ತಮಿಳಿನಲ್ಲಿ ಮಾತ್ರವಲ್ಲದೆ ಹಿಂದಿ, ಮಲಯಾಳಂ, ತೆಲುಗು ಭಾಷೆಗಳಲ್ಲೂ ಬ್ಯುಸಿಯಾಗಿರುವ ಇವರು, ಈಗ ಅರ್ಧ ಡಜನ್ ಸಿನಿಮಾಗಳನ್ನು ಕೈಯಲ್ಲಿ ಹಿಡಿದಿದ್ದಾರೆ. ತಮಿಳಿನಲ್ಲಿ ನಟ ಕಾರ್ತಿ ಜೊತೆ 'ಸರ್ದಾರ್ 2' ಸಿನಿಮಾದಲ್ಲಿ ನಟಿಸುತ್ತಿರುವ ಮಾಳವಿಕಾ, ತೆಲುಗಿನಲ್ಲಿ ಪ್ರಭಾಸ್ ಜೊತೆ 'ರಾಜಾ ಸಾಬ್', ಹಿಂದಿಯಲ್ಲಿ ಒಂದು ಸಿನಿಮಾ ಹೀಗೆ ಬ್ಯುಸಿ ನಾಯಕಿಯಾಗಿ ಓಡಾಡುತ್ತಿದ್ದಾರೆ. ಇವರು 2016ರಲ್ಲಿ ತೆರೆಕಂಡ ನಾನು ಮತ್ತು ವರಲಕ್ಷ್ಮಿ ಎಂಬ ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ದೊಡ್ಡ ಹಿಟ್ ಅಗದಿದ್ದರು ಮಾಳವಿಕಾ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು.