ಈ ವಯಸ್ಸಿನಲ್ಲಿಯೂ ಫುಲ್ ಫಿಟ್ ಆಗಿರುವ ನೀತು ಪ್ರತಿದಿನ 10,000 ಸ್ಟೆಪ್ಸ್ ಕಂಪ್ಲೀಟ್ ಮಾಡುತ್ತಾರೆ. ಎರಡು ಗಂಟೆಗಳಿಗೊಮ್ಮೆ ಆಹಾರಸೇವಿಸುತ್ತಾರೆ. ಸದಾ ಆ್ಯಕ್ಟಿವ್ ಆಗಿರುವುದು ಅವರ ಫಿಟ್‌ನೆಸ್ ಮಂತ್ರ.
undefined
ಅವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ, ದಾಲ್ಚಿನ್ನಿ ಮತ್ತು ತುಳಸಿತೆಗೆದುಕೊಳ್ಳುತ್ತಾರೆ. ನಂತರ ಸೇಬು ರಸ, ಎರಡು ತರದ ತರಕಾರಿಗಳು, ಸಲಾಡ್ ಮತ್ತು ಒಂದು ಬಟ್ಟಲು ಮೊಸರು ಊಟದೊಂದಿಗೆ ಸೇವಿಸುತ್ತಾರೆ.
undefined
ಚಹಾ ಜೊತೆ 5 ಬಾದಾಮಿ ಹಾಗೂ ರಾಜ್‌ಗಿರಿಚಿಕ್ಕಿ ಇವರ ಸ್ನಾಕ್ಸ್. ಡಿನ್ನರ್‌ಗೆ ಸೂಪ್ ಅಥವಾ ಕೆನೆ ತೆಗೆದ ಹಾಲು ಸೇವಿಸುತ್ತಾರೆ. ರಾತ್ರಿ ಕಡಿಮೆ ಸಕ್ಕರೆಯಡಾರ್ಕ್ ಚಾಕೋಲೇಟ್ ತಿನ್ನಲು ಇಷ್ಟಪಡುತ್ತಾರಂತೆ. ತುಪ್ಪ ಮತ್ತು ಬೆಣ್ಣೆಆವಾಯಿಡ್ ಮಾಡುತ್ತಾರೆ ನೀತೂ.
undefined
ನೀತು ತನ್ನನ್ನು ತಾನು ಸದೃಡವಾಗಿಡಲು ಸರಿಯಾದ ಟೈಮ್‌ಟೇಬಲ್ ಅನುಸರಿಸುತ್ತಾರೆ. ಕೆಲವು ವರ್ಷಗಳ ಹಿಂದೆ, ಸಂದರ್ಶನವೊಂದರಲ್ಲಿ ತಮ್ಮ ಫಿಟ್ನೆಸ್ ಬಗ್ಗೆ ಮಾತನಾಡಿದರು.
undefined
'ಚಿಕ್ಕವಳಿದ್ದಾಗ ಹೆಚ್ಚು ಫಿಟ್ ಆಗಿದ್ದೇನೆ ಎಂದು ಭಾವಿಸಿದ್ದೆ. ನಾನು ಸಿನಿಮಾ ಮಾಡುವಾಗ ನನ್ನ ತೂಕ 68 ಕೆಜಿ ಇದ್ದೆ. ಜೀನಾತ್ ಅಮನ್ ಮತ್ತು ಪರ್ವೀನ್ ಬಾಬಿ ಸ್ಲಿಮ್ ಬಾಡಿ ಕಲ್ಚರ್ ಅನ್ನುಬಾಲಿವುಡ್‌ಗೆ ತಂದರು' ಎಂದಿದ್ದರು ನಟಿ.
undefined
ಫಿಟ್ ಮತ್ತು ಆರೋಗ್ಯವಾಗಿರಲು ನೀತು ಸಿಂಗ್ ಯಾವಾಗಲೂ ಸಕ್ರಿಯವಾಗಿತ್ತಾರೆ. ವಾರ ಪೂರ್ತಿ ವರ್ಕೌಟ್ ಮಾಡುತ್ತಾರಂತೆ. ನೀತು ಪೈಲೇಟ್ಸ್ ಮ್ಯಾಟ್ ಯೋಗ, trx ಮಾಡುತ್ತಾರೆ.ಟ್ರೈನರ್ ಸಹಾಯದ ಜೊತೆ ವ್ಯಾಯಾಮವನ್ನೂ ಮಾಡುತ್ತಾರೆ ನಿತ್ಯ.
undefined
ನೀತು 1966ರ ಸೂರಜ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಈ ಅವಕಾಶವನ್ನು ಚಿತ್ರದ ನಟಿ ವೈಜಯಂತಿಮಾಲಾ ಕಲ್ಪಿಸಿಕೊಟ್ಟಿದ್ದರು. ಇದಲ್ಲದೆ 'ದಸ್ ಲಖ್', 'ವಾರಿಸ್', 'ಹೋಲಿ ಪಾಪಿ', 'ದೋ ಕಲಿಯನ್', 'ಘರ್ ಘರ್ ಕಾ ಕಹಾನಿ' ಚಿತ್ರಗಳಲ್ಲಿಯೂ ಬಾಲ ಕಲಾವಿದೆಯಾಗಿ ನಟಿಸಿದ್ದಾರೆ.
undefined
1973ರ ಚಲನಚಿತ್ರ 'ರಿಕ್ಷಾವಾಲಾ'ದಲ್ಲಿ ಪ್ರಮುಖ ನಟಿಯಾಗಿ ನೀತು ಇನ್ನಿಂಗ್ಸ್ ಪ್ರಾರಂಭಿಸಿದರು. 1975 ರ ಖೇಲ್ ಖೇಲ್ ಮೇ ಸಿನಿಮಾದಿಂದ ನಟಿಯನ್ನು ಜನ ಗುರುತಿಸಲು ಪ್ರಾರಂಭಿಸಿದರು.
undefined
ಜನವರಿ 22, 1980 ರಂದು ರಿಷಿ ಕಪೂರ್ ಮದುವೆಯಾದ ನಂತರ ಚಿತ್ರಗಳಲ್ಲಿ ನಟಿಸುವುದನ್ನು ಬಿಟ್ಟರು. 26 ವರ್ಷಗಳ ನಂತರ, 'ಲವ್ ಆಜ್ ಕಲ್' (2009) ಚಿತ್ರದೊಂದಿಗೆ ಮತ್ತೆ ಸಿನಿಮಾಕ್ಕೆ ಮರಳಿದರು ನೀತು. ಇದಲ್ಲದೆ ದೋ ದುನಿ ಚಾರ್ (2010), ಜಬ್ ತಕ್ ಹೈ ಜಾನ್ (2012), ಬೆಶರಾಮ್ (2013) ನಲ್ಲಿ ಕೆಲಸ ಮಾಡಿದರು.
undefined