'9 ಸೈಕೋಪಾತ್‌ಗಳ ಜೊತೆಗಿದ್ದೆ, ಇಲ್ಲಿ ಉಸಿರಾಡೋಕೂ ಹಣ ಚಾರ್ಜ್ ಮಾಡ್ತಾರೆ!' ಬಾಲಿವುಡ್ ಜರ್ನಿ ನೆನೆದ ನೋರಾ ಫತೇಹಿ

First Published | Apr 7, 2024, 4:55 PM IST

ನೋರಾ ಫತೇಹಿ ಬಾಲಿವುಡ್‌ನ ಅತ್ಯುತ್ತಮ ಡ್ಯಾನ್ಸರ್‌ಗಳಲ್ಲಿ ಒಬ್ಬರು. ಇಂದು ಬಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿರುವ ನೋರಾ ಕಡಿಮೆ ಸಮಯದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ.. ಜೊತೆಗೆ ಬಾಲಿವುಡ್‍ನಲ್ಲಿ ಈಗಿನ ಸ್ಥಾನ ತಲುಪಲು ತಾವು ಎದುರಿಸಿದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. 

ನೋರಾ ಫತೇಹಿ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು. ಚೆನ್ನಾಗಿ ಡ್ಯಾನ್ಸ್ ಬಲ್ಲ ನೋರಾ ಟಿವಿಯಲ್ಲಿ ಅನೇಕ ನೃತ್ಯ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿದ್ದಾರೆ. ಇತ್ತೀಚೆಗೆ ನೋರಾ ತನ್ನ ಕುಟುಂಬದ ಏಕೈಕ ಹಣ ಸಂಪಾದನೆ ಮಾಡುವವಳು ತಾನೊಬ್ಬಳೇ ಎಂದು ಬಹಿರಂಗಪಡಿಸಿದ್ದಾರೆ.

ಅಷ್ಟೇ ಅಲ್ಲ, ಬಾಲಿವುಡ್‌ನಲ್ಲಿ ಈಗಿರುವ ಸ್ಥಾನಕ್ಕೆ ತಲುಪುವ ಮುನ್ನ ತಾವು ಎದುರಿಸಿದ ಹಲವಾರು ಕಷ್ಟಕಾರ್ಪಣ್ಯಗಳನ್ನು ತೆರೆದಿಟ್ಟಿದ್ದಾರೆ. 

Latest Videos


ಕುಟುಂಬವು ಕಷ್ಟದಲ್ಲಿದ್ದುದರಿಂದ ತಾವು 16ನೇ ವರ್ಷಕ್ಕೇ ಸಂಪಾದನೆ ಆರಂಭಿಸಿದ್ದನ್ನು ನೆನೆಸಿಕೊಂಡ ನಟಿ, ತಾಯಿ ಹಾಗೂ ಸೋದರಿಯರ ತಮ್ಮಿಡೀ ಕುಟುಂಬಕ್ಕೆ ತಾವೊಬ್ಬರೇ ಹಣ ದುಡಿಯುವವರು ಎಂದು ಹೇಳಿದ್ದಾರೆ. 

 'ನಾನು ನನ್ನ ಕುಟುಂಬವನ್ನು ನೋಡಿಕೊಳ್ಳುತ್ತೇನೆ. ನನ್ನ ಕನಸುಗಳು ಮತ್ತು ನನ್ನ ಬಾಡಿಗೆ ಇತ್ಯಾದಿಗಳನ್ನು ಪಾವತಿಸುವ ಮನುಷ್ಯನಿಲ್ಲ. ನಾನು ನನ್ನ ತಾಯಿಯನ್ನು ನೋಡಿಕೊಳ್ಳುತ್ತೇನೆ, ನನ್ನ ಒಡಹುಟ್ಟಿದವರನ್ನು ನೋಡಿಕೊಳ್ಳುತ್ತೇನೆ, ನನ್ನ ಸ್ನೇಹಿತರನ್ನು ನೋಡಿಕೊಳ್ಳುತ್ತೇನೆ' ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

16 ನೇ ವಯಸ್ಸಿನಲ್ಲಿ ಸಂಪಾದಿಸಲು ಪ್ರಾರಂಭಿಸಿದ್ದರಿಂದ ತನ್ನ ಯೌವನವನ್ನು ಆನಂದಿಸಲು ಸಾಧ್ಯವಾಗಲಿಲ್ಲ ಎಂದಿರುವ ನಟಿ ಬಾಲಿವುಡ್‌ಗೆ ಬರುವ ಮುನ್ನ ಏಜೆಂಟ್‌ಗಳು, ರೂಂಮೇಟ್‌ಗಳಿಂದ ಅನುಭವಿಸಿದ ಕಷ್ಟವನ್ನು ತೆರೆದಿಟ್ಟಿದ್ದಾರೆ. 

'ಸತ್ಯಮೇವ್ ಜಯತೆ', 'ಬಾಟ್ಲಾ ಹೌಸ್', 'ಮಾರ್ಜಾವಾನ್' ಮತ್ತು 'ಥ್ಯಾಂಕ್ ಗಾಡ್' ನಂತಹ ಜನಪ್ರಿಯ ಚಿತ್ರಗಳಲ್ಲಿ ನೃತ್ಯದೊಂದಿಗೆ ಖ್ಯಾತಿ ಗಳಿಸಿರುವ ನಟಿಯು ಕೆನಡದಲ್ಲಿ ಹುಟ್ಟಿ ಬೆಳೆದಿದ್ದು. ಕೆನಡಾದಿಂದ ಬಾಂಬೆಗೆ ಬಂದಿಳಿದಾಗ ಕೈಲಿ 5000 ರೂ. ಇತ್ತು ಎಂದವರ ಹೇಳಿದ್ದಾರೆ. 

'ಜೇಬಿನಲ್ಲಿ ಕೇವಲ 5,000 ರೂಪಾಯಿ ಇಟ್ಟುಕೊಂಡು ಭಾರತಕ್ಕೆ ಬಂದಿದ್ದೆ. 1000 ಡಾಲರ್ ಹೇಗಿರುತ್ತದೆ ಎಂದೂ ನನಗೆ ತಿಳಿದಿರಲಿಲ್ಲ. ನಾನು ಮೂರು BHK ಅಪಾರ್ಟ್ಮೆಂಟ್ನಲ್ಲಿ ಒಂಬತ್ತು ಫ್ಲ್ಯಾಟ್‌ಮೇಟ್‌ಗಳೊಂದಿಗೆ ಇದ್ದೆ. ಅವರೆಲ್ಲರೂ ಸೈಕೋಪಾತ್‌ಗಳು. ಆ ಸಮಯದ ಬಗ್ಗೆ ನಾನು ಇನ್ನೂ ಆಘಾತಕ್ಕೊಳಗಾಗಿದ್ದೇನೆ, ' ಎಂದು ನೋರಾ ಹೇಳಿದ್ದಾರೆ. 

ಬಾಲಿವುಡ್‍‌ನ ಅಂಗಳ ತಲುಪಲು ಹಲವಾರು ಏಜೆನ್ಸಿಗಳು ಸಹಾಯ ಮಾಡುತ್ತೇವೆಂದು ಬಂದು ಹೇಗೆ ವಂಚಿಸುತ್ತಿದ್ದವು ಎಂದೂ ನೋರಾ ಹೇಳಿದ್ದಾರೆ. 'ಏಜೆನ್ಸಿಯು ಬಹಳಷ್ಟು ಹಣವನ್ನು ಕಡಿತಗೊಳಿಸುತ್ತದೆ ಮತ್ತು ಅತ್ಯಲ್ಪ ಸಂಬಳವನ್ನು ನೀಡುತ್ತಿತ್ತು. ಆಗ ನಾನು ಒಂದು ಮೊಟ್ಟೆ ಮತ್ತು ಬ್ರೆಡ್‌ನಿಂದ ಉಸಿರಾಡುತ್ತಿದ್ದೆ' 

'ಇದು ಒರಟು ಸಮಯವಾಗತ್ತು. ಹೋರಾಟವು ನಿಜವಾಗಿಯೂ ಕೆಟ್ಟದಾಗಿತ್ತು. ಅವರು ನಿಮಗೆ ಕಮಿಷನ್ ವಿಧಿಸುತ್ತಾರೆ ಮತ್ತು ಸಂಬಳದಲ್ಲೂ ಕಡಿತಗೊಳಿಸುತ್ತಾರೆ. ಉಸಿರಾಟಕ್ಕೂ ಹಣ ಕೇಳುತ್ತಾರೆ. ಈ ಏಜೆನ್ಸಿಗಳು ನಿಮ್ಮನ್ನು ದುರ್ಬಳಕೆ ಮಾಡಿಕೊಂಡರೂ ನಿಮ್ಮನ್ನು ರಕ್ಷಿಸಲು ಯಾವುದೇ ಕಾನೂನುಗಳಿಲ್ಲ' ಎಂದು ನೋರಾ ತಮ್ಮ ಕಷ್ಟದ ಸಮಯದ ಬಗ್ಗೆ ಮಾತನಾಡಿದ್ದಾರೆ. 

click me!