Raima Islam Dead Body Found: ನಾಪತ್ತೆಯಾಗಿದ್ದ ನಟಿ ಶವವಾಗಿ ಪತ್ತೆ, ಗಂಡ ಪೊಲೀಸ್ ವಶಕ್ಕೆ

Published : Jan 19, 2022, 11:50 AM IST

ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಬಾಂಗ್ಲಾದೇಶದ ನಟಿ ಶವವಾಗಿ ಪತ್ತೆಯಾಗಿದ್ದಾರೆ. ನಟಿಯ ಸಾವಿನ ಸಂಬಂಧ ಅವರ ಪತಿಯನ್ನು ವಶಕ್ಕೆ ಪಡೆಯಲಾಗಿದೆ.

PREV
17
Raima Islam Dead Body Found: ನಾಪತ್ತೆಯಾಗಿದ್ದ ನಟಿ ಶವವಾಗಿ ಪತ್ತೆ, ಗಂಡ ಪೊಲೀಸ್ ವಶಕ್ಕೆ

ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು ಅವರು ಢಾಕಾದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

27

ಆಕೆಯ ಶವ ಸೋಮವಾರ ಕೆರಣಿಗಂಜ್‌ನ ಹಜರತ್‌ಪುರ ಸೇತುವೆಯ ಬಳಿ ಗೋಣಿಚೀಲದಲ್ಲಿ ಪತ್ತೆಯಾಗಿದೆ. ಶಿಮು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಭಾನುವಾರ ಕಲಬಾಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

37

ಸ್ಥಳೀಯರು ಮಾಹಿತಿ ನೀಡಿದ ನಂತರ ಕೆರಣಿಗಂಜ್ ಮಾದರಿ ಠಾಣೆಯ ಪೊಲೀಸರ ತಂಡ ಮೃತದೇಹವನ್ನು ಹೊರತೆಗೆದಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

47

ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (ಎಸ್‌ಎಸ್‌ಎಂಸಿಎಚ್) ಪೋಸ್ಟ್ ಮಾರ್ಟಂ ನಡೆದಿದ್ದು, ತನಿಖೆ ನಡೆಯುತ್ತಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

57

45 ವರ್ಷದ ನಟಿ 1998 ರಲ್ಲಿ 'ಬರ್ತಮನ್' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ನಂತರ ಅವರು 25 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

67

ಅವರು ಬಾಂಗ್ಲಾದೇಶ ಚಲನಚಿತ್ರ ಕಲಾವಿದರ ಸಂಘದ ಸಹಾಯಕ ಸದಸ್ಯರಾಗಿದ್ದರು. ಚಲನಚಿತ್ರಗಳ ಜೊತೆಗೆ, ಅವರು ಟಿವಿ ನಾಟಕಗಳಲ್ಲಿ ಕೆಲಸ ಮಾಡಿದ್ದಾರೆ.

77

ರೈಮಾ ಇಸ್ಲಾಂ ಶಿಮು ಅವರ ಪತಿ ಶಖಾವತ್ ಅಲಿ ನೋಬಲ್ ಮತ್ತು ಅವರ ಚಾಲಕನನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

Read more Photos on
click me!

Recommended Stories