ನಯನತಾರಾ ಆರೋಪ ಪಬ್ಲಿಸಿಟಿ ಗಿಮಿಕ್ಕಾ? ಧನುಷ್ ಮೌನಕ್ಕೆ ಕಾರಣವೇನು?

First Published | Nov 17, 2024, 9:59 AM IST

ನಟಿ ನಯನತಾರಾ ಧನುಷ್ ಮೇಲೆ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಇದರ ಹಿಂದಿರುವ ಕಾರಣವೇನು?

ನಯನತಾರಾ, ಧನುಷ್

ತಮಿಳು ಚಿತ್ರರಂಗದಲ್ಲಿ ಮುಂಚೂಣಿ ನಟಿ ನಯನತಾರಾ. 2022 ರಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾದ ನಟಿ ನಯನತಾರಾ ಅವರ ಮದುವೆ ವಿಡಿಯೋ ಡಾಕ್ಯುಮೆಂಟರಿ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ಗೆ 25 ಕೋಟಿಗೆ ಮಾರಾಟವಾಗಿದೆ ಎಂಬ ಮಾಹಿತಿ ಇದೆ. 

ನಯನತಾರಾ ಹೇಳಿಕೆ

ಗೌತಮ್ ಮೆನನ್ ಈ ಮದುವೆ ಆಲ್ಬಂಗೆ ನಿರ್ದೇಶನ ಮಾಡಿದ್ದಾರೆ. ಮದುವೆಯಾಗಿ 2 ವರ್ಷವಾದರೂ ನಯನತಾರಾ ಹಾಗೂ ವಿಘ್ನೇಶ್ ಮದುವೆ ವಿಡಿಯೋ ಬಿಡುಗಡೆಯಾಗಿರಲಿಲ್ಲ. ನವೆಂಬರ್ 18 ರಂದು ನಯನತಾರಾ ಹುಟ್ಟುಹಬ್ಬದಂದು ವಿಡಿಯೋ ಬಿಡುಗಡೆ ಮಾಡುವುದಾಗಿ ನೆಟ್‌ಫ್ಲಿಕ್ಸ್ ಘೋಷಣೆ ಮಾಡಿದೆ.

Tap to resize

ನಯನತಾರಾ vs ಧನುಷ್

ಈ ಮದುವೆ ಡಾಕ್ಯುಮೆಂಟರಿಯ ಟ್ರೈಲರ್‌ನಲ್ಲಿ 'ನಾನುಂ ರೌಡಿಧಾನ್' ಸಿನಿಮಾದ 3 ಸೆಕೆಂಡ್ ವಿಡಿಯೋ ಇದೆ. ಇದಕ್ಕಾಗಿ ನಟ ಧನುಷ್ 10 ಕೋಟಿ ಪರಿಹಾರ ಕೇಳಿದ್ದಾರೆ. ಅನುಮತಿ ಪಡೆಯದೇ ವಿಡಿಯೋ ಬಳಸಿದ್ದಾರೆ ಎಂದು ಧನುಷ್ ಆರೋಪಿಸಿದ್ದಾರೆ.

ಧನುಷ್ ಮೌನ

ನಯನತಾರಾ ಧನುಷ್‌ರನ್ನು ಟೀಕಿಸಿ ಹೇಳಿಕೆ ನೀಡಿದ್ದಾರೆ. 3 ಸೆಕೆಂಡ್ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ 10 ಕೋಟಿ ವಿಡಿಯೋ ಫ್ರೀಯಾಗಿ ನೋಡಿ ಎಂದಿದ್ದಾರೆ. ಇತ್ತ ನಟಿಯರಾದ ಪಾರ್ವತಿ, ಅನುಪಮಾ, ಐಶ್ವರ್ಯ ಲಕ್ಷ್ಮಿ, ಐಶ್ವರ್ಯ ರಾಜೇಶ್ ನಯನತಾರಾಗೆ ಬೆಂಬಲ ಸೂಚಿಸಿದ್ದಾರೆ.

ಧನುಷ್, ನಯನತಾರಾ

ಆದರೆ ನಯನತಾರಾ ಹೇಳಿಕೆಗೆ ಧನುಷ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಡಾಕ್ಯುಮೆಂಟರಿಗೆ ಪ್ರಚಾರ ಸಿಗಲಿಲ್ಲ. ಹಾಗಾಗಿ ನಯನತಾರಾ ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಇದೇ ಕಾರಣಕ್ಕೆ ಧನುಷ್ ಸುಮ್ಮನಿದ್ದಾರಂತೆ.

ನೆಟ್ಟಿಗರಿಂದ ಟೀಕೆ

ಧನುಷ್ ಪ್ರತಿಕ್ರಿಯಿಸಿದರೆ ವಿವಾದ ಹೆಚ್ಚಾಗಿ ಡಾಕ್ಯುಮೆಂಟರಿಗೆ ಪ್ರಚಾರ ಸಿಗುತ್ತದೆ. ಅದಕ್ಕೆ ಧನುಷ್ ಸುಮ್ಮನಿದ್ದಾರೆ ಎಂಬ ವರದಿಗಳು ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಇತ್ತ ನೆಟ್ಟಿಗರು ಧನುಷ್‌ಗೆ ಬೆಂಬಲ ಸೂಚಿಸಿದ್ದಾರೆ. ನಯನತಾರ ಏನು ಡಾಕ್ಯುಮೆಂಟರಿ ಫ್ರೀಯಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.

Latest Videos

click me!