ನಟಿ ಸಮಂತಾ ಅವರಿಗೆ ವಿಚ್ಛೇದನ ನೀಡಿ ದೂರ ಆದ ಬಳಿಕ ನಾಗ ಚೈತನ್ಯ ಹೆಸರು ಮತ್ತೋರ್ವ ನಟಿ ಶೋಭಿತಾ ದುಲಿಪಾಲಾ ಅವರ ಜೊತೆ ಕೇಳಿಬರುತ್ತಿತ್ತು. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ, ಸಮಂತಾರಿಂದ ದೂರ ಆಗಿರುವ ನಾಗ್ ಶೋಭಿತಾ ಅವರನ್ನೇ ಮದುವೆ ಆಗ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಈ ಬಗ್ಗೆ ಇಬ್ಬರೂ ತುಟಿಬಿಚ್ಚಿರಲಿಲ್ಲ. ಇದೀಗ ಶೋಭಿತಾ ಮದುವೆ ಫೋಟೋ ಶೇರ್ ಮಾಡುವ ಮೂಲಕ ಶಾಕ್ ನೀಡಿದ್ದಾರೆ.