ಬಿಸಿನೆಸ್ ಮ್ಯಾನ್ ಆಗಿ, ಅನ್ನಪೂರ್ಣ ಸ್ಟುಡಿಯೋಸ್‌ನ ಒಡೆಯನಾಗಿ, ನಟನಾಗಿ, ನಿರ್ಮಾಪಕನಾಗಿ, ಹೀಗೆ ಹಲವು ರೀತಿಯಲ್ಲಿ ನಾಗಾರ್ಜುನ ಸಂಪಾದಿಸುತ್ತಿದ್ದಾರೆ. ಸದ್ಯಕ್ಕೆ ಹೀರೋ ಆಗಿ ಸಿನಿಮಾಗಳನ್ನು ಮಾಡುತ್ತಲೇ.. ಮಲ್ಟಿ ಸ್ಟಾರರ್ ಮೂವೀಸ್‌ನಲ್ಲಿ ಮೇನ್ ಲೀಡ್ ಕ್ಯಾರೆಕ್ಟರ್‌ಗಳನ್ನು ಕೂಡ ಮಾಡುತ್ತಿದ್ದಾರೆ ನಾಗ್. ಇತ್ತೀಚೆಗೆ ಅವರು ರಜಿನಿಕಾಂತ್ ಕೂಲಿ ಸಿನಿಮಾದಲ್ಲಿ ವಿಲನ್ ಆಗಿ, ಧನುಷ್ ಕುಬೇರದಲ್ಲಿ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗೆ ಕಿಂಗ್ ಕಾಲಕಾಲಕ್ಕೆ ಪರಿಸ್ಥಿತಿಗಳಿಗೆ ತಕ್ಕಂತೆ ರೂಟ್ ಚೇಂಜ್ ಮಾಡುತ್ತಿದ್ದಾರೆ.