸರಿಸಾಟಿ ಇಲ್ಲ. ಹೀರೋಗಳಲ್ಲೂ ನೆಗೆಟಿವ್ ಥಾಟ್ಸ್ ಇರುತ್ತೆ. ಹೀರೋ ಅಂದ್ರೆ ಹೀಗೇ ಇರಬೇಕು ಅಂತ ಏನಿಲ್ಲ ಅಂತ ತಮ್ಮ ಮಾರ್ಕ್ ಹೀರೋಯಿಸಂನ ಸಿನಿಮಾಗಳಲ್ಲಿ ತೋರಿಸಿ ಒಂದು ಸ್ಪೆಷಾಲಿಟಿ ಕ್ರಿಯೇಟ್ ಮಾಡಿದ್ದಾರೆ ಸಂದೀಪ್ ರೆಡ್ಡಿ.

Prabhas to Star in Spirit Sandeep Reddy Plans to Showcase the Rebel Star with a Powerful Character gvd

ಇನ್ನು ಸಣ್ಣ ಹೀರೋಗಳು ಸಿಕ್ಕರೆ ಅರ್ಜುನ್ ರೆಡ್ಡಿ, ಅನಿಮಲ್ ತರ ಸಿನಿಮಾಗಳು ಬಿದ್ದಿವೆ. ಪ್ರಭಾಸ್ ತರ ಹೈಟ್, ಪರ್ಸನಾಲಿಟಿ, ಇಮೇಜ್ ಇರೋ ಹೀರೋನ ಇನ್ಯಾವ ಲೆವೆಲ್​ಗೆ ತೋರಿಸ್ತಾರೋ ಅಂತ ಫ್ಯಾನ್ಸ್ ಕಾಯ್ತಿದ್ದಾರೆ. ಪ್ರಭಾಸ್​ನಲ್ಲಿರೋ ಎನರ್ಜಿನ ಸಂದೀಪ್ ಸ್ಪಿರಿಟ್​ಗೋಸ್ಕರ ಹೇಗೆ ಯೂಸ್ ಮಾಡ್ತಾರೋ ಅಂತ ಫ್ಯಾನ್ಸ್ ತುಂಬಾನೇ ಈಗರ್ ಆಗಿ ವೇಟ್ ಮಾಡ್ತಿದ್ದಾರೆ. ಇದೆಲ್ಲಾ ಬಿಟ್ಟರೆ ಸ್ಪಿರಿಟ್ ಮೂವಿ ಅನೌನ್ಸ್ ಮಾಡಿದಾಗಿನಿಂದ ಒಂದಲ್ಲ ಒಂದು ಅಪ್​ಡೇಟ್ ಬರ್ತಾನೇ ಇದೆ.


ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ನ್ಯೂಸ್ ಬಿಟ್ಟರೆ ಆಫೀಶಿಯಲ್ ಆಗಿ ಸ್ಪಿರಿಟ್​ಗೆ ಸಂಬಂಧಪಟ್ಟ ಒಂದು ನ್ಯೂಸ್ ಕೂಡಾ ಟೀಮ್ ಕೊಟ್ಟಿಲ್ಲ. ಇನ್ನು ಆ ಸಿನಿಮಾಗೆ ಸಂಬಂಧಪಟ್ಟ ಒಂದು ಅಪ್​ಡೇಟ್ ವೈರಲ್ ಆಗ್ತಿದೆ. ಅದೇನಂದ್ರೆ ಈ ಮೂವಿಯಲ್ಲಿ ಪ್ರಭಾಸ್​ಗೆ ಅಣ್ಣನಾಗಿ ಒಂದು ಸ್ಟಾರ್ ಹೀರೋ ಆಕ್ಟ್ ಮಾಡ್ತಿದ್ದಾರಂತೆ. ಅವರ್ಯಾರೂ ಅಲ್ಲ ಬಾಲಿವುಡ್ ಸ್ಟಾರ್ ಹೀರೋ ಸಂಜಯ್ ದತ್.

ಈ ಮಧ್ಯೆ ಸೌತ್ ಸಿನಿಮಾಗಳಲ್ಲಿ ಜಾಸ್ತಿ ಕಾಣಿಸಿಕೊಳ್ತಿದ್ದಾರೆ ಸಂಜಯ್. ವಿಲನ್ ಆಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸ್ವಲ್ಪ ಪವರ್​ಫುಲ್ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಕಾರಣಕ್ಕೆ ಪ್ರಭಾಸ್​ಗೆ ಅಣ್ಣನಾಗಿ ಸಂದೀಪ್ ಮಾರ್ಕ್ ಪಾತ್ರವನ್ನು ಇದರಲ್ಲಿ ಕ್ರಿಯೇಟ್ ಮಾಡಿದ್ದಾರಂತೆ. ಆ ಪಾತ್ರಕ್ಕೆ ಸಂಜಯ್ ದತ್ ತರ ಮಾಸ್ ಇಮೇಜ್ ಇರೋ ಹೀರೋ ಕರೆಕ್ಟ್ ಅನ್ಕೊಂಡ್ರೋ ಏನೋ ಈ ಮೂವಿಯಲ್ಲಿ ಆಲ್ಮೋಸ್ಟ್ ಕನ್ಫರ್ಮ್ ಮಾಡಿದಂಗೆ ಅಂತಿದ್ದಾರೆ.

ಈ ವಿಷಯ ಆಫೀಶಿಯಲ್ ಆಗಿ ಅನೌನ್ಸ್ ಮಾಡಿಲ್ಲ ಬಟ್ ಟಾಲಿವುಡ್​ನಲ್ಲಿ ಮಾತ್ರ ಟಾಕ್ ಕೇಳಿ ಬರ್ತಿದೆ. ಇನ್ನು ಪ್ರಭಾಸ್ ಸಿನಿಮಾಗಳ ಲೈನ್ ಅಪ್ ನೋಡಿದ್ರೆ ಮಾರುತಿ ಡೈರೆಕ್ಷನ್​ನಲ್ಲಿ ರಾಜಾ ಸಾಬ್ ರಿಲೀಸ್​ಗೆ ರೆಡಿಯಾಗ್ತಿದೆ. ಇದರ ಜೊತೆಗೆ ಕಲ್ಕಿ 2, ಸಲಾರ್ 2, ಫೌಜಿ ಹೀಗೆ ಸೀರಿಯಲ್​ ಆಗಿ ಪ್ರಭಾಸ್ ಸಿನಿಮಾಗಳು ಲೈನ್​ನಲ್ಲಿವೆ. ಇನ್ನೊಂದು ಮೂರು ಸಿನಿಮಾಗಳಿಗೆ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅಂತ ಗೊತ್ತಾಗಿದೆ.

Latest Videos

vuukle one pixel image
click me!