ಕನ್ನಡ, ಮಲಯಾಲಂ, ತೆಲುಗು, ತಮಿಳು ಸಿನಿಮಾದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಹಿರಿಯ ನಟಿ ಊರ್ವಶಿ ಅವರ ಪುತ್ರಿ ಎಷ್ಟು ಚೆಂದ ಇದ್ದಾರೆ ಗೊತ್ತಾ? ಅಮ್ಮನನ್ನು ಮೀರಿಸುವಷ್ತು ರೂಪಸಿ ಈಕೆ.
ಬಾಲ ಕಲಾವಿದೆಯಾಗಿ ಎಂಟ್ರಿ ಕೊಟ್ಟು ಕನ್ನಡ, ಮಲಯಾಲಂ, ತೆಲುಗು, ತಮಿಳು ಸೇರಿ ದಕ್ಷಿಣದ ಚಿತ್ರರಂಗದ ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸಿ, ಇಂದು ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿರುವ ನಟಿ ಅಂದ್ರೆ ಅದು ನಟಿ ಊರ್ವಶಿ (Urvashi).
27
ಒಂದು ಕಾಲದಲ್ಲಿ ಊರ್ವಶಿಯ ಅಂದಕ್ಕೆ ಮನಸೋಲದರು ಯಾರೂ ಇರಲಿಲ್ಲ. ಅಷ್ಟೊಂದು ಸುಂದರಿಯಾಗಿದ್ದರು. ಇದೀಗ ಊರ್ವಶಿ ಪುತ್ರಿ ನಾಯಕಿಯಾಗಲು ತಯಾರಿ ನಡೆಸಿದ್ದು, ಅವರು ಕೂಡ ಅಮ್ಮನನ್ನೇ ಮೀರಿಸುವಷ್ಟು ಸುಂದರಿ ಯಾಗಿದ್ದಾರೆ. ಸದ್ಯ ಅಮ್ಮ ಮಗಳ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
37
ಊರ್ವಶಿ ಅವರು ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ಮಲಯಾಲಂ ನಟ ಮನೋಜ್ ಕೆ ಜಯನ್ (Manoj K Jayan) ಅವರನ್ನು ವಿವಾಹವಾದರು. ಆದರೆ ಮದುವೆಯಾದ ಹತ್ತು ವರ್ಷದಲ್ಲೇ ಈ ಜೋಡಿ ದೂರವಾಗಿದ್ದರು. ಈ ಜೋಡಿಯ ಪುತ್ರಿಯೇ ತೇಜ ಲಕ್ಷ್ಮೀ. ಮಗಳು ಸದ್ಯ ತಂದೆ ಜೊತೆ ವಾಸವಾಗಿದ್ದಾಳೆ.
ಊರ್ವಶಿ ಪುತ್ರಿ ತೇಜ ಲಕ್ಷ್ಮೀ (Teja Lakshmi)ಸಹ ತಾಯಿಯಂತೆ ಸುಂದರಿಯಾಗಿದ್ದು, ಸದ್ಯದಲ್ಲಿ ಸಿನಿಮಾಕ್ಕೆ ಎಂಟ್ರಿ ಕೊಡಲಿದ್ದಾರೆ. ಈಗಷ್ಟೆ ತಮ್ಮ ಉನ್ನತ ಶಿಕ್ಷಣ ಮುಗಿಸಿರುವ ತೇಜ ಲಕ್ಷ್ಮೀ ಸುಂದರಿಯಾವಳ್ ಸ್ಟೆಲ್ಲಾ’ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ.
57
ಅಮ್ಮ, ಅಪ್ಪ ಇಬ್ಬರೂ ಕೂಡ ಚಿತ್ರರಂಗದ ಸ್ಟಾರ್ ನಟರಾಗಿದ್ದು, ತೇಜಲಕ್ಷ್ಮೀ ಕೂಡ ಅವರದ್ದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಊರ್ವಶಿಯಂತೆ ಇವರೂ ಕೂಡ ಸ್ಟಾರ್ ನಟಿಯಾಗಿ ಬೆಳೆಯುತ್ತಾರಾ ಕಾದು ನೋಡಬೇಕು.
67
ತೇಜ ಲಕ್ಷ್ಮೀ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ತಂದೆಯ ಜೊತೆಗಿನ ಮುದ್ದಾದ ಫೋಟೊಗಳನ್ನು ಹೆಚ್ಚಾಗಿ ಶೇರ್ ಮಾಡುತ್ತಲೇ ಇರುತ್ತಾರೆ. ಜೊತೆಗೆ ತಮ್ಮ ಫ್ಯಾಮಿಲಿ ಜೊತೆಗಿನ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ.
77
ನಟಿ ಊರ್ವಶಿ ಇಂದಿಗೂ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟಿಯಾಗಿದ್ದಾರೆ. ಮನೋಜ್ ಕೆ ಜಯನ್ ಜೊತೆ ವಿಚ್ಚೇಧನ ಪಡೆದ ಬಳಿಕ ಊರ್ವಶಿ ಶಿವಪ್ರಸಾದ್ ಎನ್ನುವವರನ್ನು ಮದುವೆಯಾದರು. ಅವರಿಗೆ ಒಬ್ಬ ಮಗ ಕೂಡ ಇದ್ದಾನೆ.