ರೂಪಕ್ಕಿಂತ ಮೀರಿದ ಕೌಶಲ್ಯ ಮತ್ತು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ನಾನು ನಿರ್ಧರಿಸಿದೆ. ಈಗ ಹಿಂದಿರುಗಿ ನೋಡಿದಾಗ, ಅಂದು ನಾನು ಆ ಸೌಂದರ್ಯದ ಚೌಕಟ್ಟಿಗೆ ಹೊಂದಿಕೊಳ್ಳದೇ ಇದ್ದದ್ದೇ ನನಗೆ ವರವಾಯಿತು ಎನಿಸುತ್ತದೆ. ಏಕೆಂದರೆ ಅದು ನನ್ನನ್ನು ರೂಪಕ್ಕಿಂತ ಮೀರಿದ ಶಕ್ತಿಯನ್ನು ಬೆಳೆಸಿಕೊಳ್ಳುವಂತೆ ಮಾಡಿತು," ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಸೋಷಿಯಲ್ ಮೀಡಿಯಾ ಮತ್ತು ಮಾನಸಿಕ ಆರೋಗ್ಯ:
ಒಬ್ಬ ಯಶಸ್ವಿ ಕಂಟೆಂಟ್ ಕ್ರಿಯೇಟರ್ ಆಗಿದ್ದರೂ, ನಿಹಾರಿಕಾ ಅವರಿಗೆ ಸೋಷಿಯಲ್ ಮೀಡಿಯಾದ ಕರಾಳ ಮುಖದ ಬಗ್ಗೆ ಅರಿವಿದೆ. ಸದಾ ಜನರ ಕಣ್ಣ ಮುಂದೆಯೇ ಇರಬೇಕು ಎನ್ನುವ ಒತ್ತಡದ ಬಗ್ಗೆ ಮಾತನಾಡುತ್ತಾ, "ಪ್ರತಿಯೊಬ್ಬರಿಗೂ ಸೋಷಿಯಲ್ ಮೀಡಿಯಾ ಎನ್ನುವುದು ವಿಭಿನ್ನವಾಗಿ ಕಾಡುತ್ತದೆ. ನೀವು ಇದರ ಆಳವಾದ ಸುಳಿಗೆ ಸಿಲುಕಿದರೆ, ಅದು ಖಂಡಿತವಾಗಿಯೂ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನನಗೂ ಕೂಡ ಹಲವು ಬಾರಿ ಈ ಒತ್ತಡ ಅನುಭವವಾಗಿದೆ. ಅಂತಹ ಸಮಯದಲ್ಲಿ ಒಂದು ಹೆಜ್ಜೆ ಹಿಂದೆ ಸರಿಯುವುದು ಮತ್ತು ನಿಮಗಾಗಿ ಸಮಯ ಮೀಸಲಿಡುವುದು ತುಂಬಾ ಮುಖ್ಯ," ಎಂದು ಅವರು ಕಿವಿಮಾತು ಹೇಳಿದ್ದಾರೆ.