ಹೊಸ ವರ್ಷದ ಸಂದರ್ಭದಲ್ಲಿ, 31ರ ಆಚರಣೆಯನ್ನು ಪುರಸ್ಕರಿಸಿ ಅವರು ಅಭಿಮಾನಿಗಳಿಗೆ ಈ ಸಂದೇಶವನ್ನು ನೀಡಿರುವುದು ವಿಶೇಷ. ಡಿಸೆಂಬರ್ 31 ರಂದು (ಇಂದು) ಅನೇಕ ಯುವಕರು ಪಾರ್ಟಿಗಳು, ಮನರಂಜನೆ ಹೆಸರಿನಲ್ಲಿ ಮದ್ಯ, ಡ್ರಗ್ಸ್ ಸೇವಿಸುತ್ತಾರೆ. ಡ್ರಗ್ಸ್‌ಗೆ ದಾಸರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಭಾಸ್ ಈ ಸಂದೇಶ ನೀಡಿರುವುದು ವಿಶೇಷ. ಪ್ರಭಾಸ ಅವರ ಈ ಗುಣ ಅಭಿಮಾನಿಗಳನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಇದರಲ್ಲಿ ಪ್ರಭಾಸ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿಗಿಂತಲೂ ಸ್ಲಿಮ್ ಆಗಿದ್ದಾರೆ. ಪ್ರಭಾಸ್ ಹೊಸ ಲುಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.