ಛೋಲಿ ಕೆ ಪೀಚೆ ಹಾಡಿನ ಶೂಟಿಂಗ್‌ ಕಥೆ ಬಿಚ್ಚಿಟ್ಟ ನಟಿ ನೀನಾ ಗುಪ್ತಾ

First Published | Jul 8, 2020, 3:54 PM IST

ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ಅಭಿನಯದ ಚಿತ್ರ ಕಲ್‌ನಾಯಕ್ ಪ್ರಸಿದ್ಧ ಹಾಡು 'ಛೋಲಿ ಕೆ ಕ್ಯಾ ಹೈ'. ಈ ಹಾಡಿನ ಬಗ್ಗೆ ಹಲವು ಆಕ್ಷೇಪಗಳು ಕೇಳಿ ಬಂದರೂ, ಜನರ ಫೇವರೇಟ್ ಸಾಂಗ್ ಆಯಿತು. ಮಾಧುರಿ ದೀಕ್ಷಿತ್ ಅಲ್ಲದೇ, ನೀನಾ ಗುಪ್ತಾ ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸೂಪರ್‌ ಡೂಪರ್‌ ಹಿಟ್‌ ಹಾಡಿಗೆ ಕೊರಿಯೋಗ್ರಾಫ್‌ ಮಾಡಿದ್ದು ಸರೋಜ್ ಖಾನ್‌. ಇತ್ತೀಚೆಗೆ ಹೃದಯ ಸ್ತಂಭನದಿಂದ ನಿಧನರಾದರು. 61 ವರ್ಷದ  ನಟಿ ನೀನಾ ಸರೋಜ್ ಖಾನ್ ಮತ್ತು ಹಾಡಿಗೆ ಸಂಬಂಧಿಸಿದ ನೆನಪುಗಳನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಕಲ್‌ನಾಯಕ್‌ ಸಿನಿಮಾದ ಸೂಪರ್‌ ಹಿಟ್‌ ಸಾಂಗ್‌ ಚೋಲಿ ಕೆ ಪೀಚೆ ಹಾಡು ಹುಡುಗರ ನಿದ್ರೆ ಗೆಡಿಸಿತ್ತು.
ಹಲವು ವಿವಾದಗಳ ನಡುವೆಯೇ ಬಾರಿ ಫೇಮಸ್‌ ಆಗಿದ್ದ ಹಾಡು ಇದು.
Tap to resize

ಮಾಧುರಿ ದೀಕ್ಷಿತ್‌ ಜೊತೆ ಹಾಡಿಗೆ ಹೆಜ್ಜೆ ಹಾಕಿದ ನೀನಾ ಗುಪ್ತಾ ಸಹ ಮೆಚ್ಚುಗೆ ಗಳಿಸಿದ್ದರು.
ಇನ್ಸ್ಟಾಗ್ರಾಮ್‌ನಲ್ಲಿ ಸರೋಜ್ ಖಾನ್ ಮತ್ತು ಹಾಡಿಗೆ ಸಂಬಂಧಿಸಿದ ನೆನಪುಗಳನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ ಬಾದಾಯಿಹೋ' ನಟಿ.
ಶೇರ್‌ ಮಾಡಿರುವ ವೀಡಿಯೊದಲ್ಲಿ, ನೀನಾ ಟ್ರೆಂಡ್ ಡ್ಯಾನ್ಸರ್‌ ಅಲ್ಲದ ಕಾರಣಹಾಡಿನ ಚಿತ್ರೀಕರಣದ ಸಮಯದಲ್ಲಿ ಸಾಕಷ್ಟು ಕಷ್ಟಪಟ್ಟೆ, ಆದರೆ ಮಾಧುರಿ ದೀಕ್ಷಿತ್ ಮತ್ತು ಸರೋಜ್ ಖಾನ್ ಯಾವುದೇ ಸಮಸ್ಯೆಯನ್ನು ಎದುರಿಸದಂತೆ ಸಂಪೂರ್ಣ ಕಾಳಜಿ ವಹಿಸಿದರು ಎಂದಿದ್ದಾರೆ 61 ವರ್ಷದ ಬೋಲ್ಡ್‌ ನಟಿ.
'ಚೋಲಿ ಕೆ ಪೀಚೆ ಕ್ಯಾ ಹೆ' ಶೂಟಿಂಗ್‌ನ ಮೊದಲ ದಿನ ನಾನು ನರ್ವಸ್‌ ಆಗಿದ್ದೆ. ಸರೋಜ್ ಖಾನ್ ಬಹಳಷ್ಟು ದೊಡ್ಡ ದೊಡ್ಡ ಕಲಾವಿದರಿಗೆನೃತ್ಯ ಸಂಯೋಜಿಸಿದ್ದಾರೆ. ಎಂದು ಕೇಳಿದ್ದೆ. ನನ್ನ ಮುಂದೆ ಮಾಧುರಿ ದೀಕ್ಷಿತ್ ಇದ್ದರು, ಅವರು ಸ್ವತಃ ಬೆಸ್ಟ್‌ ನರ್ತಕಿ. ನಾನು ಇನ್ನೂ ಹೆಚ್ಚು ನರ್ವಸ್‌ ಆದೆ' ಎಂದು ನೀನಾ ಗುಪ್ತಾ ವಿಡಿಯೋದಲ್ಲಿ ಹೇಳಿದ್ದಾರೆ.
ಸರೋಜ್ ನೃತ್ಯದ ಸ್ಟೆಪ್ಸ್‌ ಹೇಳಿದಾಗ ನಾನು ಮತ್ತಷ್ಟು ಹೆದರಿದ್ದೆ.ಆದರೆ ಸರೋಜ್‌ ಸಪೋರ್ಟ್‌ ಮಾಡಿ ಈ ಮೂವ್ಸ್‌ ಸುಲಭವಾಗಿ ಮಾಡಬಹುದು, ಎಂದು ಹೇಳಿದರು ಎನ್ನುತ್ತಾರೆ ನೀನಾ.
ಸರೋಜ್ ತುಂಬಾ ಕಂಫರ್ಟಬಲ್‌ ಫೀಲ್‌ ಮಾಡಿಸಿದರು ಮತ್ತು ನಿಧಾನವಾಗಿ ಅವರು ನನ್ನಿಂದ ಏನು ಮಾಡಿಸಲು ಬಯಸುತ್ತಿದ್ದಾರೆ ಎಂದು ಅರ್ಥಮಾಡಿಕೊಂಡೆ, ಎಂದು ಸುಮಧುರ ನೆನಪನ್ನು ಮೆಲಕು ಹಾಕಿದ್ದಾರೆ ನೀನಾ.
ಇತ್ತೀಚೆಗೆ ನಿಧನರಾದ ಬಾಲಿವುಡ್ ಫೇಮಸ್‌ ನೃತ್ಯ ಸಂಯೋಜಕಿ ಸರೋಜ್ ಖಾನ್ 3 ಬಾರಿ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿದ್ದರು.
ಕ್ರಿಕೆಟಿಗ ವಿವಿಯನ್ ರಿಚರ್ಡ್ಸನ್ ಮಗಳಿಗೆ ನೀನಾ ತಾಯಿಯಾಗಿದ್ದಾರೆ.

Latest Videos

click me!