ಶೂಟಿಂಗ್ ನಡೀತಿರುವಾಗ ಮದ್ಯದಲ್ಲಿ ಮಳೆ ಬಂತು. ನಟ-ನಟಿಯರೆಲ್ಲಾ ಒಂದು ಕಡೆ ಕೂತ್ಕೊಂಡ್ರು. ಎಲ್ಲರಿಗೂ ಬೋರ್ ಆಗ್ತಿತ್ತು. ಚಿತ್ರತಂಡದಲ್ಲಿ ನನ್ನ ಫ್ರೆಂಡ್ ಒಬ್ಬ, ನಿಮಗೆ ಗೊತ್ತಾ ಇವನು ಚಿರಂಜೀವಿ, ಡ್ಯಾನ್ಸ್ ತುಂಬಾ ಚೆನ್ನಾಗಿ ಮಾಡ್ತಾನೆ ಅಂತ ಹೇಳ್ದ. ಟೈಮ್ ಪಾಸ್ಗೆ ಡ್ಯಾನ್ಸ್ ಮಾಡು ಅಂತ ಎಲ್ಲರೂ ಕೇಳಿದ್ರು. ಡ್ಯಾನ್ಸ್ ಅಂದ್ರೆ ನನಗೆ ಎಲ್ಲಿಲ್ಲದ ಉತ್ಸಾಹ ಬರುತ್ತೆ. ತಕ್ಷಣ ಟೇಪ್ ರೆಕಾರ್ಡರ್ ಆನ್ ಮಾಡಿ ಡ್ಯಾನ್ಸ್ ಶುರು ಮಾಡ್ದೆ. ಸಾವಿತ್ರಿ ಅವರು ಕೂಡ ನೋಡ್ತಿದ್ರು.