ಸಮಂತಾ, ಚೈತನ್ಯ 'ಏ ಮಾಯೇ ಚೇಸಾವೆ', 'ಆಟೋನಗರ್ ಸೂರ್ಯ', 'ಮಜಿಲಿ' ಸಿನಿಮಾಗಳಲ್ಲಿ ನಟಿಸಿದ್ರು. ನಮ್ಮ ಕುಟುಂಬದಲ್ಲಿ ಸಿನಿಮಾಗಳ ಬಗ್ಗೆ ಚರ್ಚೆ ಮಾಡ್ತೀವಿ ಅಂತ ನಾಗಾರ್ಜುನ ಒಂದು ಸಂದರ್ಶನದಲ್ಲಿ ಹೇಳಿದ್ರು. ಇಷ್ಟ ಆಗಿದ್ದು, ಆಗದೇ ಇರೋದನ್ನ ಮುಚ್ಚುಮರೆ ಇಲ್ಲದೆ ಹೇಳ್ತೀವಿ. ನಾನು ನಟಿಸಿದ ಸಿನಿಮಾ ಆದ್ರೂ, ಸಮಂತಗೆ ಇಷ್ಟ ಆಗದಿದ್ರೆ ಮುಖಕ್ಕೆ ಹೇಳ್ತಾಳೆ ಎಂಬುದನ್ನು ನಾಗಾರ್ಜುನ್ ಅವರೇ ಹೇಳಿಕೊಂಡಿದ್ದರು.