ನೇಹಾ ಕಕ್ಕರ್ ತನ್ನ 33 ನೇ ಹುಟ್ಟುಹಬ್ಬವನ್ನು ಪತಿ ರೋಹನ್‌ಪ್ರೀತ್ ಸಿಂಗ್ ಅವರೊಂದಿಗೆ ಆಚರಿಸಿದ್ದಾರೆ.
ರೋಹನ್‌ಪ್ರೀತ್ ಆಯೋಜಿಸಿದ್ದ ಅಚ್ಚರಿಯ ಬರ್ತ್‌ಡೇ ಬ್ಯಾಷ್‌ನ ಫೋಟೋ ಹಂಚಿಕೊಂಡಿದ್ದಾರೆ ನಟಿ.
ಗಾಯಕಿ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಸ್ ಶೇರ್ ಮಾಡಿದ್ದಾರೆ.
ಮದುವೆಯಾದ ನಂತರ ತನ್ನ ಮೊದಲ ಹುಟ್ಟುಹಬ್ಬವನ್ನು ಆಚರಿಸುವ ಬಗ್ಗೆ ಮಾತನಾಡಿದ ನೇಹಾ, ರೋಹನ್‌ಪ್ರೀತ್ ತನ್ನ ಜನ್ಮದಿನವನ್ನು ಹೇಗೆ ವಿಶೇಷಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ನನ್ನ ರಾಜಕುಮಾರ ಚಾರ್ಮಿಂಗ್ ರೋಹನ್ ಪ್ರೀತ್ ಸಿಂಗ್ ಅವರೊಂದಿಗೆ ಮದುವೆಯಾದ ನಂತರ ನನ್ನ ಮೊದಲ ಜನ್ಮದಿನ ಎಂದಿದ್ದಾರೆ ನೇಹಾ.
ಅವನು ನನಗೆ ಕೊಟ್ಟಿರುವ ಎಲ್ಲವನ್ನು ನಾನು ನಿಮಗೆ ಹೇಳಲಾರೆ. ಇದು ನಿಜಕ್ಕೂ ನನ್ನ ಬೆಸ್ಟ್ ಬರ್ತ್ ಡೇ. ಸರ್ವಶಕ್ತ ದೇವರಿಗೆ ಧನ್ಯವಾದಗಳು ಎಂದಿದ್ದಾರೆ.
ನಾನು ಹಂಬಲಿಸುತ್ತಿರುವ ಪ್ರತಿಯೊಂದನ್ನೂ ನನಗೆ ತಂದುಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ ನೇಹಾ
ಶೋರೂಂ ತೆರೆದಿಲ್ಲ, ಎಲ್ಲವೂ ಕಷ್ಟ, ಏನು ಇಲ್ಲ .. ಆದರೂ ಅವನು ನನಗೆ ಇದೆಲ್ಲವನ್ನೂ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ ಎಂದಿದ್ದಾರೆ.
ನೇಹಾ ಪೋಷಕರು, ಹತ್ತಿರದ ಸಂಬಂಧಿಕರೂ ಇದ್ದರು.
ಚಂದದ ಡೆಕೊರೇಷನ್ ಮಾಡಿ ಬಗೆ ಬಗೆಯ ಕೇಕ್‌ಗಳನ್ನು ಸಿದ್ಧಪಡಿಸಲಾಗಿತ್ತು.
ನೇಹಾ ಬ್ಲಾಕ್ ಡ್ರೆಸ್‌ನಲ್ಲಿ ಮಿಂಚಿದ್ದರು.
Suvarna News