ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸ್ತಿರೋ ಹರಿಹರ ವೀರಮಲ್ಲು ಸಿನಿಮಾಕ್ಕೋಸ್ಕರ ಫ್ಯಾನ್ಸ್ ಕಾಯ್ತಾ ಇದಾರೆ. ಪವನ್ ಕಡೆಯಿಂದ ಬರ್ತಿರೋ ಮೊದಲ ಪ್ಯಾನ್ ಇಂಡಿಯಾ ಮೂವಿ ಇದು. ಅಷ್ಟೇ ಅಲ್ಲ, ಪವನ್ ನಟಿಸ್ತಿರೋ ಮೊದಲ ಪೀರಿಯಾಡಿಕ್ ಸಿನಿಮಾ ಕೂಡಾ ಇದೇ. ಮಾರ್ಚ್ 28ಕ್ಕೆ ಈ ಚಿತ್ರ ತೆರೆಗೆ ತರೋಕೆ ಪ್ಲಾನ್ ಮಾಡಿದ್ರು. ಆದ್ರೆ ಇದುವರೆಗೂ ಆ ಸದ್ದು ಗದ್ದಲ ಶುರುವಾಗಿಲ್ಲ. ಆದ್ರೆ ಈ ಚಿತ್ರದ ಕಥೆ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು ಲೀಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.